ಮೈಸೂರಿನ (Mysore) ಎಚ್.ಡಿ. ಕೋಟೆ ರಸ್ತೆಯ, ಉದ್ಭರ್ ಗೇಟ್ ಬಳಿ ಇರುವ ಹಾಲಾಳು ಗ್ರಾಮದಲ್ಲಿ ನಿರ್ಮಾಣವಾದ ಡಾ.ವಿಷ್ಣುವರ್ಧನ್ (Vishnuvardhan) ಸ್ಮಾರಕ (Memorial) ಉದ್ಘಾಟನೆಯನ್ನು (Inauguration) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಅವರು ನಾಳೆ ಮಾಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಲೋಕಾರ್ಪಣೆ ಆಗಲಿರುವ ಸ್ಮಾರಕದಲ್ಲಿ ವಿಷ್ಣುವರ್ಧನ್ ಅವರ ಪುತ್ಥಳಿ ಕೂಡ ಇದ್ದು, ಅದರೊಂದಿಗೆ ವಿಷ್ಣು ಪತ್ನಿ ಭಾರತಿ ಅವರು ಫೋಟೋಗೆ ಪೋಸ್ ನೀಡಿದ್ದಾರೆ.
Advertisement
2020ರ ಸೆ.15ರಂದು ಸ್ಮಾರಕ ನಿರ್ಮಾಣಕ್ಕೆ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವರ್ಚುವೆಲ್ ಆಗಿ ಭೂಮಿ ಪೂಜೆಯನ್ನು ನೆರವೇರಿಸಿದ್ದರು. ಬರೋಬ್ಬರಿ 11 ಕೋಟಿ ವೆಚ್ಚದಲ್ಲಿ ಈ ಸ್ಮಾರಕ ನಿರ್ಮಾಣವಾಗಿದ್ದು, ಪೊಲೀಸ್ ವಸತಿ ನಿಗಮವು ಇದರ ಉಸ್ತುವಾರಿ ವಹಿಸಿಕೊಂಡಿತ್ತು. 5 ಎಕರೆ ಜಾಗದಲ್ಲಿ ಈ ಸ್ಮಾರಕ ನಿರ್ಮಾಣವಾಗಿದೆ. ಒಟ್ಟು 27 ಸಾವಿರ ಚದರಡಿಯಲ್ಲಿ ಸ್ಮಾರಕದ ಕಟ್ಟಡ ತಲೆಯೆತ್ತಿದೆ. ಇದನ್ನೂ ಓದಿ: ಪೇಪರ್ ಡ್ರೆಸ್ ಧರಿಸಿ ಮಿಂಚಿದ ʻಬಿಗ್ ಬಾಸ್ʼ ಖ್ಯಾತಿಯ ನಿವೇದಿತಾ ಗೌಡ
Advertisement
Advertisement
ಸ್ಮಾರಕ ಕಟ್ಟಡದಲ್ಲಿ ಎರಡು ಎಕರೆಯಲ್ಲಿ ತಳಮಹಡಿ, ನೆಲಮಹಡಿ ಹಾಗೂ ವಿಷ್ಣುವರ್ಧನ್ ನಿಂತಿರುವ ಭಂಗಿಯ ಪ್ರತಿಮೆ, ಸಭಾಂಗಣ, ಕಲಾವಿದರ ಕೊಠಡಿ, ತರಗತಿ ಕೊಠಡಿಗಳು ಹೀಗೆ ನಾನಾ ಕಟ್ಟಡಗಳನ್ನು ಅದು ಒಳಗೊಂಡಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ವಿಷ್ಣು ಪ್ರತಿಮೆಯು ಕೂಡ ಪ್ರವಾಸಿಗರನ್ನು ಕೈ ಬೀಸಿ ಕರೆಯುವಂತಿದೆ. ಅಲ್ಲದೇ, ವಿಷ್ಣುವರ್ಧನ್ ಅವರ ಚಿತಾಭಸ್ಮವನ್ನು ಇಲ್ಲಿಯೇ ತಂದಿಡಲಾಗುತ್ತದೆ.
Advertisement
ಇಂಥದ್ದೊಂದು ಸ್ಮಾರಕಕ್ಕಾಗಿ ವಿಷ್ಣುವರ್ಧನ್ ಕುಟುಂಬ ಮತ್ತು ವಿಷ್ಣು ಅಭಿಮಾನಿಗಳು ಸತತ ಹೋರಾಟ ಮಾಡುತ್ತಲೇ ಬಂದರು. ವಿಷ್ಣುವರ್ಧನ್ ಅವರ ಸಮಾಧಿಯ ಜಾಗದಲ್ಲೇ ಸ್ಮಾರಕವನ್ನು ನಿರ್ಮಾಣ ಮಾಡಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆಯಾಗಿತ್ತು. ಸ್ಮಾರಕ ನಿರ್ಮಾಣಕ್ಕಾಗಿ 2010-11ರ ಬಜೆಟ್ ನಲ್ಲಿ 11 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿತ್ತು. ಆದರೆ, ಅಭಿಮಾನ ಸ್ಟುಡಿಯೋ ಜಾಗ ಕೋರ್ಟ್ ನಲ್ಲಿ ಇರುವ ಕಾರಣದಿಂದಾಗಿ ಅಲ್ಲಿ ಸಾಧ್ಯವಾಗಲಿಲ್ಲ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k