ಬೆಳಗಾವಿ: ಹೆಚ್.ಡಿ.ಕುಮಾರಸ್ವಾಮಿ ಸರ್ಕಾರ ಕೇವಲ ಮೈಸೂರು ಕರ್ನಾಟಕಕ್ಕೆ ಮಾತ್ರ ಸೀಮಿತ ಅನ್ನೋ ಟೀಕೆ ನಡುವೆಯೇ, ಇದನ್ನು ರುಜುವಾತು ಮಾಡಿಸುವ ಘಟನೆ ಬೆಳಕಿಗೆ ಬಂದಿದೆ. ಮಂಡ್ಯಗೆ 5 ಸಾವಿರ ಕೋಟಿ ಬಿಡುಗಡೆ ಮಾಡೋ ಸರ್ಕಾರ, ಬೆಳಗಾವಿಯ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಉತ್ಸವಗಳ ಕಲಾವಿದರಿಗೆ ಲಕ್ಷಾಂತರ ರೂಪಾಯಿಗಳನ್ನು ಬಾಕಿ ಉಳಿಸಿಕೊಂಡಿದೆ.
ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ನಮ್ಮ ದೇಶದ ಹೆಮ್ಮೆ. ಚೆನ್ನಮ್ಮನ ತ್ಯಾಗ ಬಲಿದಾನ ಹಾಗೂ ಸಂಗೊಳ್ಳಿ ರಾಯಣ್ಣನ ಶೌರ್ಯವನ್ನು ಈ ಪೀಳಿಗೆಗೆ ಮುಟ್ಟಿಸಬೇಕೆಂಬ ದೃಷ್ಟಿಯಿಂದ 3 ದಿನಗಳ ಕಾಲ ಪ್ರತಿ ವರ್ಷ ಸರ್ಕಾರ ಉತ್ಸವ ನಡೆಸಿಕೊಂಡು ಬರುತ್ತಿದ್ದು, ಇವು ಕಾಟಾಚಾರಕ್ಕೆ ಸೀಮಿತವಾಗಿವೆ. ಯಾಕಂದ್ರೆ, ಉತ್ಸವದಲ್ಲಿ ಭಾಗವಹಿಸಿರೋ ಕಲವಾವಿದರಿಗೆ 30 ಲಕ್ಷಕ್ಕೂ ಹೆಚ್ಚಿನ ಹಣ ಬಾಕಿ ಉಳಿಸಿಕೊಳ್ಳಲಾಗಿದೆ. ಕಲಾವಿದರ ತಂಡ ಹಾಗೂ ಪೆಂಡಾಲ್ ಸೇರಿದಂತೆ ಇನ್ನಿತರ ಕೆಲಸಗಾರರಿಗೂ ಜಿಲ್ಲಾಡಳಿತ ಹಣ ರಿಲೀಸ್ ಮಾಡಿಲ್ಲ. ಇದರ ಮಧ್ಯೆ ಕಳೆದ ವರ್ಷ ಭಾಗವಹಿಸಿದ್ದ ಕೆಲವು ಕಲಾವಿದರಿಗೆ ನೀಡಲಾಗಿದ್ದ ಚೆಕ್‍ಗಳು ಬೌನ್ಸ್ ಆಗಿವೆ.
Advertisement
Advertisement
ಸದ್ಯ ಬೆಳವಡಿ ಉತ್ಸವ ಕೂಡ ಫೆ.28, 29 ಎರಡು ದಿನ ನಡೆಯಲಿದೆ. ಹೀಗಾಗಿ ಈ ಉತ್ಸವವೂ ಸಹ ನಿರ್ಲಕ್ಷ್ಯಕ್ಕೊಳಗಾಗಿದೆ. ಇತ್ತ ಕಲಾವಿದರು ಬೈಲಹೊಂಗಲ ಎಸಿ ಶಿವಾನಂದ ಬಳಿ ಹೋದ್ರೇ ಕನ್ನಡ ಸಂಸ್ಕೃತಿ ಇಲಾಖೆಯನ್ನ ಕೇಳಿ ಎನ್ನುತ್ತಿದ್ದಾರೆ. ಇದನ್ನು ಮಾಧ್ಯಮಗಳಿಗೆ ಹೇಳಿದರೆ ಮುಂದಿನ ದಿನಗಳಲ್ಲಿ ಯಾವುದೇ ಅವಕಾಶ ಕೊಡಲ್ಲ ಅಂತಲೂ ಧಮಕಿ ಹಾಕ್ತಿದ್ದಾರೆ.
Advertisement
ಒಟ್ಟಿನಲ್ಲಿ ಮಂಡ್ಯಗೆ ಮೊನ್ನೆಯಷ್ಟೇ 5 ಸಾವಿರ ಕೋಟಿ ರಿಲೀಸ್ ಮಾಡಿರೋ ದೋಸ್ತಿ ಸರ್ಕಾರ, ಬೆಳಗಾವಿಗ್ಯಾಕೆ ಈ ಪರಿ ತಾರತಮ್ಯ ಮಾಡ್ತಿದೆ ಎಂದು ಕಲಾವಿದರು ಪ್ರಶ್ನೆ ಮಾಡುತ್ತಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv