ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈಗಾಗಲೇ ರಾಜ್ಯದ ಬಹುತೇಕ ಕಡೆ ಮಳೆಯ ಪ್ರಮಾಣ ತಗ್ಗಿದ್ದು, ಇಷ್ಟು ದಿನ ಆರೆಂಜ್ ಅಲರ್ಟ್ ಇದ್ದ ಕರಾವಳಿ ಭಾಗಗಳಲ್ಲಿ ಇಂದಿನಿಂದ ನಾಲ್ಕು ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
Advertisement
ಮತ್ತೊಂದೆಡೆ ಇಂದು ಉತ್ತರ ಒಳನಾಡಿನ ಭಾಗಗಳಾದ ಬೀದರ್‍ನಲ್ಲಿ 1 ದಿನ, ಧಾರವಾಡದಲ್ಲಿ 2 ದಿನ, ಬೆಳಗಾವಿಯಲ್ಲಿ 3 ದಿನ, ಕಲಬರಗಿಯಲ್ಲಿ 1 ದಿನ ಯೆಲ್ಲೋ ಅಲರ್ಟ್ ಹಾಗೂ ಹಾವೇರಿ ಜಿಲ್ಲೆಯಲ್ಲೂ ಯೆಲ್ಲೋ ಅಲರ್ಟ್ ಸೂಚಿಸಲಾಗಿದೆ.
Advertisement
Advertisement
ದಕ್ಷಿಣ ಒಳನಾಡಿನ ಪ್ರದೇಶಗಳಾದ ಕೊಡಗು, ಚಿಕ್ಕಮಗಳೂರು, ಜಿಲ್ಲೆಗಳಿಗೆ ಇಂದು ಮಾತ್ರ ಆರೆಂಜ್ ಅಲರ್ಟ್ ಸೂಚಿಸಲಾಗಿದ್ದು, ಮುಂದಿನ ಎರಡು ದಿನ ಯೆಲ್ಲೋ ಅಲರ್ಟ್ ಮತ್ತು ಹಾಸನದಲ್ಲಿ ಇಂದಿನಿಂದ 3 ದಿನ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಉಳಿದಂತೆ ರಾಜ್ಯದ ಯಾವ ಜಿಲ್ಲೆಗಳಿಗೂ ಯಾವುದೇ ಅಲರ್ಟ್ ಇಲ್ಲ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
Advertisement
ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಕೆಲ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಗುಡುಗು ಸಹಿತ ಮಳೆ ಬರುವ ಸೂಚನೆ ಇದೆ. ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಮಿಂಚು ಸಹಿತ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 26-19
ಮಂಗಳೂರು: 28-24
ಶಿವಮೊಗ್ಗ: 24-21
ಬೆಳಗಾವಿ: 23-20
ಮೈಸೂರು: 26-20
ಮಂಡ್ಯ: 27-21
ಕೊಡಗು: 21-17
ರಾಮನಗರ: 27-21
ಹಾಸನ: 23-18
ಚಾಮರಾಜನಗರ: 27-21
ಚಿಕ್ಕಬಳ್ಳಾಪುರ: 27-119
ಕೋಲಾರ: 28-20
ತುಮಕೂರು: 27-20
ಉಡುಪಿ: 28-24
ಚಿಕ್ಕಮಗಳೂರು: 22-18
ದಾವಣಗೆರೆ: 26-21
ಚಿತ್ರದುರ್ಗ: 26-21
ಹಾವೇರಿ: 26-21
ಬಳ್ಳಾರಿ: 30-23
ಗದಗ: 26-21
ಕೊಪ್ಪಳ: 28-22
ರಾಯಚೂರು: 30-23
ಯಾದಗಿರಿ: 29-23
ವಿಜಯಪುರ: 28-22
ಬೀದರ್: 26-21
ಕಲಬುರಗಿ: 28-23
ಬಾಗಲಕೋಟೆ: 28-22