ಭಾರತ-ಪಾಕ್‌ ನಡುವೆ ಯುದ್ಧ ಛಾಯೆ – ಮೇ 7ರಂದು ದೇಶಾದ್ಯಂತ ಮಾಕ್ ಡ್ರಿಲ್

Public TV
3 Min Read
Indian Army Mock Drill 1

– 30 ನಿಮಿಷ ಲೈಟ್ಸ್‌ ಆಫ್‌; ಪಂಜಾಬ್ ಗಡಿಯಲ್ಲಿ ಸೇನೆಯಿಂದ ಡ್ರಿಲ್

ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿ ಬಳಿಕ ಭಾರತ-ಪಾಕಿಸ್ತಾನ (India Vs Pakistan) ನಡುವೆ ಯುದ್ಧದ ಭೀತಿ ಹೆಚ್ಚಾಗುತ್ತಲೇ ಇದೆ. ಉಭಯ ರಾಷ್ಟ್ರಗಳು ಪೂರ್ವಸಿದ್ಧತೆ ಮಾಡಿಕೊಳ್ಳುತ್ತಿವೆ. ಅದರ ಮುಂದುವರಿದ ಭಾಗವಾಗಿ ಮೇ 7ರಂದು ದೇಶಾದ್ಯಂತ ಮಾಕ್ ಡ್ರಿಲ್ (Mock Drills) ನಡೆಯಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ನಾಗರಿಕರ ರಕ್ಷಣೆ ಸಂಬಂಧ ಭದ್ರತಾ ತಾಲೀಮು ನಡೆಸುವಂತೆ ಕೇಂದ್ರ ಗೃಹ ಸಚಿವಾಲಯ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದೆ. ಒಟ್ಟು 5 ಹಂತಗಳಲ್ಲಿ ಮಾಕ್‌ ಡ್ರಿಲ್‌ (ಅಣುಕು ಕಾರ್ಯಾಚರಣೆ) ನಡೆಸುವಂತೆ ಸೂಚಿಸಿದೆ. ದೇಶದ ಆಂತರಿಕ ಭದ್ರತೆ ಮತ್ತು ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಸನ್ನದ್ಧತೆಯನ್ನು ಬಲಪಡಿಸುವ ಉದ್ದೇಶದಿಂದ ಈ ತಾಲೀಮು ನಡೆಸಲಾಗುತ್ತಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಯುದ್ಧ ಕಾರ್ಮೋಡ; ಭಾರತ ಸಮರಭ್ಯಾಸ – ಪಾಕ್‌ನಿಂದ ಫತಾಹ್ ಕ್ಷಿಪಣಿ ಪರೀಕ್ಷೆ

ಹೇಗಿರಲಿದೆ ಮಾಕ್‌ ಡ್ರಿಲ್‌?
1. ವಾಯುದಾಳಿ ಎಚ್ಚರಿಕೆಗೆ ಸಂಬಂಧಿಸಿದಂತೆ ಸೈರನ್‌ಗಳ ಕಾರ್ಯಾಚರಣೆ
2. ಪ್ರತಿಕೂಲ ದಾಳಿಯ ಸಂದರ್ಭದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ನಾಗರಿಕರು, ವಿದ್ಯಾರ್ಥಿಗಳು ಇತ್ಯಾದಿಗಳಿಗೆ ನಾಗರಿಕ ರಕ್ಷಣಾ ಅಂಶಗಳ ಕುರಿತು ತರಬೇತಿ ನೀಡುವುದು.
3. ಕ್ರ್ಯಾಶ್ ಬ್ಲ್ಯಾಕೌಟ್ ಕ್ರಮಗಳನ್ನು ಒದಗಿಸುವುದು
4. ಪ್ರಮುಖ ಸ್ಥಾವರಗಳು/ಅನುಷ್ಠಾನವನ್ನು ಆರಂಭಿಕ ಮರೆಮಾಚುವಿಕೆ ತಂತ್ರಗಾರಿಕೆಗೆ ಅವಕಾಶ
5. ಸ್ಥಳಾಂತರಿಸುವ ಯೋಜನೆಯ ನವೀಕರಣ ಮತ್ತು ಅದರ ಪೂರ್ವಾಭ್ಯಾಸ ಮಾಡುವುದು ಇದರ ಹಂತಗಳಾಗಿವಿವೆ.

Punjab Drill

ಪಂಜಾಬ್ ಗಡಿಯಲ್ಲಿ ಸೇನೆಯಿಂದ ಮಾಕ್ ಡ್ರಿಲ್:
ಯುದ್ಧ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಂಜಾಬ್‌ನ ಫಿರೋಜ್‌ ಪುರದಲ್ಲಿ ಭಾನುವಾರ (ಮೇ 5) ರಾತ್ರಿ 9 ಗಂಟೆಯಿಂದ 9:30ರ ವರೆಗೆ ಸೂಕ್ಷ್ಮ ಪ್ರದೇಶದಲ್ಲಿ ಲೈಟ್ಸ್‌ ಆಫ್‌ ಮಾಡಿ ಮಾಕ್‌ ಡ್ರಿಲ್‌ ನಡೆಸಲಾಯಿತು. ನಿಗದಿತ ತಾಲೀಮು ಸಮಯದಲ್ಲಿ ವಿದ್ಯುತ್‌ ಕಡಿತಗೊಳಿಸುವಂತೆ ಅಧಿಕಾರಿಗಳು ಪಂಜಾಬ್ ರಾಜ್ಯ ವಿದ್ಯುತ್ ನಿಗಮ ಲಿಮಿಟೆಡ್ (ಪಿಎಸ್‌ಪಿಸಿಎಲ್)ಗೆ ಮುಂಚಿತವಾಗಿಯೇ ತಿಳಿಸಲಾಗಿತ್ತು. ಹಾಗಾಗಿ ಸಂಪೂರ್ಣ ವಿದ್ಯುತ್‌ ಕಡಿತಗೊಳಿಸಿ ಕಠಿಣ ತಾಲೀಮು ನಡೆಸಲಾಯಿತು. ಈ ಮೂಲಕ ರಾತ್ರಿ ಕಾರ್ಯಾಚರಣೆಗೆ ಭದ್ರತಾ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲಾಯಿತು. ಇದನ್ನೂ ಓದಿ: ಕಾಶ್ಮೀರದಲ್ಲಿ 2 ಜಲವಿದ್ಯುತ್ ಯೋಜನೆಗಳಿಗೆ ಚಾಲನೆ – ಪಾಕ್‌ಗೆ ಶಾಕ್‌

ಮುಂದುವರಿದ ಮೋದಿ ಸರಣಿ ಸಭೆ
ಇನ್ನು ಉಗ್ರರ ಸಂಹಾರಕ್ಕೆ ಶಪಥಗೈದಿರುವ ಪ್ರಧಾನಿ ನರೇಂದ್ರ ಮೋದಿ, ಭದ್ರತಾ ಅಧಿಕಾರಿಗಳ ಜತೆಗಿನ ಸರಣಿ ಸಭೆ ಮಂದುವರಿಸಿದ್ದಾರೆ. ಇವತ್ತು ಸಹ ಹೈವೋಲ್ಟೇಜ್ ಸಭೆ ನಡೆಸಿದ್ದಾರೆ. ಕೇಂದ್ರ ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವ್ರು ಪ್ರಧಾನಿಯವ್ರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ನಿನ್ನೆಯಷ್ಟೇ ರಾಜನಾಥ್ ಸಿಂಗ್ ದೇಶ ಏನು ಬಯಸುತ್ತೋ ಅದನ್ನೇ ಮಾಡ್ತೇವೆ ಅಂತ ಹೇಳಿದ ಬೆನ್ನಲ್ಲೇ ಇವತ್ತು ರಕ್ಷಣಾ ಕಾರ್ಯದರ್ಶಿ, ಎನ್‌ಎಸ್‌ಎ ಭೇಟಿಯಾಗಿರೋದು ಭಾರೀ ಮಹತ್ವ, ಕುತೂಹಲಕ್ಕೆ ಕಾರಣವಾಗಿದೆ. ಇದನ್ನೂ ಓದಿ: ವಕ್ಫ್ ತಿದ್ದುಪಡಿ ಕಾಯ್ದೆ – ಮುಂದಿನ ಸಿಜೆಐ ಪೀಠಕ್ಕೆ ಅರ್ಜಿ ವರ್ಗಾವಣೆ

ಭಾರತಕ್ಕೆ ರಷ್ಯಾ ಬೆಂಬಲ
ಇನ್ನು ಸಿಬಿಐ ಮುಖ್ಯಸ್ಥ ನೇಮಕ ಸಂಬಂಧ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಧಾನಿ ಮೋದಿಯನ್ನ ಭೇಟಿಯಾಗಿದ್ದಾರೆ. ಈ ಮಧ್ಯೆ ಭಾರತಕ್ಕೆ ಜಾಗತಿಕವಾಗಿ ಭಾರೀ ಬೆಂಬಲ ವ್ಯಕ್ತವಾಗ್ತಿದೆ. ಮಿತ್ರರಾಷ್ಟ್ರವಾಗಿರುವ ರಷ್ಯಾದಿಂದಲೂ ಉಗ್ರರ ವಿರುದ್ಧ ಭಾರತದ ಹೋರಾಟಕ್ಕೆ ಬೆಂಬಲ ಸಿಕ್ಕಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರಧಾನಿ ಮೋದಿಗೆ ದೂರವಾಣಿ ಕರೆ ಮಾಡಿ ಬೆಂಬಲ ಸೂಚಿಸಿದ್ದಾರೆ. ಪಹ್ಲಗಾಮ್ ಉಗ್ರರ ದಾಳಿಯನ್ನು ಪುಟಿನ್ ಬಲವಾಗಿ ಖಂಡಿಸಿದ್ದಾರೆ. ಉಗ್ರರ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಪುಟಿನ್ ಹೇಳಿದ್ದಾರೆಂದು ವಿದೇಶಾಂಗ ವಕ್ತಾರ ರಣಧೀರ್ ಜೈಸ್ವಾಲ್ ಮಾಹಿತಿ ನೀಡಿದ್ದಾರೆ.

Share This Article