ಬೆಂಗಳೂರು: ಬಿಜೆಪಿಯಲ್ಲಿ (BJP) ಅನಿವಾರ್ಯವಾಗಿ ಹೊಂದಿಕೊಂಡು ಹೋಗುತ್ತಿದ್ದೇನೆ ಎನ್ನುವ ಮೂಲಕ ಶಾಸಕ ಎಸ್.ಟಿ.ಸೋಮಶೇಖರ್ (ST Somashekar) ಬಿಜೆಪಿಯಲ್ಲಿ ಸಮಾಧಾನಕರವಾಗಿಲ್ಲ ಎಂಬುದನ್ನ ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ.
ಆಪರೇಷನ್ ಹಸ್ತದ ಸಂಬಂಧ `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಶಾಸಕ ಎಸ್.ಟಿ.ಸೋಮಶೇಖರ್, ಬಿಜೆಪಿಯಲ್ಲಿ ಅನಿವಾರ್ಯವಾಗಿ ಹೊಂದಿಕೊಂಡು ಹೋಗುತ್ತಿದ್ದೇನೆ. ಅಧಿವೇಶನ ನಡೆಯುವಾಗ ನಮ್ಮ ಪಕ್ಷದ ನಾಯಕರ ಗಮನಕ್ಕೆ ತಂದರೂ ಏನೂ ಪ್ರಯೋಜನ ಆಗಲಿಲ್ಲ ಆದ್ದರಿಂದ ಅನಿವಾರ್ಯಾವಾಗಿ ನಾನೆ ಅಪ್ರೋಚ್ ಮಾಡಿದೆ, ಅಭಿವೃದ್ಧಿಗೆ ಹಣ ಕೇಳಿದೆ ಹಣ ಬಿಡುಗಡೆ ಮಾಡಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಡಿಕೆ ಶಿವಕುಮಾರ್ ಲೂಟಿ ಹೊಡೆಯೋದು ಬಿಟ್ಟರೆ ತಮ್ಮನಾಗಿ ಸ್ವೀಕಾರ ಮಾಡ್ತೀನಿ: ಕುಮಾರಸ್ವಾಮಿ ಷರತ್ತು
ನಾನು ಸಿದ್ದರಾಮಯ್ಯ (Siddaramaiah) ಹಾಗೂ ಡಿಕೆಶಿ (DK Shivakumar) ಭೇಟಿ ಮಾಡಿದ ನಂತರ ಸ್ಥಳೀಯ ಬಿಜೆಪಿ ನಾಯಕರು ನನ್ನ ವಿರುದ್ಧ ಹೀಗೆ ಪ್ರಚಾರ ಮಾಡುತ್ತಿದ್ದಾರೆ. ನಾನು ಲೋಕಸಭೆಗೆ ಹೋಗುತ್ತೇನೆ ಮಗ ವಿಧಾನಸಭೆ (Assembly Election) ಚುನಾವಣೆಗೆ ಬರ್ತಾನೆ ಅಂತಾ ಶುರು ಮಾಡಿದ್ದಾರೆ. ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಹೋದ ಆಪ್ತರು ಬಿಬಿಎಂಪಿ ಕ್ಯಾಟಗರಿ ಆದರೆ ಅವಕಾಶ ಸಿಕ್ಕರೆ ವಾಪಾಸ್ ಬರಬಹದು ಎಂದಿದ್ದಾರೆ. ಇದನ್ನೂ ಓದಿ: ಮಳೆ ಬೆಳೆ ರಾಜಕೀಯ ವೈಪರೀತ್ಯದ ಎಚ್ಚರಿಕೆ – ಕೋಮಾರನಹಳ್ಳಿ ಲಕ್ಷ್ಮಿ ರಂಗನಾಥ ಸ್ವಾಮಿ ಕಾರ್ಣಿಕ
ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರು ಎಲ್ಲವನ್ನೂ ಸರಿಪಡಿಸುವ ಮಾತನಾಡಿದ್ದಾರೆ, ಸರಿಪಡಿಸುತ್ತಾರೆ ಎಂಬ ಭರವಸೆ ಇದೆ. ಸದ್ಯಕ್ಕೆ ಬಿಜೆಪಿ ಬಿಡುವ ಯಾವುದೇ ಯೋಚನೆ ನನ್ನ ಮುಂದಿಲ್ಲ. ನನ್ನ ಚುನಾವಣೆಯಲ್ಲೇ ಕ್ಷೇತ್ರದ ಮೂಲ ಬಿಜೆಪಿ ಶಾಸಕರು ವಿರೋಧ ಮಾಡಿದ್ದರಿಂದ ಆತಂಕ ಆಗಿ ಕೆಲವರು ಹೋಗಿದ್ದಾರೆ. ಅವರಿಗೂ ಬಿಬಿಎಂಪಿ ಟಿಕೆಟ್ ಸಿಗುತ್ತೋ ಇಲ್ವಾ ಎಂಬ ಆತಂಕ ಅವರಲ್ಲೂ ಇತ್ತು ಎಂದಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]