ಜೊತೆಯಲ್ಲಿದ್ದವರೇ ಮದ್ದು ಹಾಕ್ತಾರೆ ಏನ್ಮಾಡಲಿ – ಹೆಚ್.ವಿಶ್ವನಾಥ್‌ಗೆ ಸೋಮಶೇಖರ್ ತಿರುಗೇಟು

Public TV
1 Min Read
ST Somashekhar H Vishwanath

ಮೈಸೂರು: ದಸರಾ ಅದ್ವಾನವಾಯ್ತು ಎಂಬ ಎಂಎಲ್‌ಸಿ (MLC) ಹೆಚ್.ವಿಶ್ವನಾಥ್ (H Vishwanath) ಟೀಕೆಗೆ ತಿರುಗೇಟು ನೀಡಿರುವ ಸಚಿವ ಎಸ್.ಟಿ ಸೋಮಶೇಖರ್ (ST Somashekhar) ಜೊತೆಯಲ್ಲಿದ್ದವರೇ ಮದ್ದು ಹಾಕ್ತಾರೆ ಏನ್ಮಾಡಲಿ ಎಂದು ಹೇಳಿದ್ದಾರೆ.

H Vishwanath

ಕೆಲವರು ಜೊತೆಯಲ್ಲೇ ಇದ್ದು ಮದ್ದು ಹಾಕುವ ಕೆಲಸ ಮಾಡುತ್ತಾರೆ. ರಾಜಕೀಯವಾಗಿ ಏನು ಮಾಡಲು ಆಗದಿದ್ದಾಗ ಪಕ್ಕದಲ್ಲೇ ಕುಳಿತು ಮದ್ದು ಹಾಕಿಬಿಡುತ್ತಾರೆ. ಅಂಥವರಿಗೆ ಚಾಮುಂಡಿ ತಾಯಿ ಒಳ್ಳೇ ಬುದ್ದಿ ಕೊಡಲಿ ಎಂದು ಕುಟುಕಿದ್ದಾರೆ. ಇದನ್ನೂ ಓದಿ: 2 ಗಂಟೆ ಆತ್ಮಹತ್ಯೆ ಹೈಡ್ರಾಮಾ – ಸಿನಿಮಾ ರೀತಿಯಲ್ಲಿ ದಂಪತಿಯ ರಕ್ಷಣೆ

mysuru dasara 2022 Basavaraj Bommai 2

ದಸರಾ (Mysuru Dasara) ಆದಮೇಲೆ, ದಸರಾ ನಡೆಯುವಾಗ ಇಂಥ ಮದ್ದು ಹಾಕುವ ಕೆಲಸ ಜೊತೆಯಲ್ಲಿ ಇದ್ದವರಿಂದಲೇ ನಡೆದಿದೆ. ಅದು ನನಗೆ ಗೊತ್ತಿದೆ. ಆದರೆ ಎಲ್ಲವನ್ನೂ ಮೀರಿ ದಸರಾ ಯಶಸ್ವಿಯಾಗಿದೆ. ಪ್ರಧಾನಿಯಾದಿಯಾಗಿ (PrimeMinister) ಎಲ್ಲರೂ ಪ್ರಶಂಸಿಸಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಸಾನ್ಯ ಅಯ್ಯರ್ ತಂಟೆಗೆ ಬಂದವರಿಗೆ ರೂಪೇಶ್ ಶೆಟ್ಟಿ ಖಡಕ್ ವಿಲನ್ : ಪ್ರಶಾಂತ್ ಸಂಬರ್ಗಿ ಎಚ್ಚರಿಕೆ

mysuru dasara 2022

ದಸರಾದ 10 ದಿನವೂ ಎಲ್ಲಾ ಕಾರ್ಯಕ್ರಮಕ್ಕೆ ಹೋಗಿದ್ದೇನೆ. ಮೈಸೂರಿನವರೇ ಉಸ್ತುವಾರಿ ಸಚಿವರಾಗಿದ್ದಾಗಲೂ ಈ ರೀತಿ ಎಲ್ಲಾ ಕಾರ್ಯಕ್ರಮಕ್ಕೆ ಹೋಗಿರಲಿಲ್ಲ. ನಾನು ಪ್ರಾಮಾಣಿಕವಾಗಿ ಅಚ್ಚುಕಟ್ಟಾಗಿ ದಸರಾ ಮಾಡಲು ಶ್ರಮಿಸಿದ್ದೇನೆ. ದಸರಾದ ಒಟ್ಟಾರೆ ಲೆಕ್ಕವನ್ನು ಶೀಘ್ರದಲ್ಲೇ ಕೊಡುತ್ತೇವೆ. ಜೊತೆಗೆ ಈ ಬಾರಿ ದಸರೆಯಲ್ಲಿ ಆದ ಲೋಪಗಳ ಬಗ್ಗೆ ಎಲ್ಲರೊಂದಿಗೆ ಚರ್ಚಿಸಿ ಮುಂದಿನ ದಸರಾದ ದೃಷ್ಟಿಯಿಂದ ಪುಸ್ತಕ ತರಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *