ಬಳ್ಳಾರಿ: ಈ ಚುನಾವಣಾ ವರ್ಷ ಆಗಿರುವುದರಿಂದ ರಾಜ್ಯದ ಬಜೆಟ್ ನ್ನು ಮಾರ್ಚ್ ಬದಲಿಗೆ ಫೆಬ್ರವರಿ ತಿಂಗಳಲ್ಲಿ ಮಂಡಿಸುವುದಾಗಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಸರ್ಕಾರ ಅರ್ಥಿಕ ವರ್ಷವನ್ನು ಜನವರಿಯಿಂದ ಜಾರಿಗೆ ತರವ ಚಿಂತನೆ ಸರಿಯಲ್ಲ. ನಾನು ಅದನ್ನು ಒಪ್ಪುವುದಿಲ್ಲ ಎಂದರು.
Advertisement
ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಲು ತಾವು ಮುಕ್ತರಾಗಿದ್ದು ಅವರ ತಾಯಿ ಬೇಡ ಎಂದಿದ್ದಾರೆ. ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡಿಲ್ಲ ಎಂದ ಸಿಎಂ, ಈ ಹಿಂದೆ ಸಿಬಿಐ ಯನ್ನು ಚೋರ್ ಬಚಾವ್ ಎನ್ನುತ್ತಿದ್ದವರು ಈಗ ಸಿಬಿಐಗೆ ವಹಿಸಿ ಎನ್ನುತ್ತಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು.
Advertisement
ಗಣಿ ಅಕ್ರಮದ ವಿಷಯ ಎಸ್‍ಐ ಟಿಗೆ ವಹಿಸಿದೆ ಅವರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಇನ್ನು ಆಂದ್ರ ಮತ್ತು ಕರ್ನಾಟಕ ನಡುವಿನ ಗಣಿ ಗಡಿ ವಿವಾದ ಸರ್ವೆ ಮೂಲಕ ಬಗೆಹರಿಸಲು ತಾವು ಸಿದ್ಧರಿರುವುದಾಗಿ ತಿಳಿಸಿದರು.
Advertisement
ಇದೆ ವೇಳೆ ವೀರಶೈವ ಲಿಂಗಾಯತ ವಿವಾದ ಪ್ರಶ್ನೆಗೆ ಉತ್ತರಿಸುವುದಿಲ್ಲ ಎಂದು ಪ್ರತಿಕ್ರಿಯಿಸಿದರು.