ಬೆಂಗಳೂರು: ನಟ ದುನಿಯಾ ವಿಜಯ್ ವಿರುದ್ಧ ಮಹಿಳಾ ಆಯೋಗದ ಮೆಟ್ಟಿಲೇರಿದ್ದ ಪುತ್ರಿ ಮೋನಿಷಾರ ದೂರಿನ ಮೇರೆಗೆ ಆಯೋಗ ವಿಜಿಗೆ ನೋಟಿಸ್ ನೀಡಿದೆ.
ಮಹಿಳಾ ಮತ್ತು ಮಕ್ಕಳ ಆಯೋಗಕ್ಕೆ ಕಳೆದ ಕೆಲ ದಿನಗಳ ಹಿಂದೆ ಮನವಿ ಸಲ್ಲಿಸಿದ್ದ ಮೋನಿಷಾರ ದೂರನ್ನು ಸ್ವೀಕರಿಸಿರುವ ಆಯೋಗ ನ. 12 ಅಥವಾ 13 ರಂದು ಆಯೋಗದ ಮುಂದೆ ಖುದ್ದು ಹಾಜರಾಗುವಂತೆ ವಿಜಯ್ ಅವರಿಗೆ ನೋಟೀಸ್ ಜಾರಿ ಮಾಡಿದೆ. ಈ ವೇಳೆ ಅಪ್ಪ ಮಕ್ಕಳ ಮಧ್ಯೆ ಸಂಧಾನ ನಡೆಸುವ ಸಾಧ್ಯತೆ ಇದ್ದು, ವಿಜಿ ಅವರಿಗೆ ಸಂಕಷ್ಟವಾಗಿಯೂ ಪರಿಣಮಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
Advertisement
Advertisement
ಆಯೋಗದ ಮುಂದೇ ಅಪ್ಪ-ಮಗಳು ಇಬ್ಬರು ಹಾಜರಾಗಲಿದ್ದು, ಇಬ್ಬರಿಗೂ ಕೌನ್ಸಿಲಿಂಗ್ ಮಾಡುವ ಕೆಲಸ ನಡೆಯಲಿದೆ. ಒಂದೊಮ್ಮೆ ವಿಜಿ ಮನವೊಲಿಕೆ ವಿಫಲವಾದರೆ ಆಯೋಗ ವಿಜಿ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯೂ ಇದೆ. ಇದರೆ ಜೊತೆಗೆ ವಿಜಿ ಮಕ್ಕಳ ಮುಂದಿನ ವಿದ್ಯಾಭ್ಯಾಸ ಹಾಗೂ ಮಕ್ಕಳ ಮುಂದಿನ ಭವಿಷ್ಯಕ್ಕೆ ಆರ್ಥಿಕ ಸಹಾಯ ಯಾವ ರೀತಿ ಇರಲಿದೆ ಎಂಬುವುದರ ಬಗ್ಗೆ ಆಯೋಗ ಪರಾಮರ್ಶಿಸಲಿದ್ದು, ವಿಜಿ ಕಡೆಯಿಂದ ಲಿಖಿತವಾಗಿ ಬರೆಸಿಕೊಳ್ಳುವ ಸಾಧ್ಯತೆ ಇದೆ.
Advertisement
ಅ.30 ರಂದು ವಿಜಯ್ ಅವರ ಪುತ್ರಿ ಮೋನಿಷಾ ಮಹಿಳಾ ಆಯೋಗದಲ್ಲಿ ಅಪ್ಪ-ಅಮ್ಮನ ಗಲಾಟೆಯಲ್ಲಿ ನಮಗೆ ತೊಂದರೆಯಾಗುತ್ತಿದೆ. ಆರ್ಥಿಕವಾಗಿಯೂ ಅಪ್ಪನಿಂದ ಸಹಾಯ ಸಿಗುತ್ತಿಲ್ಲ. ಹೀಗಾಗಿ ಕೂಡಲೇ ಆಯೋಗ ಮಧ್ಯಪ್ರವೇಶ ಮಾಡಿ ಇದನ್ನು ಬಗೆಹರಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv