ಬಂಗಾಳ ಕೊಲ್ಲಿಯಲ್ಲಿ ವಾಯು ಭಾರ ಕುಸಿತ ಉಂಟಾದ ಪರಿಣಾಮ ಗುಲಾಬ್ ಚಂಡಮಾರುತದ ಎಫೆಕ್ಟ್ ಇರುತ್ತೆ. ಈ ಪರಿಣಾಮ ಮಳೆಯ ಅಬ್ಬರ ಜೋರಾಗಿ ಬರುವ ಸಾಧ್ಯತೆ ಇದೆ.
ಜಿಲ್ಲೆಯಾದ್ಯಂತ ದಟ್ಟವಾದ ಮೋಡಗಳಿಂದ ಮಂಜಿನ ನಗರಿಯಾಗಿದ್ದು, ಧಾರಾಕಾರ ಮಳೆಯಾಗುತ್ತೆ. ಕರಾವಳಿ ಜಿಲ್ಲೆಗಳು, ಮಲೆನಾಡು, ಉತ್ತರ ಒಳನಾಡಿನಲ್ಲಿ ಶನಿವಾರದಿಂದ 4 ದಿನಗಳ ಕಾಲ ಮಳೆಯ ಅಬ್ಬರ ಜೋರಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ಕೋಲಾರ, ತುಮಕೂರು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ಮಾತ್ರವಲ್ಲದೆ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ತುಮಕೂರು, ಕೊಡಗು, ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯದ ಮಳೆಯಾಗಲಿದೆ. ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.
ನಗರಗಳ ಇಂದಿನ ಹವಾಮಾನ ವರದಿ:
ಬೆಂಗಳೂರು: 28-19
ಮಂಗಳೂರು: 28-25
ಶಿವಮೊಗ್ಗ: 27-21
ಬೆಳಗಾವಿ: 24-21
ಮೈಸೂರು: 28-21
ಮಂಡ್ಯ: 29-21
ರಾಮನಗರ: 29-20
ಮಡಿಕೇರಿ: 22-17
ಹಾಸನ: 25-19
ಚಾಮರಾಜನಗರ: 29-20
ಚಿಕ್ಕಬಳ್ಳಾಪುರ: 27-18
ಕೋಲಾರ: 29-20
ತುಮಕೂರು: 28-19
ಉಡುಪಿ: 29-25
ಕಾರವಾರ: 28-26
ಚಿಕ್ಕಮಗಳೂರು: 24-19
ದಾವಣಗೆರೆ: 28-22
ಚಿತ್ರದುರ್ಗ: 28-21
ಹಾವೇರಿ: 28-22
ಬಳ್ಳಾರಿ: 31-23
ಗದಗ: 28-21
ಕೊಪ್ಪಳ: 29-22
ರಾಯಚೂರು: 31-22
ಯಾದಗಿರಿ: 29-22
ವಿಜಯಪುರ: 27-22
ಬೀದರ್: 25-20
ಕಲಬುರಗಿ: 27-22
ಬಾಗಲಕೋಟೆ: 29-22