ಬೆಂಗಳೂರು: ಕುಟುಂಬ ರಂಪಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಶುಕ್ರವಾರ ಮಹಿಳಾ ಆಯೋಗಕ್ಕೆ ಹಾಜರಾಗಿದ್ದರು.
ದುನಿಯಾ ವಿಜಯ್ ವಿರುದ್ಧ ಮಹಿಳಾ ಆಯೋಗಕ್ಕೆ ಪತ್ನಿ ನಾಗರತ್ನ ದೂರು ದಾಖಲಿಸಿದ್ದರು. ದೂರು ದಾಖಲು ಮಾಡಿಕೊಂಡ ರಾಜ್ಯ ಮಹಿಳಾ ಆಯೋಗ ವಿಜಿಗೆ ನೋಟಿಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ದುನಿಯಾ ವಿಜಯ್ ಮಹಿಳಾ ಆಯೋಗಕ್ಕೆ ನಿನ್ನೆ ಹಾಜರಾಗಿದ್ದರು.
Advertisement
Advertisement
ದುನಿಯಾ ವಿಜಿ ನನಗೆ ಡಿವೋರ್ಸ್ ನೀಡದೆ ಎರಡನೇ ಮದುವೆಯಾಗಿದ್ದಾನೆ ಎಂದು ಪತ್ನಿ ನಾಗರತ್ನ ದೂರು ದಾಖಲಿಸಿದ್ದರು. ಅಷ್ಟೇ ಅಲ್ಲದೆ ವಿಜಯ್ ವಿರುದ್ಧ ಮಾನಸಿಕ ಕಿರುಕುಳದ ಆರೋಪ ಕೂಡ ಮಾಡಿದ್ದರು. ಈ ಬಗ್ಗೆ ವಿಚಾರಣೆಗೆ ಹಾಜರಾಗಿ ಉತ್ತರ ನೀಡುವಂತೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷಿ ಬಾಯಿ ವಿಜಿಗೆ ನೋಟಿಸ್ ನೀಡಿದ್ದರು.
Advertisement
ವಿಚಾರಣೆಗೆ ಹಾಜರಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ದುನಿಯಾ ವಿಜಿ, ಘಟನೆ ಸಂಬಂಧ ಮಹಿಳಾ ಆಯೋಗದವರು ಕೆಲವು ದಾಖಲೆಗಳನ್ನ ಕೇಳಿದ್ದರು. ನಾನು ಎಲ್ಲಾ ದಾಖಲೆಗಳನ್ನ ಸಲ್ಲಿಸುತ್ತೇನೆ. ಈ ಪ್ರಕರಣ ಕೋರ್ಟ್ ನಲ್ಲಿ ಇರುವುದರಿಂದ ವೈಯಕ್ತಿಕ ಮಾಹಿತಿ ನೀಡಲು ಸಾಧ್ಯವಿಲ್ಲ. ಆದರೆ ಮುಂದಿನ ದಿನಗಳಲ್ಲಿ ತನಿಖೆಗೆ ಕರೆದರೆ ಸಹಕರಿಸುತ್ತೇನೆ ಎಂದು ಹೇಳಿದ್ದರು.
Advertisement
ದುನಿಯಾ ವಿಜಿ ವಿರುದ್ಧ ಪತ್ನಿ ನಾಗರತ್ನ ದೂರನ್ನ ನೀಡಿದ್ದರು. ದೂರು ದಾಖಲಿಸಿಕೊಂಡು ವಿಜಿಗೆ ನೋಟಿಸ್ ನೀಡಿದ್ವಿ. ಹೀಗಾಗಿ ಅವರು ವಿಚಾರಣೆಗೆ ಹಾಜರಾಗಿದ್ದರು. ಸುಮಾರು 1 ಗಂಟೆಗಳ ಕಾಲ ವಿಜಿ ಅವರನ್ನು ವಿಚಾರಣೆ ನಡೆಸಿದ್ದೇನೆ. ವಿಜಿ ನಾಗರತ್ನ ಜೊತೆ ಬಾಳಲು ಸಾಧ್ಯವಿಲ್ಲ ಅಂತ ಹೇಳಿದ್ದಾರೆ. ಆದರೆ ಮಕ್ಕಳ ಜವಬ್ದಾರಿ ನನ್ನದು ಎಂದು ವಿಜಿ ಹೇಳಿರುವುದಾಗಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷಿ ಬಾಯಿ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv