ವಿಜಯಪುರ: ಐತಿಹಾಸಿಕ ಜಿಲ್ಲೆ ವಿಜಯಪುರಕ್ಕೆ ಮತ್ತೊಂದು ಗರಿ ಬಂದಿದೆ. ಪ್ರಥಮ ಬಾರಿಗೆ ವಿಜಯಪುರ ಜಿಲ್ಲೆಯ ಬಾಲಕಿ ಸುಪ್ರಿಯಾ ಜೋಶಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ.
ಮೊದಲು ಸುಪ್ರಿಯಾಗೆ ಗಣಿತ 3 ಮತ್ತು ಆಂಗ್ಲ ಭಾಷೆಯಲ್ಲಿ 3 ಅಂಕಗಳು ಕಡಿಮೆ ಬಂದಿತ್ತು. ಇದರಿಂದ ನೊಂದುಕೊಂಡಿದ್ದ ಸುಪ್ರಿಯಾ ಪಾಲಕರ ಹಾಗೂ ಶಿಕ್ಷಕರ ಮಾರ್ಗದರ್ಶನ ಪಡೆದು ಮರು ಮೌಲ್ಯಮಾಪನಕ್ಕೆ ಹಾಕಿದ್ದಳು. ಮರು ಮೌಲ್ಯಮಾಪನದಲ್ಲಿ ಸುಪ್ರಿಯಾಗೆ ಗಣಿತಕ್ಕೆ 3 ಮತ್ತು ಆಂಗ್ಲ ಭಾಷೆಯಲ್ಲಿ 3 ಅಂಕಗಳು ಮರಳಿ ಬಂದಿದ್ದು, ಈಗ ಸುಪ್ರಿಯಾ 625 ಅಂಕಕ್ಕೆ 625 ಅಂಕ ಪಡೆದು ಜಿಲ್ಲೆಯಲ್ಲಿ ಇತಿಹಾಸ ಸೃಷ್ಟಿಸಿದ್ದಾಳೆ.
Advertisement
Advertisement
ಈ ಸಾಧನೆಯಿಂದ ಜಿಲ್ಲೆಗೆ ಮತ್ತೊಂದು ಗರಿ ಬಂದಂತೆ ಆಗಿದ್ದು, ಶಿಕ್ಷಣ ಇಲಾಖೆ ಅಧಿಕಾರಿಗಳು ಸೇರಿದಂತೆ ಜಿಲ್ಲೆಯೇ ಸಂಭ್ರಮ ಪಡುತ್ತಿದೆ. ಡಿಡಿಪಿಐ ಪ್ರಸನ್ನ ಕುಮಾರ್ ಅವರು ಸುಪ್ರಿಯಾ ಮನೆಗೆ ಭೇಟಿ ನೀಡಿ ಶಾಲು ಹೊದಿಸಿ, ಸಿಹಿ ತಿನಿಸಿ ಶುಭಾಶಯ ಕೋರಿದ್ದಾರೆ. ಅಲ್ಲದೇ ಸುಪ್ರಿಯಾ ಯಾವ ಶಾಲೆಯಲ್ಲಿ ಕಲಿಕೆ ಮುಂದುವರಿಸುತ್ತಾಳೋ ಆ ಕಾಲೇಜಿನ ಶುಲ್ಕವನ್ನು ಭರಿಸುತ್ತೇವೆ ಎಂದು ತಿಳಿಸಿದ್ದಾರೆ.
Advertisement
ಆನೇಕಲ್‍ನ ಸೆಂಟ್ ಫಿಲೋಮಿನಾ ಹೈ ಸ್ಕೂಲ್‍ನ ಡಿ. ಸೃಜನಾ, ಹಾಸನ ನಗರದ ವಿಜಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪ್ರಗತಿ ಎಂ. ಗೌಡ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಕೊಂಕಣ ಶಾಲೆಯ (ಸಿವಿಎಸ್ ಕೆ ಹೈಸ್ಕೂಲ್) ವಿದ್ಯಾರ್ಥಿನಿ ನಾಗಾಂಜಲಿ ಪರಮೇಶ್ವರ ನಾಯ್ಕ 625 ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ಸ್ಥಾನಗಳನ್ನು ಪಡೆದುಕೊಂಡಿದ್ದರ. ಈಗ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳ ಪಟ್ಟಿಗೆ ಸುಪ್ರಿಯಾ ಜೋಷಿ ಸ್ಥಾನ ಪಡೆದಿದ್ದಾಳೆ.