ಬೆಂಗಳೂರು: ರಾಜ್ಯದ 2016 ಮತ್ತು 17ನೇ ಸಾಲಿನ ಇ- ಆಡಳಿತ ಪ್ರಶಸ್ತಿ ಈ ಬಾರಿ ಬೆಂಗಳೂರು ನಗರ ಪೊಲೀಸರಿಗೆ ಲಭಿಸಿದೆ. ರಾಜ್ಯ ಸರ್ಕಾರ ಈ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ನಗರ ಪೊಲೀಸರ ಘಟಕದ ಎರಡು ವಿಭಾಗಳಿಗೆ ಬೆಸ್ಟ್ ಇ-ಆಡಳಿತ ಪ್ರಶಸ್ತಿ ಸಿಕ್ಕಿದೆ.
ಕಳೆದ ವರ್ಷ ಸ್ಥಾಪನೆಯಾದ ಸಾಮಾಜಿಕ ಜಾಲತಾಣದ ಕಮಾಂಡ್ ಸೆಂಟರ್ ನ ನಮ್ಮ 100 ಜಿಐಎಸ್ ತಂತ್ರಜ್ಞಾನ ಮತ್ತು ಮೊಬೈಲ್ ತಂತ್ರಜ್ಞಾನದ ಇ ಲಾಸ್ಟ್ ಮತ್ತು ಫೌಂಡ್ ಆ್ಯಪ್‍ಗೆ ಪ್ರಶಸ್ತಿ ಲಭಿಸಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಪ್ರಶಸ್ತಿ ಘೋಷಣೆ ಮಾಡಿದ್ದು. ನಗರ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್ ಪ್ರಶಸ್ತಿ ಪತ್ರದ ಜೊತೆಗೆ ಹತ್ತು ಲಕ್ಷ ಬಹುಮಾನ ಸ್ವೀಕರಿಸಿದ್ರು.
Advertisement
Advertisement
ಈ ಆ್ಯಪ್‍ಗಳ ಮುಖ್ಯ ಉದ್ದೇಶ ಸಾರ್ವಜನಿಕ ಸೇವೆಗಳನ್ನು ಮಿತವ್ಯಯದೊಂದಿಗೆ ತ್ವರಿತವಾಗಿ ಬಳಕೆದಾರರಿಗೆ ನೀಡುವುದರೊಂದಿಗೆ ಇ ಆಡಳಿತ ಕ್ಷೇತ್ರದಲ್ಲಿ ಸುಸ್ಥಿರ ಮತ್ತು ತಾಂತ್ರಿಕ ಉಪಕ್ರಮಿಕೆಗಳನ್ನು ವಿನ್ಯಾಸ ಮತ್ತು ಅನುಷ್ಠಾನ ಹೊಚ್ಚ ಹೊಸ ಅವಿಷ್ಕಾರಗಳಿಗೆ ಪ್ರೋತ್ಸಾಹ ನೀಡುವುದಾಗಿದೆ.
Advertisement
ಈ ಎರಡು ವಿಭಾಗ ಸಿಬ್ಬಂದಿಗೆ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಅಭಿನಂದನೆ ಸಲ್ಲಿಸಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv