ಬೆಂಗಳೂರು: ಬರ ಪರಿಸ್ಥಿತಿ (Drought) ಅಧ್ಯಯನಕ್ಕೆ ಬಿಜೆಪಿಯ 17 ತಂಡಗಳು ರಾಜ್ಯದ ಎಲ್ಲ 33 ಜಿಲ್ಲೆಗಳಿಗೆ ಪ್ರವಾಸ ಮಾಡಲಿವೆ ಎಂದು ಬಿಜೆಪಿ (BJP) ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್ (N Ravikumar) ಅವರು ತಿಳಿಸಿದರು.
ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು (ಸೋಮವಾರ) ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪ್ರತಿಯೊಂದು ತಂಡ 2 ಜಿಲ್ಲೆಗಳಿಗೆ ಭೇಟಿ ಕೊಡಲಿದೆ. ಯಡಿಯೂರಪ್ಪನವರ ತಂಡ ತುಮಕೂರು, ಮಧುಗಿರಿ, ಬೆಂಗಳೂರಿನ ಪ್ರವಾಸ ಮಾಡಲಿದೆ. ನಳಿನ್ ಕುಮಾರ್ ಕಟೀಲ್ ಅವರ ತಂಡವು ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಗೆ ಭೇಟಿ ಕೊಡಲಿದೆ. ಸಿಟಿ ರವಿಯವರ ತಂಡವು ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ತೆರಳುತ್ತಿದೆ ಎಂದರು.
Advertisement
Advertisement
ಈಶ್ವರಪ್ಪ- ಬಳ್ಳಾರಿ, ಕೊಪ್ಪಳ; ಸದಾನಂದಗೌಡರ ತಂಡ- ಮಂಡ್ಯ, ಹಾಸನ; ಗೋವಿಂದ ಕಾರಜೋಳ ಅವರು- ಧಾರವಾಡ ಮತ್ತು ವಿಜಯನಗರ; ಬಸನಗೌಡ ಪಾಟೀಲ್ ಯತ್ನಾಳ್ ಮೈಸೂರು, ಚಾಮರಾಜನಗರ ಹೀಗೆ ವಿವಿಧ ತಂಡಗಳು ವಿವಿಧ ಜಿಲ್ಲೆಗಳಿಗೆ ತೆರಳುತ್ತಿವೆ ಎಂದು ವಿವರ ನೀಡಿದರು.
Advertisement
ನವೆಂಬರ್ 10ರಂದು ಬರ ಪರಿಸ್ಥಿತಿ ಸಂಬಂಧ ವರದಿಯನ್ನು ಬಿಡುಗಡೆ ಮಾಡಲಿದ್ದು, ಅದನ್ನು ಸರ್ಕಾರಕ್ಕೆ ಸಲ್ಲಿಸಲಿದ್ದೇವೆ. ಬರದ ಕುರಿತು ಚರ್ಚೆಗೆ ಅಧಿವೇಶನದಲ್ಲಿ ವಿಶೇಷ ಸಮಯ ನಿಗದಿಗೆ ಒತ್ತಾಯಿಸಲಾಗುತ್ತದೆ. ರಾಜ್ಯದ ಅಣೆಕಟ್ಟುಗಳಲ್ಲಿ ನೀರಿಲ್ಲ. ಜಮೀನುಗಳು ಒಡೆದು ಹೋಗಿವೆ. ಕುಡಿಯುವ ನೀರು ಲಭಿಸುತ್ತಿಲ್ಲ. ಟ್ಯಾಂಕರ್‌ಗಳಲ್ಲಿ ನೀರು ಪೂರೈಸುವ ಪರಿಸ್ಥಿತಿ ಇದೆ. ವಿದ್ಯುತ್ ದುಬಾರಿಯಾಗಿದೆ. ಸಣ್ಣ ಕೈಗಾರಿಕೆಗಳು ಬಂದ್ ಆಗಿವೆ ಎಂದು ಹೇಳಿದರು.
Advertisement
ಬೋರ್‌ವೆಲ್‌ಗಳು ಬತ್ತಿ ಹೋಗಿವೆ. ನೀರಿದ್ದರೂ ಅದನ್ನು ಸರಬರಾಜು ಮಾಡಲು ವಿದ್ಯುತ್ ಇಲ್ಲ. ಎಪಿಎಂಸಿಗಳಿಗೆ ಸಂಪೂರ್ಣ ವ್ಯಾಪಾರ ಇಲ್ಲವಾಗಿದೆ. ಇದು ಸೇರಿ ಗೋಶಾಲೆಗಳಿಗೆ ಭೇಟಿ ಮಾಡಲು 17 ತಂಡಗಳನ್ನು ಪಕ್ಷವು ನಿಯೋಜಿಸಿದೆ ಎಂದು ತಿಳಿಸಿದರು. ಇದನ್ನೂ ಓದಿ: ಹೀಗೆ ಆದ್ರೆ ಮುಂದೆ ಕುಡಿಯೋಕು ಸಹ ನೀರು ಇರಲ್ಲ: ಕಾವೇರಿ ಹೋರಾಟದಲ್ಲಿ ಅಜ್ಜಿ ಕಣ್ಣೀರು
ಬಿಎಸ್ ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್, ಸಿಟಿ ರವಿ, ವಿಜಯೇಂದ್ರ, ಅರವಿಂದ ಬೆಲ್ಲದ, ಶ್ರೀರಾಮುಲು, ಕೆಎಸ್ ಈಶ್ವರಪ್ಪ, ಅರವಿಂದ ಲಿಂಬಾವಳಿ, ಬಸನಗೌಡ ಪಾಟೀಲ್ ಯತ್ನಾಳ್, ಅರಗ ಜ್ಞಾನೇಂದ್ರ, ಸುನೀಲ್ ಕುಮಾರ್, ವಿಶ್ವೇಶ್ವರ ಹೆಗಡೆ ಕಾಗೇರಿ, ಆರ್ ಅಶೋಕ್, ಕೋಟ ಶ್ರೀನಿವಾಸ ಪೂಜಾರಿ, ಗೋವಿಂದ ಕಾರಜೋಳ, ಡಿವಿ ಸದಾನಂದ ಗೌಡರ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ. ರಾಜ್ಯದ ಎಲ್ಲ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಈ ತಂಡದಲ್ಲಿ ಇರುತ್ತಾರೆ. ಎಲ್ಲ 33 ಜಿಲ್ಲೆಗಳಿಗೆ 17 ತಂಡಗಳು ಪ್ರವಾಸ ಮಾಡಲಿವೆ ಎಂದು ತಿಳಿಸಿದರು.
ಕಲೆಕ್ಷನ್ ಸರ್ಕಾರ:
ತೀವ್ರ ಬರ ಪರಿಸ್ಥಿತಿ ಇದ್ದರೂ ಕಲೆಕ್ಷನ್ ಮಾಡುವುದನ್ನು ಸರ್ಕಾರ ನಿಲ್ಲಿಸಿಲ್ಲ. ಇದೊಂದು ಎಟಿಎಂ ಸರ್ಕಾರ. ಇದೊಂದು ಲೂಟಿ ಸರ್ಕಾರ. ವರ್ಗಾವಣೆ ದಂಧೆ ನಿರಂತರವಾಗಿ ನಡೆಯುತ್ತಿದೆ ಎಂದು ಎಂದು ರವಿಕುಮಾರ್ ಟೀಕಿಸಿದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ನಡೆಸಿದ ಎಫ್‌ಡಿಎ ಪರೀಕ್ಷೆಯಲ್ಲಿ 20 ಜನರಿಗೆ ನಿಗದಿತ ಅವಧಿಗೆ ಬದಲಿಗೆ ಒಂದು ಗಂಟೆ ಹೆಚ್ಚುವರಿ ಅವಧಿಯನ್ನು ನೀಡಿದ್ದು ಯಾಕೆ? ಎಂದು ಕೇಳಿದ ಅವರು, ಈ ಸಂಬಂಧ 9 ಜನರನ್ನು ಮಾತ್ರ ಬಂಧಿಸಲಾಗಿದೆ. ಯಾಕೆ ಆರ್‌ಡಿ ಪಾಟೀಲ್ ಬಂಧಿಸಿಲ್ಲ? ನಿಮ್ಮ ಕಾರ್ಯಕರ್ತನೆಂದು ಬಂಧಿಸಿಲ್ಲವೇ ಎಂದು ಕೇಳಿದರು. ಈ ವಿಷಯವನ್ನು ಬಿಜೆಪಿ ಗಂಭೀರವಾಗಿ ತೆಗೆದುಕೊಳ್ಳಲಿದೆ. ಕೂಡಲೇ ಆರೋಪಿಗಳೆಲ್ಲರನ್ನು ಬಂಧಿಸಿ ಎಂದು ಅವರು ಆಗ್ರಹಿಸಿದರು. ಕಲಬುರಗಿ, ಯಾದಗಿರಿಯಲ್ಲಿ ಪ್ರತಿಭಟನೆ ಮಾಡಲಾಗುತ್ತದೆ ಎಂದ ಅವರು, ಅಧಿಕಾರಿಗಳು, ಸಚಿವರ ಸಹಕಾರ ಇಲ್ಲದೆ ಹೀಗಾಗಲು ಸಾಧ್ಯವಿಲ್ಲ ಎಂದು ಆರೋಪಿಸಿದರು. ಇದರ ಬಗ್ಗೆ ಸಮಗ್ರ ತನಿಖೆ ಮಾಡಿಸಲು ಒತ್ತಾಯಿಸಿದರು. ಈ ಕುರಿತು ಅಧ್ಯಯನಕ್ಕೆ ತಂಡವೊಂದು ಕಲಬುರಗಿಗೆ ತೆರಳಲಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಮುಂದಿನ 15 ದಿನ ನಿತ್ಯ ತಮಿಳುನಾಡಿಗೆ 2,600 ಕ್ಯೂಸೆಕ್ ನೀರು ಬಿಡಿ – ಕರ್ನಾಟಕಕ್ಕೆ CWRC ನಿರ್ದೇಶನ
Web Stories