– 2018ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ
– ರವಿ ಬಸ್ರೂರ್‌ಗೆ ಅತ್ಯುತ್ತಮ ಸಂಗೀತ ನಿರ್ದೇಶನ ಪ್ರಶಸ್ತಿ
ಬೆಂಗಳೂರು: 2018ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ನಿರ್ದೇಶಕ ಜೋಸೈಮನ್ ನೇತೃತ್ವದ ಆಯ್ಕೆ ಸಮಿತಿ 162 ಚಿತ್ರಗಳನ್ನ ವೀಕ್ಷಿಸಿ ಪ್ರಶಸ್ತಿ ಆಯ್ಕೆ ಮಾಡಿದ್ದಾರೆ. ಜೊತೆಗೆ ನಿರ್ಮಾಪಕ, ನಟ ಬಸಂತಕುಮಾರ್ ಪಾಟೀಲ್ ನೇತೃತ್ವದ ಸಮಿತಿ ಜೀವಮಾನ ಸಾಧನೆಗಳ ಪ್ರಶಸ್ತಿಯನ್ನು ಆಯ್ಕೆ ಮಾಡಿದೆ.
Advertisement
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ವಾರ್ತಾ ಸಚಿವರು ಆದ ಸಿಎಂ ಯಡಿಯೂರಪ್ಪ ಪ್ರಶಸ್ತಿ ಪ್ರಕಟಿಸಿದರು. ಅತ್ಯುತ್ತಮ ನಟ ಪ್ರಶಸ್ತಿಗೆ ರಾಘವೇಂದ್ರ ರಾಜ್‌ಕುಮಾರ್, ಅತ್ಯುತ್ತಮ ನಟಿ ಪ್ರಶಸ್ತಿಗೆ ಮೇಘನಾ ರಾಜ್ ಆಯ್ಕೆಯಾಗಿದ್ದಾರೆ. ಆ ಕರಾಳ ರಾತ್ರಿ ಅತ್ಯುತ್ತಮ ಚಿತ್ರವಾಗಿ ಆಯ್ಕೆಯಾಗಿದೆ. ರಾಜ್ಯ ಚಲನಚಿತ್ರ ಪ್ರಶಸ್ತಿ ವಿವರ ಕೆಳಕಂಡತೆ ಇವೆ.
Advertisement
ಯಾರಿಗೆ ಯಾವ ಪ್ರಶಸ್ತಿ?
ಜೀವಮಾನ ಸಾಧನೆ, ಡಾ.ರಾಜ್‌ಕುಮಾರ್ ಪ್ರಶಸ್ತಿ – ಶ್ರೀನಿವಾಸ್ ಮೂರ್ತಿ
ಪುಟ್ಟಣ್ಣ ಕಣಗಾಲ್ ಪ್ರಶಸ್ತಿ – ಪಿ. ಶೇಷಾದ್ರಿ, ನಿರ್ದೇಶಕ
ವಿಷ್ಣುವರ್ಧನ್ ಪ್ರಶಸ್ತಿ – ಬಿ.ಎಸ್. ಬಸವರಾಜು
Advertisement
Advertisement
ಅತ್ಯುತ್ತಮ ನಟ – ರಾಘವೇಂದ್ರ ರಾಜ್‌ಕುಮಾರ್(ಅಮ್ಮನ ಮನೆ)
ಅತ್ಯುತ್ತಮ ನಟಿ – ಮೇಘನಾ ರಾಜ್(ಇರುವುದೆಲ್ಲವ ಬಿಟ್ಟು)
ಅತ್ಯುತ್ತಮ ಸಂಗೀತ ನಿರ್ದೇಶನ – ರವಿ ಬಸ್ರೂರ್ (ಕೆಜಿಎಫ್)
ಅತ್ಯುತ್ತಮ ಮೊದಲ ಚಿತ್ರ – ಆ ಕರಾಳ ರಾತ್ರಿ
ಅತ್ಯುತ್ತಮ ಎರಡನೇ ಚಿತ್ರ – ರಾಮನ ಸವಾರಿ
ಅತ್ಯುತ್ತಮ ಮೂರನೇ ಚಿತ್ರ – ಒಂದಲ್ಲ ಎರಡಲ್ಲ
ವಿಶೇಷ ಸಾಮಾಜಿಕ ಕಳಕಳಿ ಚಿತ್ರ – ಸಂತಕವಿ ಕನಕದಾಸರ ರಾಮಧಾನ್ಯ
ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು
ಅತ್ಯುತ್ತಮ ಮಕ್ಕಳ ಚಿತ್ರ – ಹೂವು ಬಳ್ಳಿ
ಅತ್ಯುತ್ತಮ ಪ್ರಥಮ ನಿರ್ದೇಶನದ ಚಿತ್ರ – ಬೆಳಕಿನ ಕನ್ನಡಿ
ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ – ದೇಯಿ ಬೈದೇತಿ(ತುಳು)
ಅತ್ಯುತ್ತಮ ಪೋಷಕ ನಟ – ಬಾಲಾಜಿ ಮನೋಹರ್(ಚೂರಿಕಟ್ಟೆ)
ಅತ್ಯುತ್ತಮ ಪೋಷಕ ನಟಿ – ವೀಣಾ ಸುಂದರ್(ಆ ಕರಾಳ ರಾತ್ರಿ)
ಅತ್ಯುತ್ತಮ ಕತೆ – ನಾಯಿಗೆರೆ(ಹರೀಶ್.ಎಸ್)
ಅತ್ಯುತ್ತಮ ಚಿತ್ರಕತೆ – ಮೂಕಜ್ಜಿಯ ಕನಸುಗಳು(ಪಿ.ಶೇಷಾದ್ರಿ)
ಅತ್ಯುತ್ತಮ ಸಂಭಾಷಣೆ – ಶಿರಿಷಾ ಜೋಶಿ(ಸಾವಿತ್ರಿಬಾಯಿ ಫುಲೆ)
ಅತ್ಯುತ್ತಮ ಛಾಯಾಗ್ರಹಣ – ನವೀನ್ ಕುಮಾರ್(ಅಮ್ಮಚ್ಚಿಯೆಂಬ ನೆನಪು)
ಅತ್ಯುತ್ತಮ ಸಂಕಲನ – ಸುರೇಶ್ ಆರುಗ್ಮಂ(ತ್ರಾಟಕ)
ಅತ್ಯುತ್ತಮ ಬಾಲನಟ – ಮಾಸ್ಟರ್ ಆರ್ಯನ್(ರಾಮನ ಸವಾರಿ)
ಅತ್ಯುತ್ತಮ ಬಾಲನಟಿ – ಬೇಬಿ ಸಿಂಚನ(ಅಂದವಾದ)
ಅತ್ಯುತ್ತಮ ಕಲಾ ನಿರ್ದೆಶನ – ಶಿವಕುಮಾರ್ ಜೆ(ಕೆಜಿಎಫ್)
ಅತ್ಯುತ್ತಮ ಗೀತ ರಚನೆ – ಬರಗೂರು ರಾಮಚಂದ್ರಪ್ಪ(ಸಾವೇ.. ಸಾವೇ.. ಗೀತೆ)
ಅತ್ಯುತ್ತಮ ಹಿನ್ನಲೆ ಗಾಯಕಿ – ಕಲಾವತಿ ದಯಾನಂದ(ದೇಯಿ ಬೈದೇತಿ)
ಹಿನ್ನಲೆ ಗಾಯಕ – ಸಿದ್ಧಾರ್ಥ