– ಕಾಲ್ತುಳಿತ ಪ್ರಕರಣ ಆಕಸ್ಮಿಕ ಘಟನೆ; ಬಾಲಕ ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ
– ಮೃತರ ಕುಟುಂಬಸ್ಥರಿಗೆ ಕ್ಷಮೆಯಾಚಿಸುತ್ತೇನೆ
ಹೈದರಾಬಾದ್: ಪುಷ್ಪ 2 ಪ್ರೀಮಿಯರ್ ಶೋ ವೇಳೆ ಕಾಲ್ತುಳಿತಕ್ಕೆ ಮಹಿಳೆ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪು ಮಾಹಿತಿ ಹರಡಲಾಗುತ್ತಿದೆ. ಆ ಮೂಲಕ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ ಎಂದು ನಟ ಅಲ್ಲು ಅರ್ಜುನ್ ಬೇಸರ ವ್ಯಕ್ತಪಡಿಸಿದ್ದಾರೆ.
Advertisement
ತೆಲಂಗಾಣ ವಿಧಾನಸಭೆಯಲ್ಲಿ ಸಿಎಂ ರೇವಂತ್ ರೆಡ್ಡಿ ಗಂಭೀರ ಆರೋಪಗಳಿಗೆ ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿದ ನಟ, ತಪ್ಪು ಮಾಹಿತಿ ಹರಡಲಾಗುತ್ತಿದೆ. ನಾನು ಯಾರನ್ನೂ, ಯಾವುದೇ ಇಲಾಖೆ ಅಥವಾ ರಾಜಕೀಯ ನಾಯಕರನ್ನು ದೂಷಿಸಲ್ಲ. ಇದು ಅವಮಾನಕರ ಮತ್ತು ಚಾರಿತ್ರ್ಯ ವಧೆಯಂತೆ ಭಾಸವಾಗುತ್ತಿದೆ. ದಯವಿಟ್ಟು ನನ್ನ ಬಗ್ಗೆ ಜಡ್ಜ್ ಮಾಡಬೇಡಿ. ಸಂಧ್ಯಾ ಥಿಯೇಟರ್ ಬಳಿ ನಡೆದ ಘಟನೆಗೆ ಕ್ಷಮೆಯಾಚಿಸುತ್ತೇನೆ ಎಂದು ತಿಳಿಸಿದ್ದಾರೆ.
Advertisement
ಇದು ಅತ್ಯಂತ ದುರದೃಷ್ಟಕರ ಘಟನೆ. ಆಕಸ್ಮಿಕವಾಗಿ ಘಟನೆ ಜರುಗಿದೆ. ಕುಟುಂಬಕ್ಕೆ ನನ್ನ ಸಂತಾಪ. ನಾನು ಮಗುವಿನ ಸ್ಥಿತಿಯ ಬಗ್ಗೆ ಪ್ರತಿ ಗಂಟೆಗೂ ಅಪ್‌ಡೇಟ್ ಪಡೆಯುತ್ತಿದ್ದೇನೆ. ಬಾಲಕ ಬೇಗ ಚೇತರಿಸಿಕೊಳ್ಳಿ ಎಂದು ಪ್ರಾರ್ಥಿಸುತ್ತೇನೆ. ಪ್ರಕರಣ ಸಂಬಂಧ ಸಾಕಷ್ಟು ತಪ್ಪು ಮಾಹಿತಿ, ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ ಎಂದು ವಿಷಾದಿಸಿದ್ದಾರೆ.