ಮೋದಿ ಎಂಬುದು ದುಷ್ಟ ಶಕ್ತಿ: ನಾಲಿಗೆ ಹರಿಬಿಟ್ಟ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ

Public TV
1 Min Read
Basanagouda Badarli Modi

– ಕಾಂಗ್ರೆಸ್ ಬೆವರಿನಿಂದ ಪ್ರಜ್ವಲ್ ರೇವಣ್ಣ ಸಂಸದ

ಹಾಸನ: ಮೋದಿ ಎಂಬುದು ದುಷ್ಟ ಶಕ್ತಿ. ಈ ದುಷ್ಟ ಶಕ್ತಿ ದೇಶದಲ್ಲಿ ಆಡಳಿತದಲ್ಲಿದೆ ಎಂದು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ ನಾಲಿಗೆ ಹರಿಬಿಟ್ಟಿದ್ದಾರೆ.

ನಗರದಲ್ಲಿ ನಡೆದ ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ಕಷ್ಟದಲ್ಲಿದೆ. ಇದಕ್ಕೆ ಕಳೆದ ಐದು ವರ್ಷಗಳಿಂದ ಆಡಳಿತ ನಡೆಸಿದ ದುಷ್ಟ ಶಕ್ತಿಯೇ ಕಾರಣ. ದೇಶದಲ್ಲಿ ಅತ್ಯಂತ ಸುಳ್ಳುಗಾರ ಪ್ರಧಾನಿ ಎಂದರೆ ನರೇಂದ್ರ ಮೋದಿ. ಅವರು ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

vlcsnap 2019 07 02 17h33m44s224

ನರೇಂದ್ರ ಮೋದಿ ಅವರು 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದರು. ಆದರೆ ಭರವಸೆಯನ್ನು ಈಡೇರಿಸಲಿಲ್ಲ. ಈ ಮೂಲಕ ದೇಶದ ಯುವ ಜನತೆಗೆ ಮೋಸ ಮಾಡಿದರು. ಆದರೂ ಯುವ ಜನತೆ ಪ್ರಧಾನಿ ಮೋದಿ ಬೆಂಬಲಕ್ಕೆ ನಿಲ್ಲುತ್ತಿದೆ. ಮೋದಿ ಅವರ ಭಾಷಣಕ್ಕೆ ಮರುಳಾಗಿ ದೇಶದ ಜನತೆ ಮೋಸಕ್ಕೆ ಒಳಗಾಗುತ್ತಿದ್ದಾರೆ ಎಂದರು.

ಕಾಂಗ್ರೆಸ್ ಹೈಕಮಾಂಡ್ ಆದೇಶದಂತೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದಲ್ಲಿದ್ದೇವೆ. ಕಾಂಗ್ರೆಸ್‍ನ ಮತಗಳಿಂದ ನೀವು ಗೆಲುವು ಸಾಧಿಸಿದ್ದೀರಾ ಎನ್ನುವುದನ್ನು ಮರೆಯಬೇಡಿ. ಕಾಂಗ್ರೆಸ್‍ನ ಬೆವರಿನಿಂದ ಸಂಸದರಾಗಿದ್ದಾರೆ. ಅವರಿಗೆ ಎಷ್ಟು ಹಕ್ಕಿದೆಯೋ ಅಷ್ಟು ಹಕ್ಕು ನಮಗೂ ಇದೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಬೆಂಬಲ ನೀಡಿ, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಕುಟುಕಿದರು.

Share This Article
Leave a Comment

Leave a Reply

Your email address will not be published. Required fields are marked *