ಬೆಳಗಾವಿ: ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಶನಿವಾರ ಮುಗಿದಿದೆ. ಆದರೆ ಎಲೆಕ್ಷನ್ ಡ್ಯೂಟಿ ಮುಗಿಸಿ ಏಕಕಾಲಕ್ಕೆ ಹೊರಟಿದ್ದರಿಂದ ಬೆಳಗಾವಿಯ ರಾಯಬಾಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ತಾಲೂಕಿನ ವಿವಿಧೆಡೆಗಳಿಂದ ಚುನಾವಣೆ ಕರ್ತವ್ಯ ಮುಗಿಸಿ ಏಕಕಾಲಕ್ಕೆ ಬಂದಿದ್ದರಿಂದ ಬಸ್ ಹಾಗೂ ವಾಹನಗಳಿಂದ ಸಂಚಾರ ದಟ್ಟಣೆಯುಂಟಾಗಿತ್ತು. ಆದ್ದರಿಂದ ಕುಡಚಿ ಹಾಗೂ ರಾಯಬಾಗ ಕ್ಷೇತ್ರಗಳಲ್ಲಿ ಕರ್ತವ್ಯ ಮುಗಿಸಿ ಬಂದ ಚುನಾವಣಾ ಸಿಬ್ಬಂದಿ ಮತ ಯಂತ್ರಗಳನ್ನು ಹಸ್ತಾಂತರಿಸಲು ವಿಳಂಬವಾಗಿದ್ದು, ಸಂಚಾರ ದಟ್ಟಣೆಯಿಂದ ಚುನಾವಣಾ ಸಿಬ್ಬಂದಿ ಹೈರಾಣಾಗಿದ್ದಾರೆ.
ಟ್ರಾಫಿಕ್ ಜಾಮ್‍ನಿಂದ ಸಿಬ್ಬಂದಿ ಪಟ್ಟಣದ ಹೊಸ ಸಂಯುಕ್ತ ಪದವಿ ಪೂರ್ವ ಕಾಲೇಜುವರೆಗೆ ನಡೆದುಕೊಂಡು ಹೋಗಿದ್ದಾರೆ. ಸುಮಾರು ಮೂರು ಕಿಲೋಮೀಟರ್ ವರೆಗೆ ಮತಯಂತ್ರಗಳನ್ನು ಹೊತ್ತುಕೊಂಡೇ ಹೋಗಿದ್ದಾರೆ.
ಟ್ರಾಫಿಕ್ ಜಾಮ್ ಸರಿಪಡಿಸಲು ಪೊಲೀಸರು ಸತತ 3 ಗಂಟೆಗಳ ಕಾಲ ಹರಸಾಹಸಪಟ್ಟರು.