– ಈಶ್ವರಪ್ಪ ಎದುರೇ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದ ಶಾಸಕ
ಬೆಂಗಳೂರು: ಸಿದ್ದರಾಮಯ್ಯ, ಗ್ಯಾರಂಟಿ ಈಡೇರಿಸಿದೇ ಮಾತು ತಪ್ಪಿದ ನಾಯಕ ಎಂದು ಬಿಜೆಪಿ (BJP) ನಾಯಕರು ಪ್ರತಿಭಟನೆಗೆ ಮುಂದಾಗಿದ್ದರೇ ಇತ್ತ ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್ (ST Somashekar) ಮಾತ್ರ ಸಿದ್ದರಾಮಯ್ಯ (Siddaramaiah) ನುಡಿದಂತೆ ನಡೆಯುವವರು, ಗ್ಯಾರಂಟಿಗಳನ್ನು ಜಾರಿ ಮಾಡಿಯೇ ಮಾಡುತ್ತಾರೆ ಎಂದು ಹಾಡಿ ಹೊಗಳಿದ್ದಾರೆ.
Advertisement
ತಮ್ಮ ಕ್ಷೇತ್ರ ಯಶವಂತಪುರದ (Yeshwanthpur) ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಕಾಗಿನೆಲೆ ಮಹಾ ಸಂಸ್ಥಾನ ಮಠದ ಶಾಖಾಮಠದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವೇದಿಕೆ ಮೇಲಿದ್ದ ಸಿಎಂ ಸಿದ್ದರಾಮಯ್ಯರನ್ನು ನೋಡಿ ತಮ್ಮ ಭಾಷಣದ ಆರಂಭದಲ್ಲೇ, ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕ, ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹೊಗಳಿದರು. ಸಿದ್ದರಾಮಯ್ಯರನ್ನು ಜನಪ್ರಿಯ ಮುಖ್ಯಮಂತ್ರಿ ಎಂದು ಕರೆಯುತ್ತಿದ್ದ ಹಾಗೆಯೇ ನೆರೆದಿದ್ದ ಜನರೆಲ್ಲಾ ಜಯಘೋಷ ಮೊಳಗಿಸಿದರು. ಇದನ್ನೂ ಓದಿ: ವಿದ್ಯುತ್ ಬಿಲ್ ಹಿಂಬಾಕಿ ಇದ್ದರೂ ಸಿಗಲಿದೆ ಗೃಹಜ್ಯೋತಿ ಪ್ರಯೋಜನ
Advertisement
Advertisement
ಬಳಿಕ ಮಾತನಾಡಿದ ಅವರು, ಸಿದ್ದರಾಮಯ್ಯ ಅವಧಿಯಲ್ಲಿ ನಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಸಿಕ್ಕಿದೆ. ಈ ಕ್ಷೇತ್ರದ ಅಭಿವೃದ್ಧಿಗೆ ಯಾವತ್ತೂ ಸಹ ಹಣ ಇಲ್ಲ ಎಂದು ಹೇಳಿಲ್ಲ. ಅವರ ಅನುದಾನದಲ್ಲಿ ಬೆಳೆದು ಎರಡನೇ ಬಾರಿ ಶಾಸಕನಾದೆ. ಪಕ್ಷಾಂತರ ಹೋಗಿದ್ದರೂ ನಾನು ಯಾವತ್ತೂ ಸಿದ್ದರಾಮಯ್ಯನವರನ್ನು ಮರೆತಿಲ್ಲ. ನುಡಿದಂತೆ ನಡೆದ ವ್ಯಕ್ತಿ ಸಿದ್ದರಾಮಯ್ಯ. ರಾಜ್ಯದ ಜನರ ನಾಡಿ ಮಿಡಿತ ಅವರಿಗೆ ಗೊತ್ತಿದೆ ಎಂದರು. ಇದನ್ನೂ ಓದಿ: ವಿಪಕ್ಷಗಳ ವಿರುದ್ಧ ಸುಳ್ಳು ಪ್ರಚಾರಕ್ಕೆ ಮೋದಿ ಸರ್ಕಾರದ ಆಡಳಿತ ಯಂತ್ರ ಬಳಸಿಕೊಳ್ತಿದ್ದಾರೆ: ರಾಷ್ಟ್ರಪತಿಗೆ ದಿನೇಶ್ ಗುಂಡೂರಾವ್ ಪತ್ರ
Advertisement
ಸಿದ್ದರಾಮಯ್ಯ ಅವರು ಹೇಳಿದ್ದನ್ನು ಮಾಡಿ ತೋರಿಸುತ್ತಾರೆ. ಎಲ್ಲಾ ಗ್ಯಾರಂಟಿ (Guarantee) ಘೋಷಣೆಗಳನ್ನು ಪೂರ್ಣ ಮಾಡಲು ಸಿಎಂ ಬದ್ಧರಾಗಿದ್ದಾರೆ. ನಾನು ಸಿದ್ದರಾಮಯ್ಯರ ಅಭಿಮಾನಿ ಮತ್ತು ಶಿಷ್ಯ ಎಂದು ಹೇಳುವ ಮೂಲಕ ಸೋಮಶೇಖರ್ ನೆರೆದಿದ್ದವರ ಹುಬ್ಬು ಮೇಲೇರಿಸಿದರು. ಇದನ್ನೂ ಓದಿ: ಇಂದು ಬಾಂಬ್ ಹಾಕಿದವರ ದೇಶಕ್ಕೆ ನುಗ್ಗಿ ಹೊಡೆಯೋ ಸಾಮರ್ಥ್ಯ ನಮ್ಮಲ್ಲಿದೆ: ಜೋಶಿ
ಇತ್ತೀಚಿಗಷ್ಟೇ ವಲಸಿಗ ಬಿಜೆಪಿಗರ ಬಗ್ಗೆ ಮಾಜಿ ಸಚಿವ ಕೆಎಸ್ ಈಶ್ವರಪ್ಪ (K.S.Eshwarappa) ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿನ ಹಲವು ಪಕ್ಷಾಂತರಿ ನಾಯಕರು ಬೇಸರಗೊಂಡಿದ್ದಾರೆ. ಪಕ್ಷದ ಸೋಲಿನ ಬಗ್ಗೆ ಕಟೀಲ್ ಅವರ ಭಿನ್ನ ಧ್ವನಿಯ ಹೇಳಿಕೆಗಳನ್ನು ಕೊಟ್ಟ ಹಲವರಿಗೆ ನೋಟಿಸ್ ಮತ್ತು ವಾರ್ನಿಂಗ್ ಕೊಡಲಾಯಿತು. ಆದರೆ ಬಿಜೆಪಿ ಸರ್ಕಾರದ ರಚನೆಗೆ ಕಾರಣರಾದ ವಲಸಿಗರಿಂದ ಪಕ್ಷದಲ್ಲಿ ಅಶಿಸ್ತು ಬಂತು ಎಂಬ ಹೇಳಿಕೆ ಕೊಟ್ಟ ಈಶ್ವರಪ್ಪ ವಿಚಾರದಲ್ಲಿ ಪಕ್ಷ ಮತ್ತು ಪಕ್ಷದ ನಾಯಕರು ಮೌನವಾಗಿರುವುದು ವಲಸಿಗರ ಅಸಮಧಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಈಶ್ವರಪ್ಪ ಸಹ ಇದ್ದ ವೇದಿಕೆಯಲ್ಲೇ ಸಿದ್ದರಾಮಯ್ಯ ಅವರನ್ನು ಹೊಗಳುವ ಮೂಲಕ ಶಾಸಕ ಸೋಮಶೇಖರ್ ಈಶ್ವರಪ್ಪನವರಿಗೆ ಕೌಂಟರ್ ಕೊಟ್ಟಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ YST ಜೊತೆ VST ಟ್ಯಾಕ್ಸ್ , ಇದು VST ಸರ್ಕಾರ: ರವಿಕುಮಾರ್ ಕಿಡಿ
Web Stories