ಮಂಡ್ಯ: ಜಮೀನಿನ ಹಕ್ಕುಪತ್ರ ಬದಲಾವಣೆ ವಿಚಾರದಲ್ಲಿ ಸರ್ಕಾರವು ಮೈಸೂರು ರಾಜಮನೆತನಕ್ಕೆ ಮೋಸ ಮಾಡುತ್ತಿದೆ ಎನ್ನವು ಅನುಮಾನ ವ್ಯಕ್ತವಾಗಿದ್ದು, ಅಕ್ರಮ ಗಣಿಗಾರಿಕೆಗೆ ಬೆಂಬಲ ನೀಡಲು ಹೀಗೆ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ಕೇಳಿಬರುತ್ತಿವೆ.
ಮೈಸೂರು ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು, ತಮಗೆ ಸೇರಬೇಕಾದ ಜಮೀನಿನ ಹಕ್ಕು ಬದಲಾವಣೆ ಮಾಡಿಕೊಡಿ ಎಂದು ಪಾಂಡವಪುರ ತಹಶೀಲ್ದಾರ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಜಮೀನು ಸರ್ಕಾರಿ ಜಾಗ ಅಂತಾ ತಹಶೀಲ್ದಾರ್ ಪತ್ರಕ್ಕೆ ಹಿಂಬರಹ ನೀಡಿರುವ ದಾಖಲೆ ಲಭ್ಯವಾಗಿದೆ. ಈ ಮೂಲಕ ಸರ್ಕಾರ ರಾಜ ಮನೆತನಕ್ಕೆ ಮೋಸ ಮಾಡುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
Advertisement
ಪಾಂಡವಪುರ ತಾಲೂಕು ಬೇಬಿಬೆಟ್ಟದ ಕಾವಲು ಗ್ರಾಮದ ಸರ್ವೆ ನಂಬರ್ 1ರ ಅಮೃತಮಹಲ್ ಕಾವಲ್ ಜಮೀನಿನ ಖಾತೆಯನ್ನು ಕೋರಿ, ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಕಳೆದ ವರ್ಷ ಅಕ್ಟೋಬರ್ 24ರಂದು ತಹಶೀಲ್ದಾರ್‍ಗೆ ಮನವಿ ಸಲ್ಲಿಸಿದ್ದರು. ಮನವಿ ಸಲ್ಲಿಸಿದ ಒಂದು ತಿಂಗಳ ನಂತರ (ನವೆಂಬರ್ 25)ರಂದು ತಹಶೀಲ್ದಾರ್ ಹಿಂಬರಹ ನೀಡಿದ್ದಾರೆ. ಇದನ್ನೂ ಓದಿ: ಅಕ್ರಮ ಕಲ್ಲುಗಣಿಗಾರಿಕೆಗೆ ನೆರವಾದ ಆರೋಪ- ಮಾಜಿ ಸಿಎಂ ಸಿದ್ದರಾಮಯ್ಯರ ವಿರುದ್ಧ ದೂರು ದಾಖಲು
Advertisement
ತಹಶೀಲ್ದಾರ್ ಪತ್ರದಲ್ಲಿ ಏನಿದೆ?:
ಅಮೃತ ಮಹಲ್ ಕಾವಲ್‍ನಲ್ಲಿ ಬರುವ 1,487 ಎಕರೆ ಜಮೀನು ಸರ್ಕಾರಿ ಖರಾಬು ಎಂದು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಖರಾಬು ಜಮೀನನ್ನು ಖಾತೆ ಬದಲಾವಣೆ ಮಾಡುವ ಅಧಿಕಾರ ನಮ್ಮ ಪ್ರಾಧಿಕಾರದ ವ್ಯಾಪ್ತಿಗೆ ಬರುವುದಿಲ್ಲ. ಈ ಬಗ್ಗೆ ನೀವು ಮೇಲ್ಮನವಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.
Advertisement
Advertisement
ಇತ್ತ ಬೇಬಿಬೆಟ್ಟದ ಸುತ್ತಮುತ್ತ ನಿರಂತರವಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಕಳೆದ ವಾರ ನಿಷೇಧ ಹೇರಲಾಗಿದೆ. ಅಕ್ರಮ ಗಣಿಗಾರಿಕೆಗೆ ಸಹಾಯ ಮಾಡುವ ಸಲುವಾಗಿ ರಾಜಕುಟುಂಬಕ್ಕೆ ಮೋಸ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಿಂಬರಹದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv