ಬೆಂಗಳೂರು: ಸುಪ್ರೀಂಕೋರ್ಟ್ (Supreme Court) ಆದೇಶ ದುರದೃಷ್ಟಕರ. ಮತ್ತೊಮ್ಮೆ ನಮ್ಮ ರಾಜ್ಯದ ಕಾನೂನು ತಂಡ ಸುಪ್ರೀಂಕೋರ್ಟ್ ಮುಂದೆ ವಸ್ತುಸ್ಥಿತಿ ತಿಳಿಸಲು ವಿಫಲವಾಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮೊದಲ ಸಿಡಬ್ಲ್ಯೂಸಿ ಆದೇಶ ಬಂದಾಗ ಕರ್ನಾಟಕ ಸುಪ್ರೀಂಕೋರ್ಟ್‌ಗೆ ಹೋಗಬೇಕಿತ್ತು. ನೀರು ಬಿಡಲು ಆಗಲ್ಲ ಎಂದು ಅಫಿಡವಿಟ್ ಹಾಕಬೇಕಿತ್ತು. ಎರಡು ಸಲ ನೀರು ಬಿಟ್ಟು ಈಗ ಸುಪ್ರೀಂಕೋರ್ಟ್‌ಗೆ ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Advertisement
Advertisement
ಕಾವೇರಿ ನೀರು ನಿಯಂತ್ರಣ ಸಮಿತಿ (CWRC), ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಅನುಸರಿಸಿರುವ ವಿಧಾನಗಳೇ ಸರಿ ಇಲ್ಲ. ಮಳೆ ಕಡಿಮೆಯಾಗಿದೆ ಅನ್ನೋದು ಗೊತ್ತಿದ್ದರೂ ಕೂಡಾ ಆದೇಶ ಮಾಡಿದೆ. ಸುಪ್ರೀಂಕೋರ್ಟ್ ಎರಡು ರಾಜ್ಯಗಳ ವಾದ ಕೇಳಿ, ಸಿಡಬ್ಲ್ಯೂಎಂಎ ಆದೇಶವನ್ನೇ ಎತ್ತಿ ಹಿಡಿದಿದೆ. ಮೊದಲೇ ರಾಜ್ಯ ಸರ್ಕಾರ ಇಷ್ಟು ನೀರು ಬಿಡೋಕೆ ಆಗಲ್ಲ ಎಂದು ಅರ್ಜಿ ಹಾಕಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಇದನ್ನು ಪದೇ ಪದೇ ಹೇಳಿದದೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಸುಪ್ರೀಂ ತೀರ್ಪಿನಲ್ಲಿ ಕರ್ನಾಟಕಕ್ಕೆ ಹಿನ್ನಡೆ- KRS ಡ್ಯಾಂ ಬಳಿ ಬಿಗಿ ಭದ್ರತೆ
Advertisement
Advertisement
ಸಿಡಬ್ಲ್ಯೂಆರ್‌ಸಿ ಯಲ್ಲಿ ಸಂಪೂರ್ಣವಾದ ಮಾಹಿತಿ ಇರುತ್ತದೆ. ಇದೆಲ್ಲವೂ ಇದ್ದರೂ ಪ್ರಾರಂಭದಿಂದಲೂ ನೀರು ಬಿಡುತ್ತಿದ್ದಾರೆ. ಈ ರೀತಿಯ ಸರ್ಕಾರ ಇದ್ದರೆ ರಾಜ್ಯದ ಹಿತಾಸಕ್ತಿ ಹೇಗೆ ರಕ್ಷಣೆ ಮಾಡಲು ಸಾಧ್ಯ? ತಮಿಳುನಾಡಿನವರು ಎರಡು ಬೆಳೆಗಳಿಗೆ ನೀರು ಕೇಳುತ್ತಿದ್ದಾರೆ. ಇಲ್ಲಿ ಕುಡಿಯೋಕೆ ನೀರೇ ಇಲ್ಲ. ಗ್ರೌಂಡ್ ರಿಯಾಲಿಟಿಯನ್ನು ಅವರು ಪರಿಗಣಿಸಿಯೇ ಇಲ್ಲ. ತಮಿಳುನಾಡು ಅಕ್ರಮವಾಗಿ ನೀರು ಬಳಕೆ ಮಾಡಿದೆ. ನಮಗೆ ಬೇಕಿರುವ ನೀರಿನ ಅಗತ್ಯತೆ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಹೊಸ ಸರ್ಕಾರ ಬಂದಿದೆ ಎಂದು ವರ್ಗಾವಣೆ ಮಾಡಿಕೊಂಡು ಕೂತಿದ್ದರೇ ವಿನಃ ಕಾವೇರಿ ಕಡೆ ಇವರು ಗಮನ ಕೊಟ್ಟಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಅಲ್ಲದೆ ಸಿಡಬ್ಲ್ಯೂಆರ್‌ಸಿ, ಸಿಡಬ್ಲ್ಯೂಎಂಎ ಅವರು ಇಬ್ಬರು ಒಂದೇ ತಪ್ಪು ಮಾಡಿದ್ದಾರೆ. ನೀರು ಬಿಡಿ ಎನ್ನುತ್ತಲೇ ಇದ್ದಾರೆ. ಹೀಗಾದರೆ ಹೇಗೆ? ಸಿಡಬ್ಲ್ಯೂಆರ್‌ಸಿ ಧೋರಣೆ ಸರಿ ಇಲ್ಲ. ಯಾರು ಯಾವ ಬೆಳೆಗೆ ನೀರು ಬಳಸುತ್ತಾರೆ ಅನ್ನೋದು ಮುಖ್ಯ. ಇಲ್ಲಿ ಕುಡಿಯೋಕೆ ನೀರಿಲ್ಲ, ಗ್ರೌಂಡ್ ವರದಿ ತಗೊಂಡಿಲ್ಲ. ಇದು ಅತ್ಯಂತ ಖಂಡನೀಯ ಎಂದು ಹೇಳಿದರು. ಇದನ್ನೂ ಓದಿ: ಕಾವೇರಿ ವಿಚಾರದಲ್ಲಿ ಗಲಾಟೆಗಳಾದ್ರೆ ಸರ್ಕಾರವೇ ಹೊಣೆ: ಆರ್.ಅಶೋಕ್
Web Stories