– ಕನ್ನಡಿಗರ ಋಣ ತೀರಿಸಲು ನಿರ್ಮಲಾ ಸೀತಾರಾಮನ್ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿ
ಬೆಂಗಳೂರು: ಕೇಂದ್ರ ಬಜೆಟ್ (Union Budget) ಮಂಡನೆ ಕುರಿತು ಸಚಿವ ಪ್ರಿಯಾಂಕ್ ಖರ್ಗೆ (Priyank Kharge), ಇದು ಕೇಂದ್ರ ಬಜೆಟ್ ಅಲ್ಲ. ಬಿಹಾರ (Bihar) ಬಜೆಟ್, ಈ ಬಿಹಾರ ಬಜೆಟ್ ಕನ್ನಡಿಗರಿಗೆ ಅನ್ಯಾಯ ಮಾಡಿದೆ ಎಂದು ಕಿಡಿಕಾರಿದ್ದಾರೆ.
Advertisement
ಕೇಂದ್ರ ಬಜೆಟ್ ಬಗ್ಗೆ ಕಾಂಗ್ರೆಸ್ ಟೀಕೆಗೆ ಬಿಜೆಪಿ ಖಂಡನೆ ವಿಚಾರವಾಗಿ ಮಾತನಾಡಿ, ನಾವೇನೂ ಮೊಸರಲ್ಲಿ ಕಲ್ಲು ಹುಡುಕುತ್ತಿಲ್ಲ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರೇ ರಾಜ್ಯಕ್ಕೆ ಸಮರ್ಪಕ ತೆರಿಗೆ ಪರಿಹಾರ ಕೊಟ್ಟಿಲ್ಲ. ಬೊಮ್ಮಾಯಿ ಸಿಎಂ ಆಗಿದ್ದಾಗ ದೆಹಲಿಗೆ ಹೋಗಿ ತೆರಿಗೆ ಪರಿಹಾರ ಕೇಳಬೇಕು ಅಂದಿದ್ದರು. ಅಂಕಿ ಅಂಶ ಇಟ್ಟು ನಾವು ಕೇಂದ್ರದಿಂದ ತೆರಿಗೆ ಪರಿಹಾರ, ಅನುದಾನ ಕೇಳ್ತಿದ್ದೇವೆ. ಉದ್ಯೋಗ ಸೃಷ್ಟಿಸುವ ರಾಜ್ಯಗಳಿಗೆ ಹೆಚ್ಚು ಅನುದಾನ ನೀಡಿದರೆ ದೇಶಕ್ಕೆ ಒಳ್ಳೆಯದಾಗುತ್ತದೆ. ಬಿಹಾಕ್ಕೆ ಈ ಸಲ ಜಾಸ್ತಿ ಒತ್ತು ಕೊಟ್ಟಿದ್ದಾರೆ. ಹಿಂದಿನ ಬಜೆಟ್‍ನಲ್ಲಿ ಆಂಧ್ರಪ್ರದೇಶದ ಅಮರಾವತಿಗೆ ಆದ್ಯತೆ ನೀಡಿದ್ದರು. ಇದು ರಾಜಕೀಯ ಬಜೆಟ್ ಆಗಿದೆ. ಕೇಂದ್ರ ದೇಶ ಕಟ್ಟುವ, ಉದ್ಯೋಗ ಸೃಷ್ಟಿಸುವ ಬಜೆಟ್ ಕೊಟ್ಟಿಲ್ಲ ಎಂದು ದೂರಿದ್ದಾರೆ.
Advertisement
ಸಿದ್ದರಾಮಯ್ಯ ಅವರು 5 ವರ್ಷ ಸಿಎಂ ಆಗಿರುತ್ತಾರೆ ಎನ್ನುವುದು ನಮ್ಮ ಭಾವನೆ ಎಂಬ ಪರಮೇಶ್ವರ್ ಹೇಳಿಕೆ ವಿಚಾರವಾಗಿ, ಎಲ್ಲರೂ ಹೈಕಮಾಂಡ್‍ಗೆ ಬಿಟ್ಟಿದ್ದಾರೆ. ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಖರ್ಗೆ ಸಾಹೇಬ್ರು ಹೇಳಿದ್ರು, ಸಿದ್ದರಾಮಯ್ಯನವರು ಹೇಳಿದ್ರು. ಡಿ.ಕೆ.ಶಿವಕುಮಾರ್ ಅವರು ಅದನ್ನೇ ಹೇಳಿದ್ದಾರೆ. ಆ ವಿಚಾರ ಹೈಕಮಾಂಡ್‍ಗೆ ಬಿಟ್ಟಿರೋದು ಎಂದು ಸ್ಪಷ್ಟಪಡಿಸಿದ್ದಾರೆ.
Advertisement
Advertisement
ಸಿಎಂ ಬದಲಾವಣೆ ವಿಚಾರವಾಗಿ ವಿಧಾನಸಭಾ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆ ಬಗ್ಗೆ ಮಾತನಾಡಿ, ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ, ಬದಲಾವಣೆ ಪ್ರಶ್ನೆಯೂ ಇಲ್ಲ. ಅಶೋಕ್ ಅವರು ಅವರ ಪಕ್ಷದ ಭವಿಷ್ಯದ ಬಗ್ಗೆ ಮೊದಲು ಮಾತನಾಡಲಿ ಎಂದಿದ್ದಾರೆ.
ದಲಿತ ಸಚಿವರ ಸಭೆ ನಡೆಸಿದ್ದಾರೆಂಬ ವಿಚಾರವಾಗಿ, ನಾವು ಸಭೆ ಸೇರಿಲ್ಲ. ನಮ್ಮ ನಾಯಕರು ಕೂತು ಮಾತಾಡೋದು ತಪ್ಪಾ? ನಾನು ಪ್ರಸಾದ್ ಅಬ್ಬಯ್ಯ ಹುಬ್ಬಳ್ಳಿಯಲ್ಲಿ ಸೇರಿದ್ದೆವು. ಹಾಗಂತ ನಮ್ಮದೊಂದು ಬಣ ಆಗಿಹೋಗುತ್ತಾ? ದಲಿತ ಸಮುದಾಯದ ಕೆಲ ವಿಚಾರಗಳ ಚರ್ಚೆಗೆ ಸೇರೋಣ ಎಂದು ನಿರ್ಧರಿಸಿದ್ದೆವು. ಆಗ ವರಿಷ್ಠರು ನಾವೂ ಬರುತ್ತೇವೆ ಅಂದಿದ್ದಕ್ಕೆ ಅದು ಮುಂದೂಡಿಕೆ ಆಯ್ತು. ಅದನ್ನೇ ಪರಮೇಶ್ವರ್ ಅವರು ತಿಳಿಸಿದ್ದರು. ಪರಮೇಶ್ವರ್ ದೆಹಲಿಗೆ ಯಾಕೆ ಹೋಗುತ್ತಿದ್ದಾರೋ ಗೊತ್ತಿಲ್ಲ. ನಾವು ನಮ್ಮ ಇಲಾಖೆ ಕೆಲಸಕ್ಕೆ ಹೋಗುತ್ತಿದ್ದೇವೆ. ನಮ್ಮ ಮಾತು ಇಲ್ಲೇ ನಡೆಯಲ್ಲ. ಇನ್ನೂ ಅಲ್ಲೇನು ನಡೆಯುತ್ತದೆ. ಇಲಾಖೆ ಕೆಲಸಕ್ಕೆ ಅಷ್ಟೇ ಹೋಗ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.