ಸಿಎಂ, ತುಕಾರಾಂ ರಾಜೀನಾಮೆಗೆ ಒತ್ತಾಯಿಸಿ ಎಸ್ಟಿ ಮೋರ್ಚಾ ರಾಜ್ಯಾದ್ಯಂತ ಹೋರಾಟ- ಬಂಗಾರು ಹನುಮಂತು

Public TV
1 Min Read
CM siddaramaiah and tukaram

ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣದಲ್ಲಿ (Valmiki Scam) ಸಿಎಂ ಸಿದ್ದರಾಮಯ್ಯ (CM Siddaramaih) ಮತ್ತು ಸಂಸದ ತುಕಾರಾಂ ರಾಜೀನಾಮೆಗೆ ಒತ್ತಾಯಿಸಿ ನಾಳೆಯಿಂದ ಜಿಲ್ಲಾ ಮಟ್ಟದಲ್ಲಿ ಬಿಜೆಪಿ ಎಸ್‌ಟಿ ಮೋರ್ಚಾ (BJP ST Morcha) ಹೋರಾಟ ಹಮ್ಮಿಕೊಂಡಿದೆ ಎಂದು ಬಿಜೆಪಿ ಎಸ್‌ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು (Bangaru Hanumanthu) ತಿಳಿಸಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ವಾಲ್ಮೀಕಿ ನಿಗಮದಲ್ಲಿ ಅಕ್ರಮವಾಗಿದೆ ಎಂದು ಇಡಿ ಚಾರ್ಜ್ಶೀಟ್ ಹಾಕಿದೆ. ತುಕಾರಾಂ ಅವರ ಚುನಾವಣೆಗೆ ನಿಗಮದ ಹಣ ಬಳಕೆ ಆಗಿದೆ ಎಂದು ಇಡಿ ಹೇಳಿದೆ. ತುಕಾರಾಂ ಅವರಿಗೆ ಸಮಾಜದ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಸಂಸತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಚುನಾವಣೆ ಸಮಯದಲ್ಲಿ ಪ್ರತಿ ಮತಕ್ಕೆ 200 ರೂ. ಕೊಟ್ಟಿದ್ದಾರೆ. ಪ್ರತಿ ಬೂತ್‌ಗೆ 25 ಸಾವಿರ ರೂ. ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.ಇದನ್ನೂ ಓದಿ: ಬರಲಿದೆ ವಿಜಯ್ ಸೇತುಪತಿ, ತ್ರಿಷಾ ನಟನೆಯ ’96’ ಚಿತ್ರದ ಸೀಕ್ವೆಲ್

ನಾಗೇಂದ್ರ ಅವರ ಮೇಲೆ ಒತ್ತಡ ಹಾಕಿ ನಿಗಮದ ಹಣವನ್ನು ರಾಹುಲ್ ಗಾಂಧಿ, ಸಿದ್ದರಾಮಯ್ಯ ಚುನಾವಣೆಗೆ ಬಳಕೆ ಮಾಡಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಕೂಡಾ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ನಾಳೆಯಿಂದ ಜಿಲ್ಲಾ ಕೇಂದ್ರಗಳಲ್ಲಿ ಎಸ್‌ಟಿ ಮೋರ್ಚಾದಿಂದ ಪ್ರತಿಭಟನೆ ಮಾಡುತ್ತಿದ್ದೇವೆ. ತುಕಾರಾಂ ಅವರ ಸಂಸತ್ ಸದಸ್ಯ ಸ್ಥಾನ ರದ್ದು ಮಾಡಲು ಚುನಾವಣೆ ಆಯೋಗಕ್ಕೆ ಮನವಿ ಮಾಡುತ್ತೇವೆ. ಮುಂದಿನ ಮಂಗಳವಾರ ತುಕಾರಾಂ ವಿರುದ್ಧ ಸಂಡೂರಿನಲ್ಲಿ ಪ್ರತಿಭಟನೆ ಮಾಡುತ್ತೇವೆ. ಕೂಡಲೇ ಸಂಸತ್ ಸ್ಥಾನಕ್ಕೆ ತುಕಾರಾಂ ರಾಜೀನಾಮೆ ಕೊಡಬೇಕು ಎಂದರು.ಇದನ್ನೂ ಓದಿ: ಮಮತಾ ಬ್ಯಾನರ್ಜಿ ಡ್ರಾಮಾ ಬಿಟ್ಟು ರಾಜೀನಾಮೆ ನೀಡೋದೆ ಒಳ್ಳೇದು – ಜೋಶಿ ಟೀಕೆ

Share This Article