Connect with us

Latest

ಪ್ರಧಾನಿ ಮೋದಿ ವಿರುದ್ಧ ಎತ್ತುವ ಕೈಗಳನ್ನು ಕತ್ತರಿಸ್ತೀವಿ: ಬಿಜೆಪಿ ಸಂಸದ

Published

on

ಪಾಟ್ನಾ: ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ತೋರಿಸುವ ಬೆರಳುಗಳನ್ನು ಮುರಿಯಲಾಗುವುದು. ಅವಶ್ಯಕತೆ ಬಿದ್ದರೆ ಅಂತಹವರ ಕೈ ಯನ್ನು ಕತ್ತರಿಸಲಾಗುವುದು ಎಂದು ಬಿಹಾರ ರಾಜ್ಯದ ಉಜಿಯಾಪುರ ಕ್ಷೇತ್ರದ ಸಂಸದ ನಿತ್ಯಾನಂದ ರಾಯ್ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ಸೋಮವಾರ ಓಬಿಸಿ ಸಮುದಾಯದ ಸಭೆಯಲ್ಲಿ ಭಾಗಿಯಾಗಿದ್ದ ಸಂಸದರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮೋದಿ ಅವರ ಹಳೆಯ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾ, ಮೋದಿಜಿ ತಾಯಿ ಮಗನಿಗೆ ಊಟ ಮಾಡಿಸಿಕೊಳ್ಳಲು ಕೂರುತ್ತಿದ್ದರು. ಆದರೆ ಇಂದು ಆ ತಟ್ಟೆಯ ಮುಂದೆ ಮಗನಿಲ್ಲ. ಇಂತಹ ಕಠಿಣ ಪರಿಸ್ಥಿತಿಯಲ್ಲ, ಒಬ್ಬ ಸಾಮಾನ್ಯ ಬಡ ವ್ಯಕ್ತಿ ಇಂದು ದೇಶದ ಪ್ರಧಾನಿಯಾಗಿದ್ದಾರೆ. ಅಂತಹ ಶ್ರೇಷ್ಟ ವ್ಯಕ್ತಿಯನ್ನು ನಾವೆಲ್ಲರೂ ಗೌರವಿಸಬೇಕು ಎಂದು ರಾಯ್ ತಿಳಿಸಿದ್ದಾರೆ.

ಮೋದಿ ಅವರಿಗೆ ತೋರಿಸುವ ಪ್ರತಿಯೊಂದು ಬೆರಳನ್ನು ಮುರಿಯಲಾಗುವುದು ಮತ್ತು ಪ್ರಧಾನಿ ವಿರುದ್ಧ ಎತ್ತುವ ಕೈಗಳನ್ನು ಊನಗೊಳಿಸಲಾಗುವುದು. ಒಂದು ವೇಳೆ ಅವಶ್ಯಕತೆ ಬಿದ್ದಲ್ಲಿ ಅಂತಹ ಕೈಗಳನ್ನು ಕತ್ತರಿಸಿ ಹಾಕಲಾಗುವುದು ಅಂತಾ ಅಂದ್ರು. ಈ ವೇಳೆ ಸಭೆಯಲ್ಲಿ ಬಿಜೆಪಿ ನಾಯಕ ಸುಶೀಲ್ ಮೋದಿ ಸಹ ಉಪಸ್ಥಿತರಿದ್ದರು.

ವಿವಾದವಾಗುತ್ತಿದ್ದಂತೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ನಿತ್ಯಾನಂದ ರಾಯ್, ನಾನು ದೇಶದ ಪ್ರಧಾನಿ ಮೋದಿ, ದೇಶದ ಗೌರವ ಮತ್ತು ಸುರಕ್ಷತೆಯ ವಿರುದ್ಧ ಧ್ವನಿ ಎತ್ತುವವರಿಗೆ ರೂಪಕವಾಗಿ ಹೇಳಲು ಕಠೋರ ಹೇಳಿಕೆಯನ್ನು ನೀಡಿದ್ದೇವೆ ಹೊರತು ಯಾವುದೇ ಪಕ್ಷ ಮತ್ತು ವ್ಯಕ್ತಿಯ ಬಗ್ಗೆ ನನ್ನ ಭಾಷಣದಲ್ಲಿ ಹೇಳಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

2016ರಲ್ಲಿ ನಿತ್ಯಾನಂದರನ್ನು ಬಿಹಾರನ ಬಿಜೆಪಿ ರಾಜ್ಯಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. 2016ರಲ್ಲಿ ಮೊದಲ ಬಾರಿಗೆ ಹಾಜಿಪುರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಗೊಂಡಿದ್ದರು. ನಂತರ ಲೋಕಸಭೆ ಚುನಾವಣೆಯಲ್ಲಿ ಉಜಿಯಾಪುರ ಕ್ಷೇತ್ರದಿಂದ ಟಿಕೆಟ್ ನೀಡಲಾಗಿತ್ತು.

Click to comment

Leave a Reply

Your email address will not be published. Required fields are marked *