ರಾಯಚೂರು: ರಾಯಚೂರು (Raichur) ಲೋಕಸಭಾ ಬಿಜೆಪಿ (BJP) ಟಿಕೆಟ್ ಕೈ ತಪ್ಪಿದ್ದಕ್ಕೆ ಮಾಜಿ ಸಂಸದ ಟಿಕೆಟ್ ಆಕಾಂಕ್ಷಿ ಬಿ.ವಿ.ನಾಯಕ್ (BV Nayak) ಪಕ್ಷದ ನಾಯಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ರಾಯಚೂರಿನಲ್ಲಿ ಮಾತನಾಡಿದ ಅವರು, ಟಿಕೆಟ್ ಕೊಡಲ್ಲ ಎಂದು ಮೊದಲೇ ಹೇಳಿದ್ದರೆ ನಾನು ಹೊರಗೆ ಬಂದು ಟಿಕೆಟ್ ಕೇಳುತ್ತಲೇ ಇರಲಿಲ್ಲ. ಪಕ್ಷದ ರಾಜ್ಯ ನಾಯಕರ ಪ್ರೇರಣೆ ಮೆರೆಗೆ ಟಿಕೆಟ್‌ಗೆ ಪ್ರಯತ್ನ ಮಾಡಿದೆ. ಟಿಕೆಟ್ ಸಿಗದಿದ್ದಕ್ಕೆ ನನಗೆ ತೀವ್ರ ನಿರಾಶೆಯಾಗಿದೆ. ನಾಡಿದ್ದು ಆಪ್ತರು, ಕಾರ್ಯಕರ್ತರ ಸಭೆ ಕರೆಯುತ್ತೇನೆ. ಅವರ ಅಭಿಪ್ರಾಯದಂತೆ ಮುಂದುವರೆಯುತ್ತೇನೆ ಎಂದರು. ಇದನ್ನೂ ಓದಿ: ರೆಡ್ಡಿ ಮರಳಿದ್ದು ಬಿಜೆಪಿಗೆ ದೊಡ್ಡ ಶಕ್ತಿ – ಮೈತ್ರಿಗೆ ಗೆಲುವು ಖಚಿತ: ವಿಜಯೇಂದ್ರ
Advertisement
Advertisement
ಯಾವುದೇ ಕಾರಣಕ್ಕೂ ದುಡುಕಿನ ನಿರ್ಧಾರ ತೆಗೆದುಕೊಳ್ಳುವುದಿಲ್ಲ, ಯಾವುದೇ ಉದ್ವೇಗದಲ್ಲಿ ನಾವಿಲ್ಲ. ರಾಜಕಾರಣದಲ್ಲಿ ಏಳು ಬೀಳು ಕಂಡಿದ್ದೇವೆ. ಹಿತಶತ್ರುಗಳನ್ನು ನೋಡಿದ್ದೇವೆ. ನಮ್ಮ ತಂದೆ ನಾಲ್ಕು ಬಾರಿ ಎಂಪಿಯಾಗಿದ್ದರು. ನಾನು ಒಮ್ಮೆ ಎಂಪಿಯಾಗಿದ್ದೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನ ತೊರೆದು ಬಿಜೆಪಿಗೆ ಬಂದೆ. ಮುಕ್ತವಾಗಿ ಉಸಿರಾಡಲು ಅವಕಾಶ ಸಿಗುತ್ತೆ ಎಂದು ಈ ಪಕ್ಷಕ್ಕೆ ಬಂದೆ. ನಮ್ಮ ಮನವಿ ಪರಿಗಣಿಸುತ್ತೇವೆ. ಗಣನೆಗೆ ತೆಗೆದುಕೊಳ್ಳುತ್ತೇವೆ ಕ್ಷೇತ್ರದಲ್ಲಿ ಓಡಾಡಿ ಎಂದಿದ್ದರು. ಅಭ್ಯರ್ಥಿ ಬದಲಾವಣೆ ಮಾಡುವುದಾದರೆ ಅವಕಾಶ ಕೊಡಿ ಎಂದು ಕೇಳಿದ್ದೆ. ಪಕ್ಷದ ನಾಯಕರು ನನಗೆ ಭರವಸೆ ಕೊಡದಿದ್ದರೆ ಒಳ್ಳೆಯದಿತ್ತು ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಹೀನಾಯವಾಗಿ ಸೋತಿದ್ದ ಒಡೆಯರ್; ರಾಜ ಮನೆತನಕ್ಕೆ ಅಂದು ಆಗಿತ್ತು ಭಾರಿ ಮುಖಭಂಗ!
Advertisement
ಪಕ್ಷದ ಅಭ್ಯರ್ಥಿಗೆ ಬೆಂಬಲಿಸುವ ವಿಚಾರದಲ್ಲಿ ನಾನು ತಟಸ್ಥನಾಗಿದ್ದೇನೆ. ನಾನು ಯಾರ ಪರನೂ ಇಲ್ಲಾ, ವಿರೋಧನೂ ಇಲ್ಲಾ. ನನ್ನ ಮನಸ್ಸು ತಿಳಿಯಾಗಬೇಕಿದೆ. ನನಗೆ ಅನ್ಯಾಯವಾಗಿದೆ, ಮೋಸವಾಗಿದೆ ಎಂದು ಇನ್ನೊಬ್ಬರಿಗೆ ತೊಂದರೆ ಕೊಡಲ್ಲ. ಕಾರ್ಯಕರ್ತರನ್ನು ನಾನು ಬಲಿಕೊಡಲು ಹೋಗಲ್ಲ. ಅವರ ತೀರ್ಮಾನ ಅವರು ಮಾಡುತ್ತಾರೆ. ದೇವರು ಒಳ್ಳೆಯದು ಮಾಡಲಿ, ಶುಭವಾಗಲಿ ಎಂದು ಹಾರೈಸಿದರು. ಇದನ್ನೂ ಓದಿ: ರಾಗಾ ವಿರುದ್ಧ ಕೇರಳ ಬಿಜೆಪಿ ಮುಖ್ಯಸ್ಥ ಕೆ.ಸುರೇಂದ್ರನ್ ಸ್ಪರ್ಧೆ – ಕಾಂಗ್ರೆಸ್ ಭದ್ರಕೋಟೆ ಛಿದ್ರವಾಗುತ್ತಾ?
Advertisement
ಹಾಲಿ ಸಂಸದರಿಂದ ಸ್ಪಂದನೆಯಿಲ್ಲಾ ಎಂಬ ಅಭಿಪ್ರಾಯ ಕಾರ್ಯಕರ್ತರಲ್ಲಿತ್ತು. ಹೈಕಮಾಂಡ್ ಯಾವ ವಿಚಾರದಲ್ಲಿ ತೀರ್ಮಾನ ಮಾಡಿದೆ ನನಗೆ ಗೊತ್ತಿಲ್ಲ. ನಾವು ಹೊಸಬರು ಈ ಪಕ್ಷದಲ್ಲಿ ಆತ್ಮ ವಿಮರ್ಶೆ ಮಾಡಿಕೊಳ್ಳುತ್ತೇವೆ. ವಾಪಸ್ ಕಾಂಗ್ರೆಸ್‌ಗೆ ಹೋಗುವ ಮಾತಿಲ್ಲ. ಅಲ್ಲಿ ಮುಜುಗರವಾಗಿದೆ ಎಂದು ಪಕ್ಷ ಬಿಟ್ಟುಬಂದಿದ್ದೇನೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಹಾಸನದಲ್ಲಿ ಯಾವುದೇ ಬಂಡಾಯ ಇಲ್ಲ, ಜನಾರ್ದನ ರೆಡ್ಡಿ ಪಕ್ಷ ಸೇರ್ಪಡೆ ಸ್ವಾಗತ ಮಾಡ್ತೀನಿ: ತೇಜಸ್ವಿಸೂರ್ಯ