ಬೆಂಗಳೂರು: ವಿದ್ಯಾರ್ಥಿ ಜೀವನದ ಟರ್ನಿಂಗ್ ಪಾಯಿಂಟ್ ಎಂದು ಹೇಳಲಾಗುವ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಶುಕ್ರವಾರದಿಂದ ಪ್ರಾರಂಭವಾಗಲಿದೆ.
ಮಾರ್ಚ್ 23ರಿಂದ ಏಪ್ರಿಲ್ 4ರವರೆಗೆ ಪರೀಕ್ಷೆಗಳು ನಡೆಯಲಿದ್ದು, ಮೊದಲ ದಿನವಾದ ಶುಕ್ರವಾರ ಪ್ರಥಮ ಭಾಷೆಯ ವಿಷಯಗಳ ಪರೀಕ್ಷೆ ನಡೆಯಲಿವೆ. ಈ ಬಾರಿ 8 ಲಕ್ಷದ 54 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಇದ್ರಲ್ಲಿ ವಿದ್ಯಾರ್ಥಿಗಳ 4 ಲಕ್ಷದ 56 ಸಾವಿರ ಬಾಲಕರು ಹಾಗೂ 3 ಲಕ್ಷದ 98 ಸಾವಿರ ಬಾಲಕಿಯರು ಇದ್ದಾರೆ.
Advertisement
ರಾಜ್ಯಾದ್ಯಂತ 2,817 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಇವುಗಳಲ್ಲಿ 45 ಸೂಕ್ಷ್ಮ ಕೇಂದ್ರಗಳು, 23 ಅತಿ ಸೂಕ್ಷ್ಮ ಕೇಂದ್ರಗಳಾಗಿವೆ. ಎಲ್ಲಾ ಕೇಂದ್ರಗಳಿಗೂ ಸಿಸಿಟಿಟಿ ಕ್ಯಾಮೆರಾ ಅಳವಡಿಸಲಾಗಿದೆ. ಪರೀಕ್ಷಾ ಸಿಬ್ಬಂದಿಗೂ ಮೊಬೈಲ್ ಫೋನ್ ನಿಷೇಧಿಸಲಾಗಿದೆ.