ಬೆಳಗಾವಿ: ಇಂದಿನಿಂದ ಬೆಳಗಾವಿಯ ಸುವರ್ಣಸೌಧದಲ್ಲಿ (Belagavi Suvarna Soudha) ಚಳಿಗಾಲದ ಅಧಿವೇಶನ (Winter Session) ಆರಂಭವಾಗಲಿದೆ. ಉಪಚುನಾವಣೆಯಲ್ಲಿ (By Election) ಭರ್ಜರಿ ಗೆಲುವು ಹುಮ್ಮಸ್ಸಿನಲ್ಲಿರುವ ರಾಜ್ಯ ಸರ್ಕಾರವನ್ನು ಕಟ್ಟಿಹಾಕಲು ವಿಪಕ್ಷಗಳು ಸಿದ್ದಗೊಂಡಿವೆ.
10 ದಿನಗಳ ಕಾಲ ನಡೆಯಲಿರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಮುಡಾ, ವಾಲ್ಮೀಕಿ, ಅಬಕಾರಿ, ವಕ್ಫ್, ಬಾಣಂತಿಯರ ಸಾವು ಪ್ರಕರಣಗಳು ಸರ್ಕಾರಕ್ಕೆ ಬಿಸಿತುಪ್ಪವಾಗಿ ಪರಿಣಮಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
Advertisement
ಸಾಲು ಸಾಲು ಅಸ್ತ್ರಗಳನ್ನ ರೆಡಿ ಮಾಡಿಕೊಂಡಿರುವ ವಿಪಕ್ಷಗಳು ಸರ್ಕಾರದ ಮೇಲೆ ಮುಗಿ ಬೀಳಲು ಸಜ್ಜಾಗಿವೆ. ಇತ್ತ ವಿಪಕ್ಷಗಳನ್ನು ಕಟ್ಟಿ ಹಾಕಲು ಸರ್ಕಾರವೂ ಸನ್ನದ್ಧವಾಗಿದೆ. ವಿಪಕ್ಷಗಳ ಹಗರಣಗಳನ್ನು ಮುಂದಿಟ್ಟುಕೊಂಡು ಸರ್ಕಾರ ಕೌಂಟರ್ ನೀಡಲು ತಯಾರಾಗಿದೆ. ಇದನ್ನೂ ಓದಿ: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸರಣಿ ಸಾವು – ಮೃತ ಬಾಣಂತಿಯರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ
Advertisement
Advertisement
ಸದನದ ಒಳಗೆ ಆಡಳಿತ ವಿಪಕ್ಷಗಳ ವಾಗ್ಯುದ್ಧ ಒಂದು ಕಡೆಯಾದರೆ ಸದನದ ಹೊರಗಡೆಯೂ ಸಮರ ಜೋರಾಗಿರಲಿದೆ. ಪಂಚಮಸಾಲಿ 2ಎ ಮೀಸಲಾತಿ ಹೋರಾಟ, ಅನ್ನದಾತರ ಪ್ರತಿಭಟನೆ ಕೂಡ ನಡೆಯುತ್ತಿದೆ.
Advertisement
ಅಧಿವೇಶನದಲ್ಲಿ ಬಿಬಿಎಂಪಿ ವಿಧೇಯಕ, ರಾಜ್ಯಪಾಲರ ಅಧಿಕಾರ ಮೊಟಕು ಮಾಡುವ ಗ್ರಾಮೀಣಾಭಿವೃದ್ಧಿ ವಿವಿ ವಿಧೇಯಕ ಸೇರಿ 15ಕ್ಕೂ ಹೆಚ್ಚು ಮಸೂದೆಗಳು ಮಂಡನೆ ಆಗಲಿವೆ. ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ವಿಜಯೇಂದ್ರ, ಸದನದ ಒಳಗೆ, ಹೊರಗೆ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡುತ್ತೇವೆ ಎಂದಿದ್ದಾರೆ. ವಿಪಕ್ಷಗಳು ಅಸ್ತ್ರಗಳನ್ನು ಎದುರಿಸಲು ನಾವ್ ರೆಡಿ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ.
ಬಿಜೆಪಿ ಅಸ್ತ್ರ Vs ಸರ್ಕಾರದ ಪ್ರತ್ಯಸ್ತ್ರ
– ಮುಡಾ ಸೈಟ್ ಹಂಚಿಕೆ ಹಗರಣ Vsಬಿಜೆಪಿ ಸರ್ಕಾರದ ಅವಧಿಯ ಕೋವಿಡ್ ಹಗರಣ
– ವಾಲ್ಮೀಕಿ ನಿಗಮ ಅಕ್ರಮ ಪ್ರಕರಣ Vs ಬಿಎಸ್‌ವೈ & ವಿಜಯೇಂದ್ರ ವಿರುದ್ಧದ ಬಿಡಿಎ ಹಗರಣ
– ವಕ್ಫ್ ಆಸ್ತಿ ಕಬಳಿಕೆ ವಿವಾದ Vs ಯತ್ನಾಳ್-ವಿಜಯೇಂದ್ರ ಬಣಗಳ ತಿಕ್ಕಾಟ
– ಅಬಕಾರಿ ಇಲಾಖೆಯಲ್ಲಿ ವಸೂಲಿ Vs ಗಣಿ ಸೇರಿ ವಿವಿಧ ಹಗರಣ
– ಬಳ್ಳಾರಿಯಲ್ಲಿ ಬಾಣಂತಿಯರ ಸಾವು Vs ಲೈಂಗಿಕ ದೌರ್ಜನ್ಯ ಪ್ರಕರಣ