ಭೋಪಾಲ್: ಸತ್‍ನಾದಲ್ಲಿಯೂ ಕ್ರೀಡಾಂಗಣವೊಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಇಡಲಾಗಿದೆ. ಗುಜರಾತ್ ಬಳಿಕ ಇದೀಗ ಮಧ್ಯಪ್ರದೇಶದಲ್ಲಿ ಮೋದಿ ಹೆಸರನ್ನು ಇಡಲಾಗಿದೆ.
ಕ್ರೀಡಾಂಗಣವನ್ನು ಸತ್‍ನಾದ ಪವರ್ ಗ್ರಿಡ್ ಕಾರ್ಪೊರೇಷನ್‍ನಲ್ಲಿ 130 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದೆ. ಮಧ್ಯ ಪ್ರದೇಶದ ವಿಧಾನಸಭೆ ಸ್ಪೀಕರ್ ಗಿರೀಶ್ ಗೌತಮ್ ಮತ್ತು ಸತ್‍ನಾ ಸಂಸದ ಗಣೇಶ್ ಸಿಂಗ್ ಅವರು ನರೇಂದ್ರ ದಾಮೋದರ ದಾಸ್ ಮೋದಿ ಸ್ಟೇಡಿಯಂ ಉದ್ಘಾಟಿಸಿದ್ದಾರೆ. ಇದನ್ನೂ ಓದಿ: ರಾಜರ ವಂಶವನ್ನು ನಾಶ ಮಾಡಲು ಹೋದ ಟಿಪ್ಪು ಸುಲ್ತಾನ್ ಹೆಸರು ರೈಲಿಗೆ ಯಾಕೆ?: ಪ್ರತಾಪ್ ಸಿಂಹ
ಮೋದಿ ಸರ್ಕಾರವು ಕ್ರೀಡೆಯ ಉತ್ತೇಜನಕ್ಕೆ ಸಾಕಷ್ಟು ಕೆಲಸ ಮಾಡುತ್ತಿದೆ. ಪ್ರಧಾನಿ ಮೋದಿ ಅವರು ಕ್ರೀಡಾಳುಗಳ ಜತೆ ನೇರ ಸಂಪರ್ಕದಲ್ಲಿದ್ದು ಅವರಿಗೆ ಪ್ರೋತ್ಸಾಹ ನೀಡುತ್ತಾರೆ. ಹೀಗಾಗಿ ಕ್ರೀಡಾಂಗಣಕ್ಕೆ ಅವರ ಹೆಸರು ಇಡಲು ನಿರ್ಧರಿಸಿದ್ದೆವು ಎಂದು ಗಣೇಶ್ ಸಿಂಗ್ ಹೇಳಿದ್ದಾರೆ. 2021ರಲ್ಲಿ ಗುಜರಾತ್‍ನ ಮೊಟೆರಾ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಅವರ ಹೆಸರಿಡಲಾಗಿತ್ತು.