ಬೆಳಗಾವಿ: ಜಿಲ್ಲೆಯ ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಆಯೋಗ ಪೀಠವನ್ನು ಮಾಚ್9 ಮೊದಲ ವಾರದಲ್ಲಿ ಸ್ಥಾಪನೆ ಮಾಡಲಾಗುವುದು ಎಂದು ರಾಜ್ಯ ಮಾಹಿತಿ ಆಯುಕ್ತೆ ಗೀತಾ.ವಿ.ಬಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಹಿತಿ ಹಕ್ಕಿಗಾಗಿ ಜನರು ಬೆಂಗಳೂರಿಗೆ ಬರುವುದನ್ನು ತಪ್ಪಿಸಲು ಬೆಳಗಾವಿಯಲ್ಲಿಯೇ ಮಾಹಿತಿ ಹಕ್ಕು ಆಯೋಗದ ಕಚೇರಿಯನ್ನು ಸ್ಥಾಪಿಸಲು ಸರಕಾರ ಮುಂದಾಗಿದೆ ಎಂದು ತಿಳಿಸಿದರು.
Advertisement
ಬೆಳಗಾವಿಯ ಅಂಬೇಡ್ಕರ್ ರಸ್ತೆಯ ತಮನ್ನಾ ಆರ್ಕೆಡ್‍ನ ಮೂರನೇ ಮಹಡಿಯಲ್ಲಿ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಿಸಿ ಶೀಘ್ರದಲ್ಲೇ ಕಚೇರಿ ಕೆಲಸ ಪ್ರಾರಂಭಿಸಲಿದೆ. ಈಗಾಗಲೇ ಸರ್ಕಾರ ಕಚೇರಿ ಸ್ಥಾಪಿಸಲು 69.50 ಲಕ್ಷ ರೂ. ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ಕೂಡಲೇ ಕಚೇರಿಯ ಕಾಮಗಾರಿಗೆ ಟೆಂಡರ್ ಕರೆಯಲಾಗುವುದು ವಿವರಿಸಿದರು.