ನವದೆಹಲಿ: ಸ್ಟಾರ್ ಇಂಡಿಯಾ ಭಾರತದಲ್ಲಿ ಕ್ರಿಕೆಟ್ ನ ನೇರಪ್ರಸಾರ ಹಾಗೂ ಡಿಜಿಟಲ್ ಹಕ್ಕುಗಳಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದ್ದು, ಮುಂದಿನ ಐದು ವರ್ಷಗಳ ಅವಧಿ (2018-2023) ಗೆ ಭಾರತದ ಕ್ರಿಕೆಟ್ ನ ನೇರಪ್ರಸಾರ ಹಕ್ಕನ್ನು ದಾಖಲೆಯ 6,138 ಕೋಟಿ ರೂಪಾಯಿಗೆ ಸ್ಟಾರ್ ಇಂಡಿಯಾ ಖರೀದಿಸಿದೆ.
ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಇ-ಮಾರಾಟದಲ್ಲಿ ಸೋನಿ ಮತ್ತು ರಿಲಯನ್ಸ್ ಜಿಯೋ ಸಂಸ್ಥೆಯನ್ನು ಹಿಂದಿಕ್ಕಿದ ಸ್ಟಾರ್ ಇಂಡಿಯಾ ವಿಶ್ವ ಕ್ರಿಕೆಟ್ ನೇರಪ್ರಸಾರ ಒಪ್ಪಂದವನ್ನು ಪಡೆದಿದೆ. ಈ ಒಪ್ಪಂದವೂ ಏಪ್ರಿಲ್ 2018 ರಿಂದ ಮಾರ್ಚ್ 2023ರ ಅವಧಿಯವರೆಗೂ ಚಾಲ್ತಿಯಲ್ಲಿದೆ. ಇದೇ ಮೊದಲ ಬಾರಿಗೆ ಬಿಸಿಸಿಐ ಮಾಧ್ಯಮ ಹಕ್ಕುಗಳ ಮಾರಾಟವನ್ನು ಇ-ಬಿಡಿಂಗ್ ಮೂಲಕ ನಡೆಸಿತು.
Advertisement
Advertisement
ಮೂರು ದಿನಗಳ ಅವಧಿಯಲ್ಲಿ ನಡೆದ ಬಿಡ್ ಮಂಗಳವಾರ ಹಾಗೂ ಬುಧವಾರ ಬಿಡ್ ಮೊತ್ತ ಹೆಚ್ಚಳಕ್ಕೆ 1 ಗಂಟೆಯ ಅವಧಿ ನೀಡಲಾಗಿತ್ತು. ಗುರುವಾರ ಈ ಅವಧಿಯನ್ನು 30 ನಿಮಿಷಕ್ಕೆ ಇಳಿಸಲಾಗಿತ್ತು. ಕ್ರಮವಾಗಿ ಮಂಗಳವಾರ ಹಾಗೂ ಬುಧವಾರ ಅಂತ್ಯಕ್ಕೆ 4,442 ಕೋಟಿ ರೂ., 6,032.50 ಕೋಟಿ ರೂ.ಗೆ ಹೆಚ್ಚಳವಾಗಿತ್ತು. ಕೊನೆಯ ದಿನವಾದ ಗುರುವಾರ ಸಣ್ಣ ಪ್ರಮಾಣದಲ್ಲಿ ಬಿಡ್ ಮೊತ್ತ ಏರಿಕೆ ಕಂಡು 6,138 ಕೋಟಿ ರೂ. ಗಳಿಗೆ ಸ್ಟಾರ್ ಸಂಸ್ಥೆ ಹಕ್ಕು ಪಡೆಯಿತು.
Advertisement
ಬಿಸಿಸಿಐ ಈ ಬಿಡ್ ಮುಕ್ತಾಯದ ನಂತರ ಮೊದಲ ವರ್ಷ ನಡೆಯುವ ಪ್ರತಿ ಪಂದ್ಯಕ್ಕೆ 46 ಕೋಟಿ ರೂ. ಪಡೆಯಲಿದೆ. ಎರಡನೇ ಹಾಗೂ ಮೂರನೇ ವರ್ಷದಲ್ಲಿ ಕ್ರಮವಾಗಿ ಈ ಮೊತ್ತ 47 ಕೋಟಿ ರೂ., 46.50 ಕೋಟಿ ರೂ. ಗೆ ಹೆಚ್ಚಾಗಲಿದೆ. ಒಪ್ಪಂದ ಕೊನೆಯ ವರ್ಷದ ವೇಳೆ ಈ ಮೊತ್ತ ಪ್ರತಿ ಪಂದ್ಯಕ್ಕೆ 78.90 ಕೋಟಿ ರೂ. ಪಡೆಯಲಿದೆ.
Advertisement
ಕಳೆದೊಂದು ವರ್ಷದಲ್ಲಿ ಬಿಸಿಸಿಐ 25 ಸಾವಿರ ಕೋಟಿಗೂ ಅಧಿಕ ಮೊತ್ತದ ಒಪ್ಪಂದ ಪಡೆದಿದೆ. ಐಪಿಎಲ್ ಶೀರ್ಷಿಕೆ ಒಪ್ಪಂದಕ್ಕೆ (ವಿವೋ ಸಂಸ್ಥೆ)2,199 ಕೋಟಿ ಹಾಗೂ ಟೀಂ ಪ್ರಾಯೋಜಕತ್ವಕ್ಕೆ (ಒಪ್ಪೊ ಮೊಬೈಲ್ ಸಂಸ್ಥೆ)1,079 ಕೋಟಿ ರೂ. ಒಪ್ಪಂದ ಮಾಡಿಕೊಂಡಿದೆ. ಸ್ಟಾರ್ ಸಂಸ್ಥೆ ಐಪಿಎಲ್ ಮಾರಾಟ ಹಕ್ಕುಗಳನ್ನು 2.55 ಶತಕೋಟಿ ಯುಎಸ್ ಡಾಲರ್ (ಸುಮಾರು 16,347 ಕೋಟಿ ರೂ. ಗಳಿಗೆ)ಪಡೆದುಕೊಂಡಿತ್ತು.
ವಿಶ್ವ ಇತರೇ ಲೀಗ್‍ಗಳ ಪ್ರತಿ ಪಂದ್ಯದ ಪ್ರಸಾರದ ಮೊತ್ತ:
ನ್ಯಾಷನಲ್ ಫುಟ್ ಬಾಲ್ ಲೀಗ್ (ಎನ್‍ಎಫ್‍ಎಲ್)- 22.47 ಮಿಲಿಯನ್ ಯುಎಸ್ ಡಾಲರ್ (ಸುಮಾರು 146 ಕೋಟಿ ರೂ.)
ಇಂಡಿಯನ್ ಕ್ರಿಕೆಟ್ – 9.26 ಮಿಲಿಯನ್ ಯುಎಸ್ ಡಾಲರ್ (ಸುಮಾರು 60.18 ಕೋಟಿ ರೂ.)
ಪ್ರೀಮಿಯರ್ ಲೀಗ್ – 13.15 ಮಿಲಿಯನ್ ಯುಎಸ್ ಡಾಲರ್ (ಸುಮಾರು 85.44 ಕೋಟಿ ರೂ.)
ಐಪಿಎಲ್-8.47 ಮಿಲಿಯನ್ ಯುಎಸ್ ಡಾಲರ್ (ಸುಮಾರು 55.03 ಕೋಟಿ)
ನ್ಯಾಷನಲ್ ಬ್ಯಾಸ್‍ಕೆಟ್ ಬಾಲ್ ಲೀಗ್ (ಎನ್‍ಬಿಎ) – 1.99 ಮಿಲಿಯನ್ ಯುಎಸ್ ಡಾಲರ್ (ಸುಮಾರು 12.34 ಕೋಟಿ ರೂ.)
ಮೇಜರ್ ಲೀಗ್ ಬೆಸ್ ಬಾಲ್ (ಎಂಎಲ್‍ಬಿ)- 0.63 ಮಿಲಿಯನ್ ಯುಎಸ್ ಡಾಲರ್ (ಸುಮಾರು 4.09 ಕೋಟಿ ರೂ.)
ಬಿಸಿಸಿಐ ಆದಾಯ ವರ್ಷಗಳಲ್ಲಿ:
2012-18: 125 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 8,123 ಕೋಟಿ ರೂ.)
2018-23: 189 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 1,228 ಕೋಟಿ ರೂ.)
ಐಪಿಎಲ್ 2018-22: 508 ಮಿಲಿಯನ್ ಡಾಲರ್ (ಸುಮಾರು 33,007 ಕೋಟಿ ರೂ.)
ಬಿಸಿಸಿಐ ಆದಾಯ ಪ್ರತಿ ಪಂದ್ಯಕ್ಕೆ:
2012-18: 6.17 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 40,08 ಕೋಟಿ ರೂ.)
2018-23: 9.26 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 60.16 ಕೋಟಿ ರೂ.)
ಐಪಿಎಲ್ 2018-22: 8.47 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 55.03 ಕೋಟಿ ರೂ.)
ಕ್ರಿಕೆಟ್ ಟಾಪ್ ಪ್ರಸಾರ ಒಪ್ಪಂದಗಳು
ಐಪಿಎಲ್ 2018-22: 508 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 33,012 ಕೋಟಿ ರೂ.)
ಇಂಗ್ಲೆಂಡ್ ಕ್ರಿಕೆಟ್ 2020-24: 287 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 18,650 ಕೋಟಿ ರೂ.)
ಇಂಡಿಯನ್ ಕ್ರಿಕೆಟ್ 2018-23: 189 ಮಿಲಿಯನ್‍ಅಮೆರಿಕನ್ ಡಾಲರ್ (ಸುಮಾರು 12,281 ಕೋಟಿ ರೂ.)
ಆಸ್ಟ್ರೇಲಿಯಾ ಕ್ರಿಕೆಟ್ 2013-18: 100 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 6,498 ಕೋಟಿ ರೂ.)