ನವದೆಹಲಿ: ಭಾರತ್ ಜೋಡೋ ಯಾತ್ರೆ (Bharat Jodo Yatra) ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ (Sexual Assault) ಕುರಿತು ಭಾಷಣದಲ್ಲಿ ಹೇಳಿಕೆಯೊಂದನ್ನು ನೀಡಿದ್ದರು. ಈ ಕುರಿತು ಹೆಚ್ಚಿನ ವಿವರಗಳನ್ನು ಪಡೆಯಲು ಪೊಲೀಸರು (Police) ಭಾನುವಾರ ರಾಹುಲ್ ಗಾಂಧಿ ಮನೆಗೆ ಆಗಮಿಸಿದ್ದಾರೆ.
Advertisement
ರಾಹುಲ್ ಗಾಂಧಿ ಈ ಹಿಂದೆ ಭಾರತ್ ಜೋಡೋ ಯಾತ್ರೆ ವೇಳೆ ಭಾಷಣದಲ್ಲಿ ತಾವು ಹಲವು ಮಹಿಳೆಯರನ್ನು ಭೇಟಿಯಾಗಿದ್ದೇನೆ. ಈ ಸಂದರ್ಭದಲ್ಲಿ ನಾವು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಆ ಮಹಿಳೆಯರು ಪೊಲೀಸರನ್ನು ಸಂಪರ್ಕಿಸಲು ಮುಂದಾಗಿರಲಿಲ್ಲ ಎಂದಿದ್ದರು. ಇದೀಗ ಆ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡಲು ಪೊಲೀಸರು ಆ ಮಹಿಳೆಯರ ವಿವರಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿರುವುದಾಗಿ ವಿಶೇಷ ಸಿಪಿ ಸಾಗರ್ ಪ್ರೀತ್ ಹೂಡಾ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಶಾಸಕ ಅನಿಲ್ ಬೆನಕೆಗೆ ನಡು ರಸ್ತೆಯಲ್ಲೇ ಮತದಾರರಿಂದ ಕ್ಲಾಸ್
Advertisement
#WATCH| Delhi: Special CP(L&O) Sagar Preet Hooda arrives at the residence of Congress MP Rahul Gandhi in connection with the notice that was served to him by police to seek information on the ‘sexual harassment’ victims that he mentioned in his speech during the Bharat Jodo Yatra pic.twitter.com/G7r2txze67
— ANI (@ANI) March 19, 2023
Advertisement
ಭಾರತ್ ಜೋಡೋ ಯಾತ್ರೆ ಮುಗಿದು ತಿಂಗಳು ಕಳೆದಿದ್ದರೂ ರಾಹುಲ್ ಗಾಂಧಿ ಈ ಕುರಿತು ಪೊಲೀಸರಿಗೆ ಹೆಚ್ಚಿನ ಮಾಹಿತಿ ನೀಡಲು ಮುಂದಾಗಿಲ್ಲ. ಈ ಹಿಂದೆ ಮಾರ್ಚ್ 15 ರಂದು ಪೊಲೀಸರು ರಾಹುಲ್ ಗಾಂಧಿ ಮನೆಗೆ ತೆರಳಿದ್ದರು. ಆದರೆ ರಾಗಾ ಪೊಲೀಸರನ್ನು ಭೇಟಿಯಾಗಲು ಬಂದಿರಲಿಲ್ಲ. ಹೀಗಾಗಿ ಅಧಿಕಾರಿಗಳು ರಾಹುಲ್ ನಿವಾಸದ ಬಳಿ 3 ಗಂಟೆ ಕಾದು ಬಳಿಕ ಅಲ್ಲಿಂದ ವಾಪಾಸಾಗಿದ್ದರು. ಇದನ್ನೂ ಓದಿ: ಡಿಸಿ ಕಚೇರಿ ಮೇಲೆ ಆಜಾನ್ ಕೂಗಿದ ಕೇಸ್ – ಎಚ್ಚರಿಕೆ ನೀಡಿ ಯುವಕನಿಗೆ ಜಾಮೀನು ನೀಡಿದ ಪೊಲೀಸರು
Advertisement
ಇದೀಗ ರಾಹುಲ್ ಗಾಂಧಿ ಪೊಲೀಸರಿಗೆ ಭಾರತ್ ಜೋಡೋ ಯಾತ್ರೆ ಸುದೀರ್ಘವಾಗಿತ್ತು. ನನಗೆ ಆ ಹೇಳಿಕೆ ಬಗ್ಗೆ ಏನೂ ನೆನಪಿಲ್ಲ ಎಂದು ತಿಳಿಸಿದ್ದಾರೆ. ಬಳಿಕ ಪೊಲೀಸರು ಅವರಿಗೆ ಮತ್ತೊಂದು ನೋಟಿಸ್ ನೀಡಿದ್ದು, ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಆದರೆ ಅವರು ಅದಕ್ಕೆ ಯಾವುದೇ ನಿಗದಿತ ಸಮಯವನ್ನು ನೀಡಲಿಲ್ಲ ಎನ್ನಲಾಗಿದೆ.