ಬೆಳಗ್ಗೆ ಏನಾದ್ರೂ ಆರೋಗ್ಯಕರ ಆಹಾರ ಸೇವಿಸಿದಾಗ ಮಾತ್ರವೇ ಆ ದಿನವಿಡೀ ಉಲ್ಲಾಸಮಯವಾಗಿರುತ್ತದೆ. ದಿನದ ಇತರ ಸಮಯಗಳಿಗಿಂತಲೂ ಬೆಳಗ್ಗೆ ಹೆಚ್ಚು ಆಹಾರ ಸೇವಿಸುವುದು ಕೂಡಾ ಒಳ್ಳೆಯದೇ. ನಾವಿಂದು ನಿಮ್ಮ ಹೊಟ್ಟೆಗೆ ಆರೋಗ್ಯಕರವಾದ ಸಾಕಷ್ಟು ತರಕಾರಿಗಳಿಂದ ಮಾಡುವ ಟೇಸ್ಟಿ ಗಂಜಿ ರೆಸಿಪಿಯೊಂದನ್ನು ಹೇಳಿಕೊಡುತ್ತೇವೆ. ಈ ಅಡುಗೆಯನ್ನೊಮ್ಮೆ ನೀವು ಟ್ರೈ ಮಾಡಿ, ಸವಿದು ದಿನವನ್ನು ಪ್ರಾರಂಭಿಸಿ.
Advertisement
ಬೇಕಾಗುವ ಪದಾರ್ಥಗಳು:
ನೆನೆಸಿದ ಅಕ್ಕಿ – 1 ಕಪ್
ನೆನೆಸಿದ ಹೆಸರು ಬೇಳೆ – ಕಾಲು ಕಪ್
ಈರುಳ್ಳಿ – 1
ಟೊಮೆಟೋ – 1
ಕ್ಯಾರೆಟ್ – 1
ಬೀನ್ಸ್ – 5
ಆಲೂಗಡ್ಡೆ – 1
ಬಟಾಣಿ – 1 ಟೀಸ್ಪೂನ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಮೆಣಸಿನ ಪುಡಿ – 1 ಟೀಸ್ಪೂನ್
ಗರಂ ಮಸಾಲೆ ಪುಡಿ – 1 ಟೀಸ್ಪೂನ್
ಅರಿಶಿನ ಪುಡಿ – 1 ಟೀಸ್ಪೂನ್
ಮೊಸರು – ಕಾಲು ಕಪ್ ಇದನ್ನೂ ಓದಿ: ಮನೆಯಲ್ಲೇ ಟ್ರೈ ಮಾಡಿ ಆರೋಗ್ಯಕರ ದಾಸವಾಳ ಟೀ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಕುಕ್ಕರ್‌ನಲ್ಲಿ ನೆನೆಸಿದ ಅಕ್ಕಿ, ಹೆಸರು ಬೇಳೆ ಹಾಕಿ.
* ಈರುಳ್ಳಿ, ಟೊಮೆಟೋ, ಪುದೀನಾ, ಕೊತ್ತಂಬರಿ ಸೊಪ್ಪು, ಹಾಗೂ ಎಲ್ಲಾ ತರಕಾರಿಗಳನ್ನು ಹೆಚ್ಚಿ ಹಾಕಿ.
* ನಂತರ ಎಲ್ಲಾ ಮಸಾಲೆ ಪುಡಿಗಳನ್ನು ಸೇರಿಸಿ.
* ಮೊಸರು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಗೂ 4 ಕಪ್ ನೀರು ಸೇರಿಸಿ.
* ಬಳಿಕ ಕುಕ್ಕರ್‌ನ ಮುಚ್ಚಳ ಮುಚ್ಚಿ, 5-6 ಸೀಟಿ ಬರುವವರೆಗೆ ಬೇಯಿಸಿಕೊಳ್ಳಿ.
* ಕುಕ್ಕರ್ ಸ್ವಲ್ಪ ತಣ್ಣಗಾದ ಬಳಿಕ ಅದರಲ್ಲಿರುವ ಮಿಶ್ರಣವನ್ನು ಸ್ವಲ್ಪ ಮ್ಯಾಶ್ ಮಾಡಿಕೊಳ್ಳಿ.
* ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. 5 ನಿಮಿಷ ಬಿಸಿ ಮಾಡಿ.
* ಬಳಿಕ ಒಂದು ಸಣ್ಣ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಜೀರಿಗೆ, ಕರಿಬೇವು ಸೇರಿಸಿ, ಒಗ್ಗರಣೆ ತಯಾರಿಸಿ.
* ಒಗ್ಗರಣೆಯನ್ನು ಗಂಜಿಗೆ ಸೇರಿಸಿ, ಮಿಶ್ರಣ ಮಾಡಿ.
* ಇದೀಗ ಟೇಸ್ಟಿ ವೆಜ್‌ಟೇಬಲ್ ಗಂಜಿ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಆರೋಗ್ಯಕರ ರಷ್ಯನ್ ಮಶ್ರೂಮ್ ಸೂಪ್ ಟ್ರೈ ಮಾಡಿ
Advertisement
Web Stories