ಬೆಂಗಳೂರು: ಇಂದು ಎರಡನೇ ಹಂತದಲ್ಲಿ ಆರ್.ಆರ್ ನಗರ ಮತ್ತು ಯಶವಂತಪುರ ಕ್ಷೇತ್ರಗಳನ್ನ ಒಳಗೊಂಡ ಜನಸ್ಪಂದನಾ ಕಾರ್ಯಕ್ರಮ ನಡೆಯುತ್ತಿದ್ದು, ಈ ವೇಳೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಹಾಗೂ ಸಂಸದ ಡಿಕೆ ಸುರೇಶ್‍ಗೆ (DK Suresh) ಎಸ್.ಟಿ ಸೋಮಶೇಖರ್ (ST Somashekar) ಅಭಿನಂದನೆ ಸಲ್ಲಿಸಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ಬಿಪಿಎಡ್ ಗ್ರೌಂಡ್ ನಲ್ಲಿ ನಡೆಯುತ್ತಿರೋ ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್‍ಟಿಎಸ್, ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಜನಸ್ಪಂದನಾ ಕಾರ್ಯಕ್ರಮ ನಡೆಯುತ್ತಿದೆ. ಜನಸ್ಪಂದನಾದಲ್ಲಿ ಸಲ್ಲಿಕೆಯಾಗದ ಅರ್ಜಿಗೆ ಉತ್ತರ ಸಿಕ್ತಿದೆ ಅಂತಾ ಗೊತ್ತಾಗ್ತಿದೆ. ಎಲ್ಲಾ ಕಡೆ ಇದೇ ಉತ್ತರ ಸಿಕ್ತಿದೆ. ನಿಜಕ್ಕೂ ಜನಸ್ಪಂದನಾ ಕಾರ್ಯಕ್ರಮ ಒಳ್ಳೆದಾಗ್ತಿದೆ ಎಂದರು.
Advertisement
Advertisement
ನನ್ನ ಕ್ಷೇತ್ರದಲ್ಲಿ ಕಸದ ಘಟಕಗಳ ಸಮಸ್ಯೆ ಇತ್ತು ಅದನ್ನ ಬಗೆಹರಿಸಿದ್ದಾರೆ. ಬಜೆಟ್‍ನಲ್ಲಿ ಕಸದ ಘಟಕಗಳನ್ನು ಬದಲಾವಣೆ ಮಾಡಿದ್ದಾರೆ. ಅದಕ್ಕೆ ಡಿ.ಕೆ ಶಿವಕುಮಾರ್ ಗೆ ಅಭಿನಂದನೆ ಸಲ್ಲಿಸುತ್ತೇನೆ. ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಿದ್ದಾರೆ. ಕನಕಪುರದ ನೈಸ್ ಜಂಕ್ಷನ್ ನಲ್ಲಿ ನಾಲ್ಕು ರಸ್ತೆಗಳನ್ನ ಮಾಡುವ ಕೆಲಸವನ್ನ ಡಿ.ಕೆ ಸುರೇಶ್ ಅವರು ಮಾಡಿದ್ದಾರೆ. ಹೀಗಾಗಿ ಅವರಿಗೂ ಧನ್ಯವಾದ ಸಲ್ಲಿಸುತ್ತೆನೆ ಎಂದು ಹೇಳಿದರು. ಇದನ್ನೂ ಓದಿ: ಟಾಪ್ 5 ಸಿಎಂಗಳ ಪೈಕಿ ಯೋಗಿ ಆದಿತ್ಯನಾಥ್‌ಗೆ 2 ನೇ ಸ್ಥಾನ- ಮೊದಲನೇಯವರು ಯಾರು?
Advertisement
Advertisement
ಕೆಂಪೇಗೌಡ ಬಡಾವಣೆಯಲ್ಲಿ ಕುಡಿಯುವ ನೀರು, ಯುಜಿಟಿ ಮಾಡಿಸಬೇಕಿದೆ. 40% ಸೈಟ್ ವಿತರಣೆ ಆಗಬೇಕಿದೆ. ಹೇರೋಹಳ್ಳಿಯಲ್ಲಿ ಅಕ್ರಮವಾಗಿ ಲೇ ಔಟ್ ಮಾಡ್ತಾ ಇದ್ದಾರೆ ಅದರ ಬಗ್ಗೆ ಗಮನ ಹರಿಸಬೇಕಿದೆ. ಕೆಂಗೇರಿ ಬ್ರಿಡ್ಜ್ ಭಾರೀ ವೀಕ್ ಆಗಿದೆ, ಅದನ್ನ ಸರಿಪಡಿಸಿ ಅಂತಾ ಬಜೆಟ್ ಅಲ್ಲಿ ಕೊಟ್ಟಿದ್ದೇನೆ. ಕುಡಿಯುವ ನೀರಿನ ಘಟಕಗಳು ತರುವ ಕೆಲಸ ಪ್ರಾಮಾಣಿಕವಾಗಿ ಮಾಡ್ತಾ ಇದ್ದೇವೆ. 100ಕ್ಕೆ 99 ಘಟಕಗಳು ನಿಂತು ಹೋಗಿವೆ. ಯಾಕೆ ಥರ ಇಲ್ಲಿಗಲ್ ಆಗಿ ಮಾಡುತ್ತಿದ್ದೀರಿ. ಘಟಕಗಳ ನಿರ್ಮಾಣದಲ್ಲಿ ನಮ್ಮ ಅಭಿಪ್ರಾಯ ತಗೋಳ್ತಾ ಇಲ್ಲ. ಅಂತಹ ದುರಹಂಕಾರದಲ್ಲಿ ಅಧಿಕಾರಿಗಳು ಇದ್ದಾರೆ. ನಾನು ಎಂಜಿನಿಯರ್ ಇದ್ದೇನೆ ಯಾವ ಜನಪ್ರತಿನಿಧಿ ಅಭಿಪ್ರಾಯ ಬೇಡ ಅಂತಾರಂತೆ. ದಯವಿಟ್ಟು ಗಮನ ಹರಿಸಬೇಕಿದೆ ಎಂದು ಇದೇ ವೇಳೆ ಎಸ್‍ಟಿಎಸ್ ಮನವಿ ಮಾಡಿಕೊಂಡರು.