ಬೆಂಗಳೂರು: ಕರ್ನಾಟಕದ ರಾಜಕಾರಣದಲ್ಲಿ ಮತ್ತೆ ಗಣಿ ಗದ್ದಲ ಶುರುವಾಗಿದೆ. ಸಿಬಿಐ ಕೈಬಿಟ್ಟದ್ದ ಅಕ್ರಮ ಅದಿರು ಪ್ರಕರಣವನ್ನು ಎಸ್‍ಐಟಿ ಗೆ ವಹಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಎರಡು ಮಹತ್ವದ ಪ್ರಕರಣಗಳನ್ನು ಸಿಬಿಐ ಕೈಬಿಟ್ಟಿತ್ತು. ಕಾರವಾರ, ಮಂಗಳೂರು ಬಂದರಿನಲ್ಲಿ ಅಕ್ರಮ ರಫ್ತು ಪ್ರಕರಣವನ್ನು ಸಿಬಿಐ ಸೂಕ್ತ ಸಾಕ್ಷ್ಯಗಳಿಲ್ಲ ಎಂದು ಕೈಬಿಟ್ಟಿತ್ತು. ಈ ಸಹಸ್ರಾರು ಕೋಟಿ ಪ್ರಕರಣದ ಹಿಂದೆ ಕಳ್ಳ ಕುಳಗಳೇ ಇದ್ದು, ನರೇಂದ್ರ ಮೋದಿ, ಅಮಿತ್ ಶಾ ಜೊತೆ ಇರುವ ಉದ್ಯಮಿಗಳು ಶಾಮೀಲಾಗಿದ್ದಾರೆ ಎನ್ನಲಾಗಿದೆ.
Advertisement
ಉದ್ಯಮಿಗಳ ಮೇಲೆ ಎಸ್‍ಐಟಿ ಅಸ್ತ್ರ ಪ್ರಯೋಗಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಬಿಜೆಪಿಯ ಹಣಬಲಕ್ಕೆ ಬ್ರೇಕ್ ಹಾಕಲು ಈ ಪ್ಲ್ಯಾನ್ ಮಾಡಿದೆ. ಬಿಜೆಪಿಯ ಐಟಿ ಶಸ್ತ್ರಕ್ಕೆ ಪ್ರತಿಯಾಗಿ ಎಸ್‍ಐಟಿ ಶಸ್ತ್ರ ಬಳಸಲು ಮುಂದಾಗಿದೆ. ನವೆಂಬರ್ 8ರ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನವಾಗುವ ಸಾಧ್ಯತೆ ಇದೆ.