ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವು ನೆರೆ ಪೀಡಿತ ಪ್ರದೇಶಗಳಿಗೆ 1,000 ಕೋಟಿ ರೂ. ಬಿಡುಗಡೆ ಮಾಡಿದೆ.
ಪ್ರವಾಹದಿಂದಾಗಿ ಹಾನಿಗೊಳಗಾದ ಮನೆಗಳ ನಿರ್ಮಾಣಕ್ಕಾಗಿ 13 ಜಿಲ್ಲೆಗಳಿಗೆ 1,000 ಕೋಟಿ ರೂ.ವನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಬೆಳಗಾವಿ ಜಿಲ್ಲೆಗಷ್ಟೇ 500 ಕೋಟಿ ರೂ. ಪರಿಹಾರ ನೀಡಲಾಗಿದ್ದು, ಉಡುಪಿ ಜಿಲ್ಲೆಗೆ 5 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಗೂ ಪರಿಹಾರ ನೀಡಲಾಗಿದೆ.
Advertisement
Advertisement
ಜಿಲ್ಲಾಧಿಕಾರಿಗಳ ಅನುಮೋದನೆ ಪ್ರಕಾರ ಪ್ರವಾಹದಿಂದಾಗಿ ವಿವಿಧ ಜಿಲ್ಲೆಗಳಲ್ಲಿ ಸಂಪೂರ್ಣವಾಗಿ 8,586 ಮನೆಗಳು ಹಾನಿಗೊಳಗಾಗಿವೆ. ಉಳಿದಂತೆ 23,942 ಮನೆಗಳು ಭಾಗಶಃ ಹಾಗೂ 59,344 ಮನೆಗಳು ಅಲ್ಪ ಸ್ವಲ್ಪ ಹಾನಿಗೊಳಗಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು 91,872 ಮನೆಗಳು ಪ್ರವಾಹಕ್ಕೆ ತುತ್ತಾಗಿವೆ. ಆದರೆ ಆನ್‍ಲೈನ್ ನಮೂದಾಗಿರುವ ಪ್ರಕಾರ ಒಟ್ಟು 1,08,643 ಮನೆಗಳು ಪ್ರವಾಹದ ಹಾನಿಗೆ ಒಳಗಾಗಿವೆ.
Advertisement
ಯಾವ ಜಿಲ್ಲೆ ಎಷ್ಟು?:
ಬೆಳಗಾವಿಗೆ 500 ಕೋಟಿ ರೂ., ಬಾಗಲಕೋಟೆಗೆ 135 ಕೋಟಿ ರೂ., ಹಾವೇರಿಗೆ 70 ಕೋಟಿ ರೂ, ಧಾರವಾಡಕ್ಕೆ 55 ಕೋಟಿ, ಚಿಕ್ಕಮಗಳೂರಿಗೆ 25 ಕೋಟಿ ರೂ., ದಕ್ಷಿಣ ಕನ್ನಡ ಜಿಲ್ಲೆಗೆ 15 ಕೋಟಿ ರೂ., ಗದಗ ಜಿಲ್ಲೆಗೆ 30 ಕೋಟಿ ರೂ., ಹಾಸನಕ್ಕೆ 20 ಕೋಟಿ ರೂ., ಕೊಡಗು 25 ಕೋಟಿ ರೂ., ಮೈಸೂರು ಜಿಲ್ಲೆಗೆ 30 ಕೋಟಿ ರೂ., ಉತ್ತರ ಕನ್ನಡ ಜಿಲ್ಲೆಗೆ 30 ಕೋಟಿ ರೂ. ಹಾಗೂ ಉಡುಪಿಗೆ 5 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.