ಹಾವೇರಿ: ಅಂಬಿಗರ ಸಮಾಜಕ್ಕೆ (Ambiga Community) ಪರಿಶಿಷ್ಟ ವರ್ಗದ ಮೀಸಲಾತಿ (ST Community) ನೀಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಸಮಾಜದ ಬೇಡಿಕೆಯನ್ನು ಈಡೇರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು.
Advertisement
ತಾಲೂಕಿನ ನರಸೀಪುರದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 5ನೇ ಶರಣ ಸಂಸ್ಕೃತಿ ಉತ್ಸವ ಹಾಗೂ 903ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪರಿಶಿಷ್ಟ ವರ್ಗದ ಮೀಸಲಾತಿಯಡಿ ಪರಿಗಣಿಸಲು ಈಗಾಗಲೇ ಪ್ರಕ್ರಿಯೆಗಳು ಅಂತಿಮ ಚರಣದಲ್ಲಿದೆ. ಪೂರ್ಣ ಚರಣ ಮಾಡಲು ಪ್ರಯತ್ನಿಸಲಾಗುವುದು. ಇದಕ್ಕೆ ಸಂಬAಧಿಸಿದAತೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ. ಕೇಂದ್ರದ ಕಾನೂನು ಇಲಾಖೆ ಕೆಲವು ಸ್ಪಷ್ಟೀಕರಣ ಕೇಳಿದೆ. ಇದನ್ನು ರಾಜ್ಯದಿಂದ ಒದಗಿಸಲಾಗಿದೆ. ಎಲ್ಲಾ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿವೆ ಎಂದು ತಿಳಿಸಿದರು.
Advertisement
Advertisement
5 ಕೋಟಿ ಅನುದಾನ:
ಅಂಬಿಗರ ಸಮಾಜದ ಆರ್ಥಿಕ ಶೈಕ್ಷಣಿಕ ಧಾರ್ಮಿಕ ಬೆಳವಣಿಗೆಗೆ ಶ್ರಮಿಸುತ್ತಿರುವ ಅಂಬಿಗರ ಚೌಡಯ್ಯನವರ ಮಠದ ಬೆಳವಣಿಗೆಗೆ ಬಾಕಿ ಉಳಿದಿರುವ 5 ಕೋಟಿ ರೂ. ಶೀಘ್ರವೇ ಬಿಡುಗಡೆ ಮಾಡಲಾಗುವುದು. ಮಠಕ್ಕೆ 10 ಕೋಟಿ ರೂ. ಅನುದಾನ ಘೋಷಿಸಲಾಗಿದ್ದು, ಈಗಾಗಲೇ 5 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ಕಳೆದ ಬಾರಿ 2 ಕೋಟಿ ರೂ. ಅನುದಾನವನ್ನು ಘೋಷಿಸಲಾಗಿತ್ತು. ಎಲ್ಲಾ ಅನುದಾನವನ್ನು ಮಠದ ಬೆಳವಣಿಗೆಗೆ ನೀಡಲಾಗುವುದು. ಗಂಗಾಮತದ ಜಿಲ್ಲಾ ಸಮುದಾಯ ಭವನಕ್ಕೆ ಈ ಬಜೆಟ್‌ನಲ್ಲಿ ಅನುದಾನ ಒದಗಿಸಲಾಗುವುದು ಎಂದು ಘೋಷಿಸಿದರು. ಇದನ್ನೂ ಓದಿ: ವಂದೇ ಭಾರತ್ ರೈಲಿನ ರಚನೆ ವಿಮಾನಕ್ಕಿಂತಲೂ ಚೆನ್ನಾಗಿದೆ: ಅಶ್ವಿನಿ ವೈಷ್ಣವ್
Advertisement
ಮಕ್ಕಳಿಗೆ ಶಿಕ್ಷಣ ಕೊಡಿಸಿ:
ಕಾಲ ಬದಲಾಗಿದೆ, ಇಂದು ಜ್ಞಾನದ ಶತಮಾನದಲ್ಲಿದ್ದೇವೆ. ಶಿಕ್ಷಣ ಮತ್ತು ಜ್ಞಾನವಂತರಾದರೆ ಮಾತ್ರ ಸಮಕಾಲೀನ ಸವಾಲನ್ನು ಎದುರಿಸಲು ಸಾಧ್ಯ. ಮಕ್ಕಳ ವಿದ್ಯಾಭ್ಯಾಸವನ್ನು ನಿಲ್ಲಿಸಬೇಡಿ. ಮಕ್ಕಳನ್ನು ಶಿಕ್ಷಣವಂತರನ್ನಾಗಿಸಿ. ಒಂದು ಕಾಲದಲ್ಲಿ ಭೂಮಿ ಇದ್ದವರು ಜಗತ್ತನ್ನು ಆಳುತ್ತಿದ್ದರು. ನಂತರ ಹಣ ವ್ಯಾಪಾರ ಮಾಡುತ್ತಿದ್ದವರು ಜಗತ್ತನ್ನು ಆಳಲು ಆರಂಭಿಸಿದರು. ಆದರೆ ಇಂದಿನ 21ನೇ ಶತಮಾನ ಜ್ಞಾನ ಯುಗದಲ್ಲಿದೆ. ಶಿಕ್ಷಣ ಪಡೆದವರು, ಜ್ಞಾನಾರ್ಜನೆ ಮಾಡಿದವರು ಮಾತ್ರ ಜಗತ್ತನ್ನು ಆಳುತ್ತಿದ್ದಾರೆ ಎಂದರು. ಇದನ್ನೂ ಓದಿ: RSS ಸಂವಿಧಾನ ವಿರೋಧಿ ಸಂಸ್ಥೆ, ಯಾವತ್ತೂ ಅವರು ಸಂವಿಧಾನ ಗೌರವಿಸಿಲ್ಲ- ಸಿದ್ದು ಸಿಡಿಮಿಡಿ
12ನೇ ಶತಮಾನದಲ್ಲಿ ವಚನ ಸಾಹಿತ್ಯವನ್ನು ಸುಡುವ ಪ್ರಯತ್ನವನ್ನು ದುಷ್ಟ ಶಕ್ತಿಗಳು ಮಾಡಿದ್ದವು. ಆಗ ಚೌಡಯ್ಯನವರು ಅವುಗಳನ್ನು ದೋಣಿಯಲ್ಲಿಟ್ಟುಕೊಂಡು ವಚನಗಳನ್ನು ದಡಕ್ಕೆ ಸೇರಿಸಿದರು. ಹೀಗಾಗಿ ವಚನಗಳು ಇಂದಿಗೂ ಜೀವಂತವಾಗಿವೆ. ಇದಕ್ಕೆ ನಿಜಶರಣ ಅಂಬಿಗರ ಚೌಡಯ್ಯನವರು ಕಾರಣರಾಗಿದ್ದಾರೆ ಎಂದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k