ಚಿಕ್ಕಬಳ್ಳಾಪುರ: ನಟ ದಿಗಂತ್, ನಟಿ ಐಂದ್ರಿತಾ ರೈ ಸೇರಿದಂತೆ ಹರ್ಷಿಕಾ ಪೂಣಚ್ಚ ಹಾಗೂ ಪ್ರಜ್ವಲ್ ದೇವರಾಜ್ ಚುನಾವಣಾ ಪ್ರಚಾರಕ್ಕೆ ಧುಮುಕಿದ್ದಾರೆ.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಕೆ.ಸುಧಾಕರ್ ಪರವಾಗಿ ನಟ ದಿಗಂತ್ ಹಾಗೂ ಐಂದ್ರಿತಾ ರೈ ಚಿಕ್ಕಬಳ್ಳಾಪುರ ನಗರದ ವಿವಿಧ ವಾರ್ಡ್‍ಗಳ ಮನೆ-ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ.
ಇನ್ನೂ ಮತ್ತೊಂದೆಡೆ ನಟಿ ಹರ್ಷಿಕಾ ಪೂಣಚ್ಚ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ನಗರದ ಎಂ.ಜಿ ರಸ್ತೆಯಲ್ಲಿ ಮತಯಾಚನೆ ನಡೆಸುತ್ತಿದ್ದಾರೆ. ಉಳಿದಂತೆ ಮತ್ತೊಂದು ವಾರ್ಡಿನಲ್ಲಿ ನಟ ಪ್ರಜ್ವಲ್ ಮನೆ ಮನೆಗೆ ತೆರಳಿ ಶಾಸಕ ಸುಧಾಕರ್ ಪರವಾಗಿ ಮತಯಾಚನೆಯಲ್ಲಿ ತೊಡಗಿದ್ದಾರೆ.
ಇನ್ನೂ ಬಿಸಲಿನ ತಾಪದಿಂದ ಪಾರಾಗಲು ನಟಿ ಐಂದ್ರಿತಾ ರೈ ಛತ್ರಿ ಹಿಡಿದುಕೊಂಡು ಮತಯಾಚನೆ ಮಾಡುತ್ತಿದ್ದಾರೆ.