ರಾಯಚೂರು: 2021-22ರ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಬೆಂಡೋಣಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿಜ್ಞಾನ ಶಿಕ್ಷಕ ಚಂದ್ರು ವೈ.ಎ ಆಯ್ಕೆಯಾಗಿದ್ದಾರೆ.
ಅತ್ಯಂತ ಕಡಿಮೆ ಸೌಲಭ್ಯಗಳನ್ನ ಹೊಂದಿರುವ ಗ್ರಾಮೀಣ ಭಾಗದ ಶಾಲೆಯಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿಯ ಬೋಧನ ಕ್ರಮದಿಂದ ಮೆಚ್ಚುಗೆಗಳಿಸಿದ್ದ ಶಿಕ್ಷಕ ಚಂದ್ರು ವೈ.ಎ ಈಗ ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದನ್ನೂ ಓದಿ: ಬೆಲೆ ಏರಿಕೆ ಬಗ್ಗೆ ಮಾತನಾಡಲು ಬಿಜೆಪಿ ನಾಯಕರಿಗೆ ನಾಲಗೆ ಬಿದ್ದು ಹೋಗಿದೆ: ದಿನೇಶ್ ಗುಂಡೂರಾ
ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಪ್ರಾಥಮಿಕ ಶಾಲಾ ವಿಭಾಗದಿಂದ 20 ಶಿಕ್ಷಕರು, ಪ್ರೌಢಶಾಲಾ ವಿಭಾಗದಿಂದ 11 ಶಿಕ್ಷಕರನ್ನ ಆಯ್ಕೆ ಮಾಡಲಾಗಿದೆ. ಮಾತೆ ಸಾವಿತ್ರಿಬಾಯಿ ಪುಲೆ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಇದನ್ನೂ ಓದಿ: ಯೋಗಿ ಲಂಕೆ ಅಡ್ಡದಲ್ಲಿ ಕರಾವಳಿ ಬೆಡಗಿ ಕಾವ್ಯಾ ಶೆಟ್ಟಿ ಸಖತ್ ಬೋಲ್ಡ್
ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರುಗಳಿಗೆ ತಲಾ 10 ಸಾವಿರದಂತೆ 3 ಲಕ್ಷ, 10 ಸಾವಿರ ರೂಪಾಯಿ ನಗದು ಪುರಸ್ಕಾರ ಹಾಗೂ ಅವರ ಶಾಲೆಗಳ ಅಭಿವೃದ್ಧಿಗೆ ತಲಾ 50 ಸಾವಿರದಂತೆ, 15 ಲಕ್ಷ, 50 ಸಾವಿರ ರೂಪಾಯಿಯನ್ನ ನೀಡಲಾಗುತ್ತಿದೆ. ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಹಾಗೂ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಯಿಂದ ವೆಚ್ಚ ಭರಿಸಲಾಗುತ್ತದೆ. ಶಿಕ್ಷಕರ ಆಯ್ಕೆ ಅಂತಿಮಗೊಳಿಸಿ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಎಚ್.ಎಸ್.ಶಿವಕುಮಾರ್ ಅಧಿಸೂಚನೆ ಹೊರಡಿಸಿದ್ದಾರೆ.