ಗೊರ್ಮಾನ್(ಟೆಕ್ಸಾಸ್): ತಾತ್ಕಲಿಕ ಮನೆಯ (ಕಟ್ಟಿಗೆ ಮನೆ) ಬುಡದಲ್ಲಿ 30 ಅಧಿಕ ಹಾವುಗಳು ಪತ್ತೆಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಬೇಟೆಗೆ ತೆರಳುವರಿಗಾಗಿ ನಿರ್ಮಿಸಲಾಗಿದ್ದ ಮನೆಯ ಬುಡದಲ್ಲಿ ಹಾವುಗಳು ಪತ್ತೆಯಾಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಶಾಕಿಂಗ್ ಪ್ರತಿಕ್ರಿಯೆಗಳನ್ನು ಕಮೆಂಟ್ ಮೂಲಕ ನೀಡಿದ್ದಾರೆ. ಬಾಬಿ ಕೋವನ್ ಎಂಬವರ ಮನೆಯ ಅಡಿಯಲ್ಲಿ ಹಾವುಗಳು ಪತ್ತೆಯಾಗಿದ್ದು, ಬಾಬಿ ತಮ್ಮ ಫೇಸ್‍ಬುಕ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿಕೊಂಡಿದ್ದಾರೆ. ಟೆಕ್ಸಾಸ್ ನ ಗೋರ್ಮಾನ್ ಎಂಬಲ್ಲಿ ಮಂಗಳವಾರ ಹಾವುಗಳು ಕಂಡುಬಂದಿವೆ.
Advertisement
ಮಂಗಳವಾರ ಬಾಬಿ ತನ್ನ ಗೆಳೆಯರೊಂದಿಗೆ ಮನೆಯಲ್ಲಿ ಕೆಲಸದಲ್ಲಿ ನಿರರತಾಗಿದ್ದರು. ಈ ವೇಳೆ ಮನೆಯ ತಳದ ಕಟ್ಟಿಗೆ ಚಿಕ್ಕ ರಂಧ್ರದಿಂದ ಹಾವು ಬಂದಿದೆ. ಹೀಗೆ ಒಂದರ ನಂತರ ಎರಡ್ಮೂರು ಹಾವುಗಳು ಕಾಣಿಸಿಕೊಂಡಿವೆ. ಭಯಬೀತರಾದ ಬಾಬಿ ಗೆಳೆಯರೊಂದಿಗೆ ಚರ್ಚಿಸಿ ಮನೆಯ ತಳಭಾಗವನ್ನು ಎತ್ತಿದ್ದಾರೆ. ಮನೆಯ ತಳಭಾಗ ಮೇಲೆ ಎತ್ತಿದ್ದ ಕೂಡಲೇ ಸುಮಾರು 30ಕ್ಕೂ ಅಧಿಕ ಹಾವುಗಳು ಕಾಣಿಸಿಕೊಂಡಿವೆ.
Advertisement
ಫೇಸ್‍ಬುಕ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿಕೊಂಡ ಕೆಲವೇ ಗಂಟೆಯಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ಹಲವರು ಅಲ್ಲೇ ಅವುಗಳಿಗೆ ಬೆಂಕಿ ಹಚ್ಚಿ. ಅಪಾಯಕಾರಿ ಹಾವುಗಳು ಎಂದು ಬರೆದ್ರೆ. ಪ್ರಾಣಿಗಳಿಗೂ ಜೀವವಿದೆ ರಕ್ಷಿಸಿ ಎಂದು ಕಮೆಂಟ್ ಮಾಡಿದ್ದಾರೆ.
Advertisement
ಬಾಬಿ ಸ್ಥಳಕ್ಕೆ ಉರಗ ತಜ್ಞರನ್ನು ಕರೆಸಿ ಎಲ್ಲ ಹಾವುಗಳನ್ನು ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
Advertisement
https://www.facebook.com/bobbyjessica.cowan/videos/10217172379971129/
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv