ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಮತ್ತೆ ಅಂಗನವಾಡಿ (Anganwadi) ಕಾರ್ಯಕರ್ತೆಯರು ಸಿಡಿದೆದ್ದಿದ್ದಾರೆ. ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಗೆ (NEP) ಅನುಗುಣವಾಗಿ ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿಗೆ ಮಾನದಂಡ ಬದಲಾವಣೆ ಮಾಡಿರೋದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
Advertisement
ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಅಂಗನವಾಡಿ ನೇಮಕಾತಿಗೆ ಮಾನದಂಡವನ್ನು ಬದಲಾವಣೆ ಮಾಡಿ, ಆದೇಶ ಹೊರಡಿಸಿದೆ. ಈ ಹೊಸ ಆದೇಶದ ವಿರುದ್ಧ ಅಂಗನವಾಡಿ ಕಾರ್ಯಕರ್ತೆಯರು ಕೆಂಡ ಉಗುಳುತ್ತಿದ್ದು, ಸರ್ಕಾರದ ವಿರುದ್ಧ ಹೋರಾಡಲು ಸಜ್ಜಾಗುತ್ತಿದ್ದಾರೆ. ಅಂಗನವಾಡಿ ಟೀಚರ್ ಆಗಲು ಪಿಯುಸಿ, ಡಿಪ್ಲೋಮಾ ಆಗಿರಲೇಬೇಕು ಮತ್ತು ಸಹಾಯಕರ ಹುದ್ದೆಗಳಿಗೆ SSLC ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಇತ್ತೀಚೆಗೆಷ್ಟೇ ಆದೇಶ ಹೊರಡಿಸಿತ್ತು. ಇದೀಗ ಈ ಆದೇಶವನ್ನು ಹಿಂಪಡೆಯುವಂತೆ ಅಂಗನವಾಡಿ ಕಾರ್ಯಕರ್ತೆಯರು ಒತ್ತಾಯಿಸುತ್ತಿದ್ದಾರೆ. ಇದನ್ನೂ ಓದಿ: ಟೀ, ಸಿಗರೇಟ್‍ಗೆ ಸಾಲ ಕೊಡಲಿಲ್ಲವೆಂದು ಬಡ ಅಂಗಡಿ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ
Advertisement
Advertisement
ಟೀಚರ್ಸ್‍ಗಳಿಗೆ ಪಿಯುಸಿ ಕಡ್ಡಾಯ ಮಾಡಿರೋದು ಸರಿ, ಆದ್ರೆ ಸಹಾಯಕಿಯರಿಗೆ ಎಸ್‍ಎಸ್‍ಎಲ್‍ಸಿ ನಿಯಮ ಬೇಡ ಅಂತಾ ಅಂಗನವಾಡಿ ಕಾರ್ಯಕರ್ತೆಯರ ಸಂಘ ಒತ್ತಾಯಿಸಿದೆ. ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಗಳಲ್ಲಿ SSLC ಮಾಡಿರುವ ಹೆಲ್ಪರ್‌ಗಳು ಸಿಗೋದು ಕಷ್ಟ. ಇಂತಹ ಸ್ಥಳಗಳಲ್ಲಿ ಯಾರನ್ನು ನೇಮಕ ಮಾಡೋದು? ಅನೇಕ ವರ್ಷಗಳಿಂದ ಕೆಲಸ ಮಾಡಿಕೊಂಡ ಬಂದ ಸಹಾಯಕಿಯರಿಗೆ ಪಿಯುಸಿ ಕಡ್ಡಾಯ ಅಂದ್ರೆ ಹೇಗೆ? ಪಿಯುಸಿ ಮಾಡದಿದ್ರೆ, ಅವರು ಬಡ್ತಿ ಪಡೆಯದೇ, ಹಾಗೇ ನಿವೃತ್ತಿ ಆಗ್ಬೇಕಾ? ಇದು ಯಾವ ರೀತಿಯ ನ್ಯಾಯ? ಸರ್ಕಾರದ ಈ ಆದೇಶ ಕೈಬಿಡಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ. ಇದನ್ನೂ ಓದಿ: ಇಂದು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನ- ನಮೋ ಸ್ವಾಗತಕ್ಕೆ ಭರ್ಜರಿ ಸಿದ್ದತೆ
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k