ಬೆಂಗಳೂರು: ನಟಿ ಶೃತಿ ಹರಿಹರನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಅರ್ಜುನ್ ಸರ್ಜಾ ವಿರುದ್ಧ ಇದೀಗ ಮತ್ತೊಂದು ಕೇಸ್ ದಾಖಲಾಗಿದೆ.
ಮಹಿಳಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಈ ಬಗ್ಗೆ ತನಿಖೆ ಮಾಡಿ ನಮಗೆ ವರದಿ ಸಲ್ಲಿಸಿ ಅಂತ ಆಯೋಗ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದೆ ಎಂಬುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.
Advertisement
Advertisement
ಶೃತಿ ಹರಿಹರನ್ ಅವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಈ ಬೆನ್ನಲ್ಲೇ ಮಹಿಳಾ ಆಯೋಗ್ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ. ಇದರ ಜೊತೆಗೆ ಶೃತಿ ಹರಿಹರನ್ ಜೊತೆಯೂ ದೂರವಾಣಿ ಸಂಪರ್ಕ ಮಾಡಿ ಮಾತುಕತೆಯನ್ನು ನಡೆಸಲಾಗಿದೆ. ಇಷ್ಟು ಮಾತ್ರವಲ್ಲದೇ ಅರ್ಜುನ್ ಸರ್ಜಾ ಅವರಿಗೆ 3 ದಿನಗಳ ಕಾಲವಕಾಶ ಕೊಟ್ಟು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೂಡ ನೀಡಲಾಗಿದೆ.
Advertisement
Advertisement
ಪ್ರಕರಣ ಸಂಬಂಧ ಎಫ್‍ಐಆರ್ ಅನ್ನು ಮಹಿಳಾ ಆಯೋಗ ಈಗಾಗಲೇ ಪಡೆದುಕೊಂಡಿದೆ. ಘಟನೆಯ ಬಗ್ಗೆ ಅರ್ಜುನ್ ಸರ್ಜಾ ಹೇಳಿಕೆ ಹಾಗೂ ಶೃತಿ ದೂರು ಎಲ್ಲವನ್ನೂ ಮಹಿಳಾ ಆಯೋಗ ಕ್ರೂಢೀಕರಿಸಿಕೊಂಡಿದೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv