ಬೆಂಗಳೂರು: ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಮೊರಟಗಿ ಗ್ರಾಮದಲ್ಲಿ ಗಣಿತ ಪ್ರಶ್ನೆ ಪತ್ರಿಕೆ ಲೀಕ್ ಆಗಿಲ್ಲ. ಶಿಕ್ಷಕರೊಬ್ಬರು ಪ್ರಶ್ನೆ ಪತ್ರಿಕೆ ಫೋಟೋ ವಾಟ್ಸಪ್ ನಲ್ಲಿ ಹಾಕಿಕೊಂಡಿದ್ದರಿಂದ ಗೊಂದಲ ಸೃಷ್ಟಿಯಾಗಿದೆ ಎಂದು ಶಿಕ್ಷಣ ಇಲಾಖೆ ಆಯುಕ್ತ ಜಾಫರ್ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ್ದಾರೆ.
ಪರೀಕ್ಷೆ ಆರಂಭವಾದ ಒಂದು ಗಂಟೆಯ ಬಳಿಕ ಶಿಕ್ಷಕ ಪತ್ರಿಕೆ ಫೋಟೋಗಳನ್ನು ವಾಟ್ಸಪ್ ನಲ್ಲಿ ಹಾಕಿಕೊಂಡಿದ್ದಾರೆ. ತಪ್ಪಿತಸ್ಥ ಶಿಕ್ಷಕನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಈ ಸಂಬಂಧ ಡಿಡಿಪಿಐ ಪ್ರಸನ್ನ ಸಹ ಸಿಂಧಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಮುಂದಿನ ಕ್ರಮ ತೆಗೆದುಕೊಳ್ಳಲಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ ಆಗಿಲ್ಲ, ಮರು ಪರೀಕ್ಷೆಯನ್ನು ನಡೆಸಲ್ಲ, ಹಾಗಾಗಿ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗೋದು ಬೇಡ ಎಂದು ಜಾಫರ್ ತಿಳಿಸಿದ್ದಾರೆ.
Advertisement
Advertisement
ಮೊರಟಗಿ ಕಲ್ಪವೃಕ್ಷ ಶಿಕ್ಷಣ ಸಂಸ್ಥೆಯಲ್ಲಿ ಗಣಿತ ಪತ್ರಿಕೆ ಸೋರಿಕೆಯಾದ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಡಿಡಿಪಿಐ ಪ್ರಸನ್ನ ಪರಿಶೀಲನೆ ನಡೆಸಿದ್ದರು. ತಮ್ಮ ಬಳಿಯ ಪ್ರತಿ ಮತ್ತು ವಾಟ್ಸಪ್ ಪ್ರತಿಯೊಂದಿಗೆ ತುಲನೆ ಮಾಡಿದಾಗ ಪ್ರಶ್ನೆ ಪತ್ರಿಕೆ ಹೋಲಿಕೆ ಆಗಿತ್ತು. ಮೊರಟಗಿ ಪರೀಕ್ಷಾ ಕೇಂದ್ರಕ್ಕೆ ಬಿಇಓ ಆಗಮಿಸಿ ಸಿಬ್ಬಂದಿಯಿಂದ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ.