DistrictsHassanKarnatakaLatestLeading NewsMain Post

ಹಾಸನದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಕಂದಾಯ ಇಲಾಖೆ ಅಸ್ತು

ಎಚ್.ಡಿ.ರೇವಣ್ಣ Vs ಪ್ರೀತಂಗೌಡ ನಡುವೆ ನಿಲ್ಲದ ಜಟಾಪಟಿ

ಹಾಸನ: ಹಾಸನದಲ್ಲಿ ಟ್ರಕ್‌ಟರ್ಮಿನಲ್ ನಿರ್ಮಾಣ ವಿಚಾರವಾಗಿ ಮಾಜಿ ಸಚಿವ ಹೆಚ್‌ಡಿ.ರೇವಣ್ಣ ವರ್ಸಸ್ ಶಾಸಕ ಪ್ರೀತಂಗೌಡರ ನಡುವೆ ಜಟಾಪಟಿ ಜೋರಾಗಿರುವ ಹೊತ್ತಿನಲ್ಲೇ ಈ ಬಗ್ಗೆ, ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯಿಂದ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ.

Preetam Gowda, Hassan, JDS, BJP, Revanna, (3)

ಪತ್ರದಲ್ಲಿ ಹಾಸನದ ಕೆಂಚಟ್ಟಳ್ಳಿ ಗ್ರಾಮದ ಸರ್ವೆ ನಂಬರ್ 31 ರಲ್ಲಿ, 3 ಎಕರೆ 24 ಗುಂಟೆ ಸರ್ಕಾರಿ ಗೋಮಾಳವನ್ನು ಟ್ರಕ್‌ಟರ್ಮಿನಲ್ ಉದ್ದೇಶಕ್ಕೆ ಕಾಯ್ದಿರಿಸಿರುವ ಬಗ್ಗೆ ಸರ್ಕಾರ ಈಗಾಗಲೇ ಪೂರ್ವಾನುನತಿ ನೀಡಿರುವ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ-1964ರ ಕಲಂ 71 ರಡಿ ಟ್ರಕ್ ಟರ್ಮಿನಲ್ ಉದ್ದೇಶಕ್ಕೆ ಕಾಯ್ದಿರಿಸಲು ಸರ್ಕಾರ ಪೂರ್ವಾನುಮತಿ ನೀಡಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ನಾನು ಧರಣಿ ಕುಳಿತರು ಸ್ಥಳಕ್ಕೆ ಡಿಸಿ ಬರಲಿಲ್ಲ, ನಾನೇನು ದನಕಾಯೋನ: ಹೆಚ್‍ಡಿ.ರೇವಣ್ಣ

ಜಿಲ್ಲಾಧಿಕಾರಿಗಳು ಸರ್ಕಾರದ ಆದೇಶದಂತೆ ಸದರಿ ಜಮೀನನ್ನು ಕಂದಾಯ ವ್ಯಾಪ್ತಿಯ ಸುಪರ್ದಿಯಲ್ಲೇ ಇರಿಸಿಕೊಳ್ಳತಕ್ಕದ್ದು. ಈ ಜಮೀನನ್ನು ಮುಂದೆ ಯಾವುದಾದರೂ ಸಂಸ್ಥೆ, ಇಲಾಖೆಗೆ ನೀಡಬೇಕಾದಲ್ಲಿ ಸರ್ಕಾರದ ಅನುಮತಿಗೆ ಸೂಕ್ತ ಪ್ರಸ್ತಾವನೆ ಸಲ್ಲಿಸಲು ಪತ್ರದಲ್ಲಿ ಸೂಚಿಸಲಾಗಿದೆ.

Preetam Gowda, Hassan, JDS, BJP, Revanna, (2)

ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಮುಂದೆ ನಡೆಯುತ್ತಿರುವ ಟ್ರಕ್‌ಟರ್ಮಿನಲ್ ಕಾಮಗಾರಿಗೆ ಹೆಚ್.ಡಿ.ರೇವಣ್ಣ, ಸ್ಥಳೀಯರು, ವಿದ್ಯಾರ್ಥಿಗಳು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಆದರೂ ಟ್ರಕ್‌ಟರ್ಮಿನಲ್ ಕಾಮಗಾರಿ ಮಾಡಿಯೇ ಸಿದ್ಧ ಎಂದು ಶಾಸಕ ಪ್ರೀತಂಗೌಡ ಪಣತೊಟ್ಟಿದ್ದರು. ಹೀಗಾಗಿ ಸ್ಥಳೀಯರೊಂದಿಗೆ ಸ್ವತಃ ಹೋರಾಟಕ್ಕಿಳಿದಿದ್ದ ಹೆಚ್‌ಡಿ.ರೇವಣ್ಣ, ತಾತ್ಕಾಲಿಕವಾಗಿ ಕಾಮಗಾರಿ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದರು. ಇದನ್ನೂ ಓದಿ: ಹಾಸನದಲ್ಲಿ ನಿಲ್ಲದ ಪ್ರೀತಂ ಗೌಡ Vs ಎಚ್‍.ಡಿ.ರೇವಣ್ಣ ಜಟಾಪಟಿ – ರಾತ್ರೋ ರಾತ್ರಿ ತಾಲೂಕು ಕಚೇರಿ ಡೆಮಾಲಿಶ್ 

HD REVANNA

ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ 144 ಸೆಕ್ಷನ್ ಜಾರಿ ಗೊಳಿಸಲಾಗಿತ್ತು. ಇದರಿಂದ ಟ್ರಕ್‌ಟರ್ಮಿನಲ್ ನಿರ್ಮಾಣದಿಂದ ಸ್ಥಳವನ್ನು ಕಂದಾಯ ಸಚಿವರು ಖುದ್ದು ಪರಿಶೀಲನೆ ನಡೆಸಲಿ ಎಂದು ಪಟ್ಟು ಹಿಡಿದಿದ್ದ ರೇವಣ್ಣ, ಅಧಿಕಾರಿಗಳು ಒಪ್ಪಿದರೆ ಅಲ್ಲಿಯೇ ಟ್ರಕ್‌ಟರ್ಮಿನಲ್ ಕಾಮಗಾರಿ ನಡೆಸಲಿ ಎಂದು ಆಕ್ರೋಶ ಹೊರಹಾಕಿದ್ದರು. ಇದೀಗ ಕಂದಾಯ ಇಲಾಖೆಯಿಂದಲೇ ಕೆಂಚಟ್ಟಳ್ಳಿ ಗ್ರಾಮದ ಸರ್ವೆ ನಂಬರ್ 31 ರಲ್ಲಿ, 3 ಎಕರೆ 24 ಗುಂಟೆ ಸರ್ಕಾರಿ ಗೋಮಾಳವನ್ನು ಟ್ರಕ್‌ಟರ್ಮಿನಲ್ ಉದ್ದೇಶಕ್ಕೆ ಕಾಯ್ದಿರಿಸಿರುವ ಬಗ್ಗೆ ಸ್ಪಷ್ಟನೆ ನೀಡಲಾಗಿದೆ.

Leave a Reply

Your email address will not be published.

Back to top button