ದಾವಣಗೆರೆ: ಬ್ಲಡ್ ಕ್ಯಾನ್ಸರ್‌ನಿಂದ ಬಳಲಿದ್ದ ನಗರದ (Davanagere) ನಿಟ್ಟುವಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಎಸ್ಎಸ್ಎಲ್‌ಸಿ (SSLC Result) ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದು, ಇಡೀ ರಾಜ್ಯದ ಜನರ ಮನಸ್ಸನ್ನು ಗೆದ್ದಿದ್ದಾಳೆ.
ವಿದ್ಯಾರ್ಥಿನಿ ಶಾಂತ ನಿಟ್ಟುವಳ್ಳಿಯ ನಿವಾಸಿಯಾಗಿದ್ದು, 9 ನೇ ತರಗತಿಯ ಅರ್ಧವಾರ್ಷಿಕ ಪರೀಕ್ಷೆ ಸಂದರ್ಭದಲ್ಲಿ ಆಕೆಗೆ ಬ್ಲಡ್ ಕ್ಯಾನ್ಸರ್ ಇದೆ ಎನ್ನುವುದು ಗೊತ್ತಾಗಿತ್ತು. ತಂದೆ ಗಾರೆ ಕೆಲಸ ಮಾಡುತ್ತಿದ್ದರೆ, ತಾಯಿ ಕೂಲಿ ಕೆಲಸ ಮಾಡಿ ಮಕ್ಕಳನ್ನು ಸಾಕುತ್ತಿದ್ದರು. ಮಗಳಿಗೆ ಆರೋಗ್ಯ ಸಮಸ್ಯೆ ಎದುರಾದಾಗ ಸಾರ್ವಜನಿಕರು ಹಾಗೂ ಶಿಕ್ಷಕರ ಸಹಕಾರದಿಂದ 13 ಲಕ್ಷ ರೂ. ಖರ್ಚು ಮಾಡಿ ಗುಣಮಖ ಮಾಡಿದ್ದರು. ಇದನ್ನೂ ಓದಿ: ಚೆನ್ನೈಗೆ ಬಂದು ಶ್ರೀಲಂಕಾಗೆ ಹೋದ್ರಾ ಪಹಲ್ಗಾಮ್ ಉಗ್ರರು? – ಶ್ರೀಲಂಕಾ ಏರ್‌ಪೋರ್ಟಲ್ಲಿ ತಪಾಸಣೆ
ಆರೋಗ್ಯ ಸಮಸ್ಯೆ ಇದ್ದರೂ ಓದಿನ ಕಡೆಗೆ ಸಾಕಷ್ಟು ಗಮನಹರಿಸಿದ್ದ ವಿದ್ಯಾರ್ಥಿನಿ, ಓದಿನಲ್ಲಿ ಬಹಳ ಮುಂದಿದ್ದಳು. ಏನಾದರೂ ಗೊಂದಲ ಇದ್ದರೆ ಶಿಕ್ಷಕರಿಗೆ ಕರೆ ಮಾಡಿ ಪರಿಹರಿಸಿಕೊಂಡು ಅಭ್ಯಾಸ ಮಾಡುತ್ತಿದ್ದಳು. ಈ ಬಾರಿ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತೆಗೆದುಕೊಳ್ಳಬೇಕು ಎಂಬ ಪಣ ತೊಟ್ಟಿದ್ದ ಶಾಂತ, ಆರೋಗ್ಯದ ಸಮಸ್ಯೆಯನ್ನು ಲೆಕ್ಕಿಸದೇ ಓದಿ 94% ಪಡೆದುಕೊಂಡಿದ್ದಾಳೆ.
ಒಂದು ವರ್ಷ ಶಾಲೆಗೆ ಗೈರಾಗಿ ಕಾಯಿಲೆಯಿಂದ ಗುಣಮುಖಳಾಗಿ ಈ ಸಾಧನೆ ಮಾಡಿದ್ದು, ಗ್ರಾಮಸ್ಥರು ಹಾಗೂ ಜಿಲ್ಲೆಯ ಜನ ವಿದ್ಯಾರ್ಥಿನಿಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನೆಲಮಂಗಲ | ಆಟೋಗೆ KSRTC ಬಸ್ ಡಿಕ್ಕಿ – ಮೂವರು ಸಾವು