– ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡ್ತಿದೆ: ಬಿಜೆಪಿ ಶಾಸಕ
– ಕೇಂದ್ರದ ಜಾತಿಗಣತಿ ನಿರ್ಧಾರ ಸ್ವಾಗತಿಸಿದ ವಿಜಯೇಂದ್ರ
ಬೆಂಗಳೂರು: ರಾಜ್ಯ ಸರ್ಕಾರಗಳಿಗೆ ಜಾತಿ ಜನಗಣತಿ (Caste Census) ಮಾಡುವ ಅಧಿಕಾರ ಇಲ್ಲ. ಇದು ಗೊತ್ತಿದ್ರೂ ಸಿದ್ದರಾಮಯ್ಯ ಸರ್ಕಾರ ಜಾತಿಗಳ ನಡುವೆ ವಿಷ ಬೀಜ ಬಿತ್ತಲು ಮುಂದಾಗಿದೆ ಎಂದು ವಿಜಯೇಂದ್ರ (B.Y.Vijayendra) ವಾಗ್ದಾಳಿ ನಡೆಸಿದರು.
ಕೇಂದ್ರದಿಂದ ಜಾತಿ ಆಧಾರಿತ ಜನಗಣತಿ ನಡೆಸುವ ವಿಚಾರವಾಗಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬಹಳ ಉತ್ತಮ ನಿರ್ಧಾರ ತೆಗೆದುಕೊಂಡಿದೆ. ಜನಗಣತಿ ಜತೆಗೆ ಜಾತಿ ಜನಗಣತಿಯೂ ಮಾಡುವ ನಿರ್ಧಾರ ಮಾಡಲಾಗಿದೆ. 1931 ರ ನಂತರ ದೇಶದಲ್ಲಿ ಜಾತಿ ಜನಗಣತಿ ನಡೆದಿರಲಿಲ್ಲ. ಎಲ್ಲ ಸಮುದಾಯಗಳಿಗೂ ನ್ಯಾಯ ಸಿಗಬೇಕು ಅನ್ನೋದು ಮೋದಿಯವರ ಉದ್ದೇಶ. ಎಲ್ಲರೂ ಈ ನಿರ್ಧಾರ ಸ್ವಾಗತ ಮಾಡಿದ್ದಾರೆ. ನಮ್ಮ ರಾಜ್ಯದಲ್ಲಿ ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತಿ ಸಮಾಜ ಒಡೆಯುವ ಕೆಲಸ ಕಾಂಗ್ರೆಸ್ ಮಾಡ್ತಿದೆ. ಕೇಂದ್ರದ ನಿರ್ಧಾರ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೂ ಅಚ್ಚರಿ ತಂದಿದೆ ಎಂದರು. ಇದನ್ನೂ ಓದಿ: ಕೇಂದ್ರದ ಜಾತಿ ಜನಗಣತಿ ನಿರ್ಧಾರವನ್ನ ಸ್ವಾಗತ ಮಾಡ್ತೇನೆ: ರಾಹುಲ್ ಗಾಂಧಿ
ರಾಜ್ಯ ಸರ್ಕಾರಗಳಿಗೆ ಜಾತಿ ಜನಗಣತಿ ಮಾಡುವ ಅಧಿಕಾರ ಇಲ್ಲ. ಇದು ಗೊತ್ತಿದ್ರೂ ಸಿದ್ದರಾಮಯ್ಯ ಸರ್ಕಾರ ಜಾತಿಗಳ ನಡುವೆ ವಿಷ ಬೀಜ ಬಿತ್ತಲು ಮುಂದಾಗಿದೆ. ಖರ್ಗೆಯವರೇ ಹೇಳಿದ್ದಾರೆ ಇದು ಔಟ್‌ಡೇಟೆಡ್ ವರದಿ ಅಂತಾ. ಈಗಲಾದರೂ ರಾಜ್ಯದ ಜಾತಿ ಜನಗಣತಿಗೆ ಇತಿಶ್ರಿ ಹಾಡಲಿ. ಸಿದ್ದರಾಮಯ್ಯ ಜಾತಿಗಳ ನಡುವೆ ಕಂದಕ ಸೃಷ್ಟಿಸಲು ಹೊರಟಿದ್ದಾರೆ. ಕಾಂಗ್ರೆಸ್ ಸರ್ಕಾರದ ಬಳಿ ಕಾಂತರಾಜು ವರದಿಯ ಪ್ರತಿಯೇ ಇಲ್ಲ. ಜಯಪ್ರಕಾಶ್ ಹೆಗ್ಡೆ ಯಾವ ಆಧಾರದಲ್ಲಿ ವರದಿ ಕೊಟ್ರು ಹಾಗಾದ್ರೆ? ಸಿದ್ದರಾಮಯ್ಯ ವರದಿಯಲ್ಲಿ ಸದುದ್ದೇಶವಂತೂ ಇಲ್ಲ. ಈಗಲಾದರೂ ಸಿದ್ದರಾಮಯ್ಯಗೆ ಭಗವಂತ ಬುದ್ಧಿ ಕೊಡಲಿ, ಕೇಂದ್ರದ ಪರ ಸಿದ್ದರಾಮಯ್ಯ ನಿಲ್ಲಲಿ ಎಂದು ತಿಳಿಸಿದರು.
ಮಂಗಳೂರು ಗುಂಪು ಹತ್ಯೆ ಪ್ರಕರಣ, ಪರಮೇಶ್ವರ್ ಹೇಳಿಕೆ ಬದಲು ವಿಚಾರವಾಗಿ ಮಾತನಾಡಿ, ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ರು. ಆಗಲೇ ಕಠಿಣ ಕ್ರಮ ಕೈಗೊಂಡಿದ್ದಿದ್ರೆ ಇಂತಹ ಘಟನೆ ಆಗ್ತಿರಲಿಲ್ಲ. ಕಾಂಗ್ರೆಸ್ ಮುಸಲ್ಮಾನರ ಓಲೈಕೆಯಿಂದ ಪದೇ ಪದೇ ಈಥರ ನಡೀತಿದೆ ಎಂದು ಬೇಸರ ಹೊರಹಾಕಿದರು. ಇದನ್ನೂ ಓದಿ: ಜನಗಣತಿಯ ಜೊತೆಗೆ ದೇಶಾದ್ಯಂತ ಜಾತಿಗಣತಿ: ಕೇಂದ್ರ ಸರ್ಕಾರ