ಬೆಂಗಳೂರು: ಮಾಜಿ ಸಚಿವ ಎಸ್.ಟಿ ಸೋಮಶೇಖರ್ (ST Somashekar) ಮತ್ತೆ ಬಿಜೆಪಿ ನಾಯಕರ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ.
ಯಶವಂತಪುರ ಕ್ಷೇತ್ರದ ಹೆಮ್ಮಿಗೆಪುರ ವಾರ್ಡ್‌ನಲ್ಲಿ ಅಪಾರ್ಟ್ಮೆಂಟ್ ನಿವಾಸಿಗಳ ಸಮಸ್ಯೆ ಆಲಿಸಲು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಬಂದಿದ್ದರು. ಈ ವೇಳೆ, ಸೋಮಶೇಖರ್‌ಗೆ ಕಾಂಗ್ರೆಸ್ (Congress) ಕಾರ್ಯಕರ್ತನೋರ್ವ ಶಾಲು ಹಾಕಿ, ಈ ಶಾಲು ಚೆನ್ನಾಗಿದ್ಯಣ್ಣ ಅಂದೇ ಬಿಟ್ಟರು. ಕೆಲ ಹೊತ್ತು ಎಸ್.ಟಿ ಸೋಮಶೇಖರ್ ಕಾಂಗ್ರೆಸ್ ಕಾರ್ಯಕರ್ತ ಹಾಕಿದ್ದ ಶಾಲು ಹಾಕಿಕೊಂಡೇ ಕುಳಿತಿದ್ದರು. ಇದನ್ನೂ ಓದಿ: 140 ಕೋಟಿ ಭಾರತೀಯರಲ್ಲಿ ಕಾಂಗ್ರೆಸ್ಸಿಗರೂ ಇದ್ದಾರೆಂದು ಭಾವಿಸಿದ್ದೇನೆ: ಸಿ.ಟಿ ರವಿ ವ್ಯಂಗ್ಯ
ಬಳಿಕ ಮಾತನಾಡಿ ಸೋಮಶೇಖರ್, ನನ್ನ ರಾಜಕೀಯ ಸಾಧನೆಗಳಿಗೆ ಕಾರಣ ಡಿಕೆಶಿ. ಬಿಜೆಪಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ಇದೆ, ಇದು ನಿಜ. ಇವತ್ತು ಪ್ರಧಾನ ಮಂತ್ರಿಗಳು ಬಂದಿದ್ದರು. ನಿಮ್ಮ ಕ್ಷೇತ್ರದ ಜನರನ್ನ ಕಳಿಸಿ ಅಂತ ಹೇಳಿದ್ರು. ನಾನು ಸಹ ನನ್ನ ಕ್ಷೇತ್ರದಿಂದ ಬಸ್ ಬಿಟ್ಟು ಜನರನ್ನ ಕಳುಹಿಸಿದೆ. ಆದರೆ ಪಿಎಂ ಕಾರ್ಯಕ್ರಮ ಬನ್ನಿ ಅಂತ ಸೌಜನ್ಯಕ್ಕೂ ನನ್ನನ್ನ ಕರೆಯಲಿಲ್ಲ. ಹೀಗಾಗಿ ನಾನು ಹೋಗಲಿಲ್ಲ. ಸಿಎಂ ಡಿಸಿಎಂ ಬಗ್ಗೆ ಒಂದೆರೆಡು ಒಳ್ಳೆ ಮಾತುಗಳನ್ನ ಆಡಿದ್ದಕ್ಕೆ ಹೀಗೆ ಆಗ್ತಿದೆ ಎಂದು ಅಸಮಾಧಾನ ಹೊರಹಾಕಿದರು.
ನಂತರ ಡಿ.ಕೆ ಶಿವಕುಮಾರ್ ಮಾತನಾಡಿ, ನನ್ನ-ಸೋಮಶೇಖರ್ ಸಂಬಂಧ 35 ವರ್ಷದ ಹಳೆಯದ್ದು. ನಾವು ಬಿತ್ತಿದ ಬೀಜ, ನಾವು ಗೊಬ್ಬರ ಹಾಕಿದ ಗಿಡ ಈಗ ಮರವಾಗಿ ಬೆಳೆದಿದೆ. ಹಣ್ಣು ಬೇರೆಯವರು ಕಿತ್ತು ತಿನ್ನೋದು ಬೇಡ ಅಂತಾ ನಾವು ಇಲ್ಲಿಗೆ ಅವರ ಜೊತೆ ಬಂದಿದ್ದೇವೆ. ನಿಮ್ಮ ಕಷ್ಟಗಳನ್ನ ಕೇಳೋಕೆ ಬರಲೇಬೇಕು ಅಂತಾ ಕರೆ ತಂದಿದ್ದಾರೆ. ಅವರ ಜೊತೆ ನೆಲಮಂಗಲ ಶಾಸಕ ಶ್ರೀನಿವಾಸ್ ಕೂಡ ಬೆಂಬಿಡದೆ ಯಶವಂತಪುರ ಕ್ಷೇತ್ರಕ್ಕೆ ಕರೆ ತಂದಿದ್ದಾರೆ. ನಿಮ್ಮ ಸಮಸ್ಯೆಗಳನ್ನ ಅಧಿಕಾರಿಗಳು ಹೇಳಿದ್ದಾರೆ. ಸರ್ಕಾರ ಇಲ್ಲಿನ ನಿವಾಸಿಗಳ ಬಗ್ಗೆ ಕಾಳಜಿ ವಹಿಸಲಿದೆ. ನಿಮ್ಮ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಶಾಸಕರು ಕೂಡಲೇ ಸಭೆ ಮಾಡಲಿದ್ದಾರೆ. ಸಾಧ್ಯವಾದಷ್ಟು ಸಮಸ್ಯೆ ಬಗೆ ಹರಿಸಲಿದ್ದೇವೆ ಎಂದು ಆಶ್ವಾಸನೆ ನೀಡಿದ್ದಾರೆ.
ವಾರದ ಹಿಂದಷ್ಟೇ ಕೆಂಪೇಗೌಡ ಲೇಔಟ್ ಸಮಸ್ಯೆ ಬಗ್ಗೆ ಡಿಕೆಶಿ ಪರಿಶೀಲನೆ ನಡೆಸಿದ್ದರು. ಇದನ್ನೂ ಓದಿ: ಯಾದಗಿರಿ ಜಿಲ್ಲೆಯಾದ್ಯಂತ 1 ಗಂಟೆಗೂ ಹೆಚ್ಚು ಕಾಲ ಮಳೆ – ರೈತರ ಮೊಗದಲ್ಲಿ ಮಂದಹಾಸ
Web Stories