– ಆ.11ರ ಒಳಗೆ ಸಮಾನ ಅನುದಾನ ಹಂಚಿಕೆಯಾಗದಿದ್ರೆ ಅಧಿವೇಶನದಲ್ಲಿ ಹೋರಾಟ ಎಚ್ಚರಿಕೆ
ಬೆಂಗಳೂರು: ರಾಜ್ಯ ಸರ್ಕಾರ ಜೆಡಿಎಸ್ (JDS) ಶಾಸಕರಿಗೆ ಅನುದಾನ ಬಿಡುಗಡೆ ಮಾಡದೇ ಅನ್ಯಾಯ ಮಾಡುತ್ತಿದೆ ಎಂದು ಜೆಡಿಎಸ್ ಶಾಸಕಾಂಗ ನಾಯಕ ಸುರೇಶ್ ಬಾಬು (Suresh Babu) ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಈ ಸರ್ಕಾರ ಬಂದ ಮೇಲೆ ಅಭಿವೃದ್ಧಿ ಕಾಣಿಸುತ್ತಿಲ್ಲ. ಆಡಳಿತ ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ. ಅಭಿವೃದ್ಧಿ ಕೆಲಸಕ್ಕೆ ಹಣ ಕೊಡುತ್ತಿಲ್ಲ. ಈ ಸರ್ಕಾರ ಅಭಿವೃದ್ಧಿ ಪರ ಇಲ್ಲ. ಈ ಸರ್ಕಾರದಲ್ಲಿ ಸುರ್ಜೇವಾಲ ಸೂಪರ್ ಸಿಎಂ ಆಗಿದ್ದಾರೆ. ಜನರು ಸುರ್ಜೇವಾಲಗೆ ಓಟ್ ಹಾಕಿದ್ರಾ? ಸುರ್ಜೇವಾಲ ಶಾಸಕರ ಜೊತೆ ಮಾತನಾಡುತ್ತಿದ್ದಾರೆ. ಸುರ್ಜೇವಾಲ ಹೇಳಿದ ಮೇಲೆ ಸಿಎಂ 50 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಸಿಎಂ ವಿಶೇಷ ಅಧಿಕಾರಿಗಳಿಗೆ ಪಟ್ಟಿ ಕೊಡಿ ಅಂತ ಶಾಸಕರಿಗೆ ಸಿಎಂ ಪತ್ರ ಬರೆದಿದ್ದಾರೆ. ದುಡ್ಡು ಇದ್ದರೆ ಇವರು ಯಾಕೆ ಹಣ ಕೊಡುತ್ತಿಲ್ಲ? ಹೈಕಮಾಂಡ್‌ಗೆ ಕಪ್ಪ ಕಾಣಿಕೆ ಕೊಡೋಕೆ ಈ ಸರ್ಕಾರ ಮುಂದಾಗಿದೆ. ವಿಶೇಷ ಅನುದಾನ ಅಂತ ಬಿಡುಗಡೆ ಮಾಡಿ ಅದನ್ನು ಹೈಕಮಾಂಡ್‌ಗೆ ಕಪ್ಪ-ಕಾಣಿಕೆ ಕೊಡುತ್ತಿದ್ದಾರೆ ಅನ್ನಿಸುತ್ತಿದೆ. ಸಿಎಂ ಈ ಬಗ್ಗೆ ಸ್ಪಷ್ಟೀಕರಣ ಕೊಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಅನ್ಯ ಧರ್ಮಗಳ ಪಾಲನೆ – ತಿರುಪತಿಯ ನಾಲ್ವರು ನೌಕರರ ಅಮಾನತು
ಕ್ಯಾಬಿನೆಟ್‌ನಲ್ಲಿ ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ., ಬಿಜೆಪಿ ಅವರಿಗೆ 25 ಕೋಟಿ ರೂ. ಕೊಡೋಣ ಅಂತ ಚರ್ಚೆ ಆಗಿದೆ. ಜೆಡಿಎಸ್ ಶಾಸಕರಿಗೆ ಈಗಲೇ ಅನುದಾನ ಕೊಡೋದು ಬೇಡ ಅಂತ ಇವರು ಚರ್ಚೆ ಮಾಡಿದ್ದಾರೆ. ರಾಜ್ಯದಲ್ಲಿ 224 ಶಾಸಕರು ಒಂದೇ. ಇವರೇನು ಕೆಪಿಸಿಸಿಯಿಂದ ನಮಗೆ ಹಣ ಕೊಡುತ್ತಿಲ್ಲ. ಶಾಸಕರ ನಿಧಿಯಲ್ಲಿ ಹಣ ಕೊಡಬೇಕು. ಯಾವುದೇ ತಾರತಮ್ಯ ಮಾಡದೇ ಎಲ್ಲಾ ಶಾಸಕರಿಗೆ ಅನುದಾನ ಕೊಡಬೇಕು. ಇಲ್ಲದೇ ಹೋದರೆ ರಾಜ್ಯಾದ್ಯಂತ ನಾವು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟರು. ಇದನ್ನೂ ಓದಿ: ಜೆಡಿಎಸ್-ಬಿಜೆಪಿ ಸಂಸದರು ಮೋದಿ ಮುಂದೆ ನಿಂತು ಮಾತಾಡೋಕೆ ನಡುಗುತ್ತಾರೆ: ಸಿದ್ದರಾಮಯ್ಯ ವಾಗ್ದಾಳಿ
ಜೆಡಿಎಸ್ ಶಾಸಕರಿಗೆ ಅನುದಾನ ಕೊಟ್ಟಿಲ್ಲ. ಈಗ ಮಾಡಿರೋ ಕಾಮಗಾರಿಗಳಿಗೂ ಹಣ ಬಿಡುಗಡೆ ಮಾಡಿಲ್ಲ. ಅವರ ಪಕ್ಷದವರಿಗೆ ಮಾತ್ರ ಹಣ ಬಿಡುಗಡೆ ಮಾಡುತ್ತಾರೆ. ಜೆಡಿಎಸ್ ಅವರಿಗೆ ಯಾಕೆ ಹಣ ಬಿಡುಗಡೆ ಮಾಡಿಲ್ಲ. ಎಲ್ಲಾ ಶಾಸಕರನ್ನು ಒಂದಾಗಿ ನೋಡಿ. ತಾರತಮ್ಯ ಮಾಡೋದು ಸರಿಯಲ್ಲ. ವಿಧಾನಸಭೆ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಬಿಜೆಪಿ ಶಾಸಕರಿಗೂ ಅನುದಾನ ಕೊಟ್ಟಿಲ್ಲ. ಸೂಪರ್ ಸಿಎಂ ಹೇಳಿದ ಮೇಲೆ ಕಾಂಗ್ರೆಸ್ ಶಾಸಕರಿಗೆ ಬಿಡುಗಡೆ ಮಾಡಿದ್ದಾರೆ. ಆಗಸ್ಟ್ 11ರ ಒಳಗೆ ಸಮಾನವಾಗಿ ಅನುದಾನ ಹಂಚಿಕೆ ಆಗಬೇಕು. ಇಲ್ಲದೆ ಹೋದ್ರೆ ಅಧಿವೇಶನದಲ್ಲಿ ಹೋರಾಟ ಮಾಡುತ್ತೇವೆ ಎಂದು ಖಡಕ್ ವಾರ್ನಿಮಗ್ ನೀಡಿದ್ದಾರೆ. ಇದನ್ನೂ ಓದಿ: Kolar | ಕಲಬೆರೆಕೆ ಹಾಲು ತಯಾರಿಕಾ ಘಟಕದ ಮೇಲೆ ಪೊಲೀಸರ ದಾಳಿ – ಹಾಲಿನಲ್ಲಿ ಕೆಮಿಕಲ್ ಅಂಶ ಪತ್ತೆ