Dakshina KannadaDistrictsKarnatakaLatestMain Post

ಇಂದು ಮಂಗಳೂರಿನಲ್ಲಿ ಸ್ವಾತಂತ್ರ್ಯ ಸೇನಾನಿ ಕೆದಂಬಾಡಿ ರಾಮಯ್ಯಗೌಡರ ಪ್ರತಿಮೆ ಅನಾವರಣ

ಮಂಗಳೂರು: ಸ್ವಾತಂತ್ರ್ಯ ಸಮರ ಸೇನಾನಿ ಕೆದಂಬಾಡಿ ರಾಮಯ್ಯ ಗೌಡ (Kedambadi Ramaiah Gowda) ರ ಕಂಚಿನ ಪ್ರತಿಮೆ ಇಂದು ಮಂಗಳೂರಿನಲ್ಲಿ ಲೋಕಾರ್ಪಣೆಗೊಳ್ಳಲಿದೆ. ಸಿಎಂ ಬೊಮ್ಮಾಯಿ (Basavaraj Bommai) ಲೋಕಾರ್ಪಣೆ ಮಾಡಲಿದ್ದು ಸ್ವಾಮೀಜಿಗಳು, ಕೇಂದ್ರ, ರಾಜ್ಯದ ಸಚಿವರುಗಳೂ ಭಾಗಿಯಾಗಲಿದ್ದಾರೆ. ಬ್ರಿಟಿಷರ ಧ್ವಜ ಕಿತ್ತೆಸೆದು, ಭಾರತದ ಬಾವುಟವನ್ನು ಹಾರಿಸಿದ ಇಂದಿನ ಬಾವುಟಗುಡ್ಡೆಯ ಟಾಗೋರ್ ಪಾರ್ಕ್‍ಲ್ಲೇ ಪ್ರತಿಮೆ ನಿರ್ಮಿಸಲಾಗಿದ್ದು ಪಾಳು ಬಿದ್ದಿದ್ದ ಪಾರ್ಕ್‍ಗೂ ಮರು ಜೀವಬಂದಿದೆ.

ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರಿಗೆ ಗೌರವ ಸಲ್ಲಿಸುವ ಹಿನ್ನಲೆಯಲ್ಲಿ ಸ್ವಾತಂತ್ರ್ಯದ 75 ನೇ ವರ್ಷದ ಸಂಭ್ರಮಾಚರಣೆಯಲ್ಲಿ ಅವರ ಪ್ರತಿಮೆ ಸ್ಥಾಪಿಸಲಾಗಿದೆ. ಸುಳ್ಯದಿಂದ ರೈತರ ಸೈನ್ಯ ಕಟ್ಟಿಕೊಂಡು ಮಂಗಳೂರುವರೆಗೂ ಬ್ರಿಟಿಷರನ್ನು ಹಿಮ್ಮೆಟ್ಟಿಸಿದ ರಾಮಯ್ಯಗೌಡರ ಪ್ರತಿಮೆಯನ್ನ ಇಂದು ಸಿಎಂ ಬೊಮ್ಮಾಯಿ ಅನಾವರಣ ಮಾಡಲಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್‌ನಲ್ಲಿ ಆರ್ಥಿಕ ಬಿಕ್ಕಟ್ಟು – ತೆರಿಗೆ ಹೆಚ್ಚಿಸಿ ವೆಚ್ಚ ಕಡಿತಕ್ಕೆ ಮುಂದಾದ ಸರ್ಕಾರ

ಮಂಗಳೂರಿನ ಹೃದಯ ಭಾಗದಲ್ಲಿರುವ ಬಾವುಟ ಗುಡ್ಡೆಯ ಟಾಗೋರ್ ಪಾರ್ಕ್ (Tagore Park) ನಲ್ಲಿ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಸ್ವಾತಂತ್ರ್ಯದ 75 ನೇ ವರ್ಷಾಚರಣೆ ಹಿನ್ನಲೆಯಲ್ಲಿ ಪ್ರತಿಮೆ ಲೋಕಾರ್ಪಣೆ ಮಾಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ಆದಿ ಚುಂಚನಗಿರಿಯ ಡಾ.ನಿರ್ಮಲಾನಂದ ಶ್ರೀಗಳು, ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಸಚಿವ ಅಶ್ವಥ್ ನಾರಾಯಣ್ ಸೇರಿದಂತೆ ಇನ್ನಿತರರು ಭಾಗಿಯಾಗಲಿದ್ದಾರೆ.

ರಾಮಯ್ಯ ಗೌಡರು ಭಾರತದ ಬಾವುಟವನ್ನು ಹಾರಿಸಿದ ಬಾವುಟ ಗುಡ್ಡೆಯ ಟಾಗೋರ್ ಪಾರ್ಕ್ ನಿರ್ವಹಣೆ ಇಲ್ಲದೆ ಪಾಳು ಬಿದ್ದಿತ್ತು. ಇದೀಗ ಪ್ರತಿಮೆ ಅನಾವರಣ ಮಾಡುವ ಹಿನ್ನೆಲೆಯಲ್ಲಿ ಪಾರ್ಕ್ ಗೂ ಹೊಸ ಕಳೆ ಬಂದಿದೆ. ಜಿಲ್ಲಾಡಳಿತ ಹಾಗೂ ಪಾಲಿಕೆ ಪ್ರತಿಮೆ ಹಾಗೂ ಪಾರ್ಕ್‍ನ ನಿರ್ಮಾಣದ ಕೆಲಸ ಮಾಡಿದ್ದು, ಯಾವುದೇ ತೊಂದರೆಯಾಗದಂತೆ ನಿರ್ವಹಣೆ ಮಾಡಲು ಪಾಲಿಕೆಗೆ ಜವಾಬ್ದಾರಿ ನೀಡಲಾಗಿದೆ.

ಒಟ್ಟಿನಲ್ಲಿ ಸ್ವಾತಂತ್ರ್ಯಕ್ಕಾಗಿ ಸಾಕಷ್ಟು ಹೋರಾಟಗಾರರು ಹೋರಾಡಿ ಬಲಿದಾನ ಮಾಡಿದ್ರೂ ಹೆಚ್ಚಿನವರಿಗೆ ತಿಳಿದಿಲ್ಲ. ಹೀಗಾಗಿ ಸರ್ಕಾರ ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಹಿನ್ನಲೆಯಲ್ಲಿ ಇಂತಹ ಅಪ್ರತಿಮ ಹೋರಾಟಗಾರರನ್ನು ನೆನಪಿಸುತ್ತಿರೋದು ಶ್ಲಾಘನೀಯ.

Live Tv

Leave a Reply

Your email address will not be published. Required fields are marked *

Back to top button