Connect with us

Latest

ಕೇರಳ, ಪಶ್ಚಿಮ ಬಂಗಾಳದಿಂದ ಜಿಹಾದಿ ಸಂಘಟನೆಗಳಿಗೆ ಬೆಂಬಲ: ಮೋಹನ್ ಭಾಗವತ್

Published

on

ನಾಗ್ಪುರ: ಸಮಾಜದ ಶಾಂತಿಯನ್ನು ಕದಡಲು ಪಶ್ಚಿಮ ಬಂಗಾಳ ಹಾಗೂ ಕೇರಳ ಸರ್ಕಾರಗಳು ಜಿಹಾದಿ ಸಂಘಟನೆಗಳಿಗೆ ಬೆಂಬಲ ನೀಡಿ ಸ್ವಾಸ್ಥ್ಯ ಸಮಾಜಕ್ಕೆ ಅಡ್ಡಿ ಪಡಿಸುವ ಪ್ರಯತ್ನ ಮಾಡುತ್ತಿವೆ ಎಂದು ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಆರೋಪಿಸಿದ್ದಾರೆ.

ವಿಜಯದಶಮಿ ಹಿನ್ನೆಲೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದಲ್ಲಿ ನಿರಾಶ್ರಿತರಾಗಿರುವ ಮುಸ್ಲಿಮರು ದೇಶದ ಭದ್ರತೆಗೆ ಅಪಾಯವಾಗಿದ್ದಾರೆ. ದೇಶದ ರಕ್ಷಣೆ ಹಾಗೂ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಕೆಲ ಸಮುದಾಯದವರು ಕಾನೂನು ಮುರಿದು ಕ್ರೌರ್ಯ ಮೆರೆಯುತ್ತಿದ್ದಾರೆ ಎಂದು ಹೇಳಿದರು.

ಗೋವು ರಕ್ಷಣೆ ವಿಚಾರದ ಬಗ್ಗೆ ಪ್ರಸ್ತಾಪಿಸಿದ ಅವರು, ಆರ್‍ಎಸ್‍ಎಸ್ ಹಾಗೂ ಭಜರಂಗದಳದವರಂತೆ ಕೆಲ ಮುಸ್ಲಿಮರು ಗೋವುಗಳನ್ನು ರಕ್ಷಿಸಲು ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ಹೇಳಿದರು.

 

 

 

 

ದೇಶದ ಬಗ್ಗೆ ಕಾಳಜಿ ಇದ್ದರೆ ಎಲ್ಲವನ್ನು ತ್ಯಾಗ ಮಾಡಿ ಗೋವು ರಕ್ಷಣೆಗೆ ನಿಲ್ಲಬೇಕು. ಗೋವಿನ ರಕ್ಷಣೆ ಮಾಡುವಂತೆ ಕೇಂದ್ರ ಸರ್ಕಾರ ಹಾಗೂ ಕಾನೂನೇ ಹೇಳುತ್ತಿದೆ. ಆದರೆ ನಮ್ಮ ದೇಶದಲ್ಲಿ ಮುಖ ಪ್ರಾಣಿಗಳ ಬದುಕಿಗೂ ಪೆಟ್ಟು ಬೀಳುತ್ತಿದೆ. ಹೀಗಾಗಿ ನಾವೆಲ್ಲರು ಗೋವು ರಕ್ಷಣೆಗೆ ಬಗ್ಗೆ ವಿಶೇಷ ಕಾಳಜಿ ವಹಿಸಿ ಕಾನೂನು ಕಾಪಾಡಬೇಕಿದೆ ಎಂದು ಹೇಳಿದ್ದಾರೆ.

 

ದೇಶದಲ್ಲಿ ಜಿಹಾದಿ ಸಂಘಟನೆಗಳು ದಿನೇ ದಿನೇ ಹುಟ್ಟಿಕೊಳ್ಳುತ್ತಿದೆ. ಅಂತೆಯೇ ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಜಿಹಾದಿ ಗುಂಪುಗಳು ಹುಟ್ಟಿಕೊಂಡಿದ್ದು, ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಇವುಗಳಿಗೆ ಅಲ್ಲಿನ ರಾಜ್ಯ ಸರ್ಕಾರಗಳು ಬೆಂಬಲ ನೀಡುತ್ತಿವೆ. ಎಲ್ಲರೂ ದೇಶ ರಕ್ಷಣೆಗೆ ನಿಲ್ಲಬೇಕು ಹಾಗೂ ಕಾನೂನು ಪಾಲನೆ ಮಾಡಬೇಕು. ಎಂತಹ ಪರಿಸ್ಥಿತಿಯಲ್ಲೂ ಸಹ ರಾಷ್ಟ್ರದ ರಕ್ಷಣೆಗೆ ನಿಲ್ಲಬೇಕು ಎಂದು ಭಾಗವತ್ ಹೇಳಿದರು.

Click to comment

Leave a Reply

Your email address will not be published. Required fields are marked *

www.publictv.in