Connect with us

Bengaluru City

ವಿಧಾನಸೌಧದಲ್ಲಿ ತುರ್ತುಪರಿಸ್ಥಿತಿ – ಮೂರನೇ ಮಹಡಿಯಿಂದ ಮಾಧ್ಯಮಗಳು ದೂರ ದೂರ!

Published

on

– ವರದಿ ಬೆನ್ನಲ್ಲೇ ಸಿಎಂ ಎಚ್‍ಡಿಕೆ `ಯೂ ಟರ್ನ್’

ಬೆಂಗಳೂರು: ಸಮ್ಮಿಶ್ರ ಸರ್ಕಾರ ಮೇಲೆ ಮಾಧ್ಯಮಗಳಿಗೆ ಮುನಿಸು ಎಂದು ಹಲವು ಬಾರಿ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದ ಸಿಎಂ ಕುಮಾರಸ್ವಾಮಿ ಅವರು ಇಂದು ಯಾವುದೇ ಮುಂದಾಲೋಚನೆ ಇಲ್ಲದೇ ಮಾಧ್ಯಮ ಕೊಠಡಿಯನ್ನು ಬದಲಾವಣೆ ಮಾಡಲು ಯತ್ನಿಸಿ, ಬಳಿಕ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ವಿಧಾನಸೌಧದ ಮೂರನೇ ಮಹಡಿಗೆ ಕ್ಯಾಮೆರಾ ತರುವ ಆಗಿಲ್ಲ ಎಂದು ನಿಯಮ ಮಾಡಿ ಮಾಧ್ಯಮ ಪ್ರತಿನಿಧಿಗಳನ್ನು ದೂರ ಮಾಡಲು ಸರ್ಕಾರ ಪ್ರಯತ್ನಿಸಿತ್ತು. ಇದರಂತೆ ವಿಧಾನಸೌಧದ ನೆಲಮಹಡಿಯ ನಂ.9 ಕೊಠಡಿಯನ್ನು ಮಾಧ್ಯಮಗಳಿಗೆ ಹಂಚಿಕೆ ಮಾಡಿತ್ತು. ಈ ಕುರಿತು ವಿಧಾನಸೌಧದಿಂದ ಡಿಪಿಎಆರ್ ನಿಂದ ಅಧಿಕೃತ ಆದೇಶವೂ ಜಾರಿಯಾಗಿತ್ತು.

ಮಾಜಿ ಸಿಎಂ ದೇವರಾಜ್ ಅರಸು ಕಾಲದಿಂದಲೂ ಮೂರನೇ ಮಹಡಿಯ ಕೊಠಡಿ ಸಂಖ್ಯೆ 333 ರಲ್ಲಿಯೇ ಮಾಧ್ಯಮಗಳಿಗೆ ಅವಕಾಶ ನೀಡಲಾಗಿದೆ. ಇಲ್ಲಿ ಸಭೆ, ಸಚಿವರ ಭೇಟಿ ಎಲ್ಲವೂ ಸುಲಭವಾಗಿ ನಡೆಯುತ್ತಿತ್ತು. ಆದರೆ ಈಗ ವಿಧಾನಸೌಧದ ನೆಲಮಹಡಿಯ ಮಹಿಳಾ ಶೌಚಾಲಯ ಪಕ್ಕದಲ್ಲಿ ಕೊಠಡಿ ಹಂಚಿಕೆ ಮಾಡಲಾಗಿತ್ತು. ಈ ಮೂಲಕ ಸಚಿವರು, ಶಾಸಕರು, ಅಧಿಕಾರಿಗಳು ಸಂಪರ್ಕಕ್ಕೆ ಸಿಗದಂತೆ ಮಾಡಲೆಂದೇ ಸರ್ಕಾರ ಈ ನಿರ್ಧಾರ ಕೈಗೊಂಡಿದ್ಯಾ ಎನ್ನುವ ಪ್ರಶ್ನೆ ಎದ್ದಿತ್ತು.

ಸಿಎಂ ಯೂ ಟರ್ನ್: `ಮಾಧ್ಯಮಗಳಿಗೆ ವಿಧಾನಸೌಧದಲ್ಲಿ ತುರ್ತುಪರಿಸ್ಥಿತಿ’ ಎನ್ನುವ ಶೀರ್ಷಿಕೆಯೊಂದಿಗೆ ಪಬ್ಲಿಕ್ ಟಿವಿ ಈ ಕುರಿತು ವರದಿ ಮಾಡುತ್ತಿದ್ದಂತೆ ಎಚ್ಚೆತ್ತ ಸಿಎಂ ಕುಮಾರಸ್ವಾಮಿ ಅವರು ವಿಧಾನಸೌಧದ ಮೂರನೇ ಮಹಡಿಯ ಕೊಠಡಿಯನ್ನೇ ಮುಂದುವರಿಸುವಂತೆ ಸೂಚನೆ ನೀಡಿದ್ದಾರೆ. ಈ ಕುರಿತು ಸಿಎಂ ತಮ್ಮ ಮುಖ್ಯ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿ ಮಾಧ್ಯಮ ಕೊಠಡಿ ಬದಲಾವಣೆ ಮಾಡದಂತೆ ಸೂಚನೆ ನೀಡಿದ್ದಾರೆ.

ಇದಕ್ಕೂ ಮುನ್ನ ಪ್ರತಿಕ್ರಿಯೆ ನೀಡಿದ್ದ ಜಲಸಂಪ್ಮೂಲ ಸಚಿವ ಡಿಕೆ ಶಿವಕುಮಾರ್, ಮಾಧ್ಯಮಗಳ ವಿರುದ್ಧ ಇಂತಹ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಒಂದೊಮ್ಮೆ ಇಂತಹ ಕ್ರಮ ನಡೆದಿದ್ದರೆ ತನ್ನ ಕೊಠಡಿಯನ್ನೇ ಮಾಧ್ಯಮಗಳಿಗೆ ಬಿಟ್ಟು ಕೊಡುವುದಾಗಿ ತಿಳಿಸಿದ್ದರು.

ಮಾಧ್ಯಮ ಕೊಠಡಿ ಬದಲಾವಣೆ ಅವೈಜ್ಞಾನಿಕ:
ಮಾಧ್ಯಮ ಕೊಠಡಿ ಬದಲಾವಣೆ ಮಾಡುವಂತೆ ಸಿಎಂ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಕೈಗೊಂಡಿದ್ದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆದರೆ ಈ ನಿರ್ಧಾರ ಸಂಪೂರ್ಣ ಆವೈಜ್ಞಾನಿಕವಾಗಿತ್ತು. ಏಕೆಂದರೆ ವಿಧಾನಸೌಧದ ಮೊದಲ ಮಹಡಿಯ ಕೊಠಡಿ ಸಂಖ್ಯೆ 9 ರಲ್ಲಿ ಸರ್ಕಾರಿ ಭರವಸೆಗಳ ಸಮಿತಿ ಮತ್ತು ಪತ್ರಾಗಾರ ಇಲಾಖೆಯ ಸೂಕ್ಷ್ಮ ಚಿತ್ರ ಘಟಕ ಕಾರ್ಯನಿರ್ವಹಿಸುತ್ತಿದೆ. ಪತ್ರಾಗಾರ ಇಲಾಖೆಯ ಸೂಕ್ಷ್ಮ ಚಿತ್ರ ಘಟಕದಲ್ಲಿ ಅಳವಡಿಸಿರುವ ಮೈಕ್ರೋ ಫಿಲಂ ರೀಡರ್ ಯಂತ್ರದ ಬೆಲೆಯೇ ಮೂರು ಕೋಟಿ ರೂಪಾಯಿ. ಇದನ್ನು ಬದಲಾವಣೆ ಮಾಡಿದರೆ ಮತ್ತೆ ಕಾರ್ಯನಿರ್ವಹಿಸುವುದು ಅನುಮಾನ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ಉಳಿದಂತೆ ನಂ.9 ಕೊಠಡಿ ಸಂಖ್ಯೆಯ ಪಕ್ಕದಲ್ಲೇ ಮಹಿಳಾ ಶೌಚಾಲಯವಿದ್ದು, ಈ ಕೊಠಡಿಗೆ ಸರಿಯಾಗಿ ಬಾಗಿಲು ಇಲ್ಲ. ಹಾಗಾಗಿ ಮಾಧ್ಯಮದವರಿಗೆ ಈ ಕೊಠಡಿ ನೀಡಿದರೆ ಇಲ್ಲಿ ತುಂಬಾ ಜನ ಬರುವುದರಿಂದ ಶೌಚಾಲಯಕ್ಕೆ ತೆರಳಲು ನಮಗೆ ತೊಂದರೆ ಆಗುತ್ತದೆ ಎಂದು ಮಹಿಳಾ ಸಿಬ್ಬಂದಿ ಹೇಳಿಕೊಂಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *