ನ.20ಕ್ಕೆ ರಾಜ್ಯಾದ್ಯಂತ ಬಾರ್ ಬಂದ್

Public TV
2 Min Read
Alcoholic Drink copy

ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ (Department of Excise) ಭ್ರಷ್ಟಾಚಾರ, ಲಂಚ ಸ್ವೀಕಾರ ಮಿತಿ ಮೀರಿದೆ. ಇದನ್ನು ಖಂಡಿಸಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮದ್ಯ ಮಾರಾಟಗಾರರ ಒಕ್ಕೂಟ (Karnataka Wine Merchants’ Association)  ನ.20ರಂದು ಮದ್ಯ ಬಂದ್‌ಗೆ ಕರೆ ಕೊಟ್ಟಿದೆ. ಜೊತೆಗೆ ಮಾಜಿ ಸಚಿವ ಗೋಪಾಲಯ್ಯ, ಮಾಜಿ ಸಚಿವ ನಾಗೇಶ್ ಅಬಕಾರಿ ಸಚಿವರಾಗಿದ್ದಾಗಲೂ ಲಂಚ ಇತ್ತು. ಈಗ ಮಿತಿ ಮೀರಿದೆ ಎಂದು ಮದ್ಯ ಮಾರಾಟಗಾರರ ಒಕ್ಕೂಟ ಆರೋಪಿಸಿದೆ.

ಅಬಕಾರಿ ಇಲಾಖೆಯಲ್ಲಿ ಕೋಟಿ ಕೋಟಿ ಲಂಚ ಸ್ವೀಕಾರ ಎಂದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ರಾಜ್ಯ ಬಿಜೆಪಿ ಮತ್ತು ಕೇಂದ್ರ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಮುಗಿ ಬೀಳುತ್ತಿದ್ದಾರೆ. ಈಗ ಮದ್ಯ ಮಾರಾಟಗಾರರ ಸಂಘ ಭ್ರಷ್ಟಾಚಾರ ಖಂಡಿಸಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನವೆಂಬರ್ 20ರಂದು ಮದ್ಯ ಮಾರಾಟ ಬಂದ್ ಮಾಡಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: 39 ಸಾವಿರ ಕೋಟಿ ಅನುದಾನದಲ್ಲಿ ಕರ್ನಾಟಕದಲ್ಲಿ ರೈಲ್ವೆ ಕೆಲಸ ಆರಂಭ: ಸೋಮಣ್ಣ

ಇನ್ನೂ ಈ ಲಂಚ ಸ್ವೀಕಾರ ಎಲ್ಲಾ ಸರ್ಕಾರದಲ್ಲೂ ಇದೆ. ಗೋಪಾಲಯ್ಯ ಅವರು ಸಚಿವರಾಗಿದ್ದಾಗಲೂ ಇತ್ತು. ನಾಗೇಶ್ ಸಚಿವರಾಗಿದ್ದಾಗಲೂ ಇತ್ತು. ಈಗ ಕಾಂಗ್ರೆಸ್ ಸರ್ಕಾರದಲ್ಲಿ ಮಿತಿ ಮೀರಿದೆ. ಹಾಗಾಗಿ ನ್ಯಾಯ ಬೇಕಿದೆ. ಅಬಕಾರಿ ಸಚಿವರನ್ನ ಬದಲಾವಣೆ ಮಾಡಬೇಕು. ಮುಖ್ಯ ಮಂತ್ರಿಗಳ ನೇತೃತ್ವದಲ್ಲಿ ಸಭೆ ಮಾಡಬೇಕು. ಹಣಕಾಸು ಇಲಾಖೆಗೆ ನಮ್ಮ ಇಲಾಖೆಯನ್ನ ಸೇರಿಸಬೇಕು ಎಂದು ಮದ್ಯ ಮಾರಾಟಗಾರರ ಒಕ್ಕೂಟ ಆಗ್ರಹಿಸಿದೆ. ಇದನ್ನೂ ಓದಿ: ಚನ್ನಪಟ್ಟಣ ಫಲಿತಾಂಶಕ್ಕೂ ಮುನ್ನವೇ ಸೋಲೊಪ್ಪಿಕೊಂಡ್ರಾ ಯೋಗೇಶ್ವರ್‌?

ಇನ್ನೂ ನವೆಂಬರ್ 20ರಂದು ಮದ್ಯ ಬಂದ್‌ಗೆ 10ಕ್ಕೂ ಹೆಚ್ಚು ಮದ್ಯದಂಗಡಿ ವ್ಯಾಪಾರಸ್ಥರು ಬೆಂಬಲ ನೀಡಿದ್ದಾರೆ. ಬೆಳಗ್ಗೆಯಿಂದ ಸಂಜೆವರೆಗೂ ಮದ್ಯ ಸಿಗಲ್ಲ. ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮಾಡಿ ಕಾನೂನು ತಿದ್ದುಪಡಿ ಮಾಡುವಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ವಾಯು ಮಾಲಿನ್ಯ; 300ಕ್ಕೂ ಅಧಿಕ ವಿಮಾನಗಳ ಹಾರಾಟ ವ್ಯತ್ಯಯ

ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ಕರೆದರೆ ಕೆಲ ದಾಖಲೆಗಳನ್ನು ನೀಡುತ್ತೇವೆ. ನವೆಂಬರ್ 20ರ ಒಳಗಡೆ ಸರ್ಕಾರ ನಮ್ಮನ್ನ ಕರೆದು ಮಾತನಾಡಿಸಿ, ಬೇಡಿಕೆ ಈಡೇರಿಸುತ್ತೇವೆ ಅಂತಾ ಭರವಸೆ ನೀಡಿದರೆ ಪ್ರತಿಭಟನೆ ಕೈ ಬಿಡುತ್ತೇವೆ ಎಂದು ಒಕ್ಕೂಟ ತಿಳಿಸಿದೆ. ಇದನ್ನೂ ಓದಿ: ಶಾಸಕರನ್ನು ಖರೀದಿ ಮಾಡೋಕೆ ಅವ್ರೇನು ಕತ್ತೆನಾ? ಕುದುರೆನಾ?: ಸಿಎಂ ವಿರುದ್ಧ ಸಿ.ಟಿ ರವಿ ಕಿಡಿ

Share This Article